ರಾಜ್ಯ

ಆಶ್ರಮ, ವೃದ್ದಾಶ್ರಮಗಳಿಗೆ ಹಿಂದಿನ ಸರ್ಕಾರದಲ್ಲಿಯೇ ಆಹಾಧಾನ್ಯ ನಿಂತಿತ್ತು: ಸಚಿವೆ ಶಶಿಕಲಾ ಜೊಲ್ಲೆ

Raghavendra Adiga

ಬೆಂಗಳೂರು: ಆಶ್ರಮಗಳು, ವೃದ್ಧಾಶ್ರಮಗಳು, ಉಚಿತ ಊಟ ವಸತಿ ನೀಡುವ ಸಂಘ ಸಂಸ್ಥೆಗಳಿಗೆ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಆಹಾರ ಧಾನ್ಯ ಪೂರೈಕೆ ಸ್ಥಗಿತಗೊಂಡಿತ್ತು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರದಲ್ಲಿ ಜಾರಿಯಾಗಿದ್ದ ದಾಸೋಹ ಕಾರ್ಯಕ್ರಮವನ್ನು ಅದೇ ಸರ್ಕಾರ ಸ್ಥಗಿತಗೊಳಿಸಿತ್ತು. ಆದರೆ ಈ ಕುರಿತು ಮಾಜಿ ಸಚಿವ ಯು ಟಿ ಖಾದರ್ ಮಾಡಿರುವ ಆರೋಪ ಆಧಾರರಹಿತ ಎಂದರು.

ರಾಜ್ಯದ 464 ಆಶ್ರಮಗಳು, ವೃದ್ಧಾಶ್ರಮಗಳು, ಸಂಘ, ಸಂಸ್ಥೆಗಳಿಗೆ ಅಕ್ಕಿ, ಗೋದಿ ಪೂರೈಕೆ ಮಾಡಲಾಗುತ್ತಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಕ್ಕಿ, ಗೋದಿ ಪೂರೈಕೆ ನಿಂತಿದೆ ಎಂಬ ಖಾದರ್ ಆರೋಪ ಸುಳ್ಳು. ತಾವು ಸಚಿವೆ ಆಗುವುದಕ್ಕಿಂತ ಮುನ್ನವೇ ಆಹಾರ ಧಾನ್ಯ ಪೂರೈಕೆ ನಿಂತಿತ್ತು ಎಂದರು.

ದಾಸೋಹ ಕಾರ್ಯಕ್ರಮಕ್ಕಾಗಿ ವಾರ್ಷಿಕ 12.50 ಕೋಟಿ ರೂ ವೆಚ್ಚವಾಗುತ್ತಿತ್ತು. ವಿವಿಧ ಮಠಗಳು, ಮತ್ತು ಸಂಘ ಸಂಸ್ಥೆಗಳು ಮನವಿ ಮೇರೆಗೆ ಅಕ್ಕಿ ಗೋಧಿ ಕೊಡಲು ಮುಂದಾಗುತ್ತೇವೆ. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚಿಸಿ ಆಹಾರ ಧಾನ್ಯಗಳ ಪೂರೈಕೆಗೆ ಕ್ರಮಕೈಗೊಂಡು ಮಠಗಳು, ಸಂಘ ಸಂಸ್ಥೆಗಳಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

SCROLL FOR NEXT