ರಾಜ್ಯ

ಹೊಸಪೇಟೆ: ಮಠಾದೀಶರ ಮಧ್ಯಸ್ಥಿಕೆಯಲ್ಲಿ ಮಾಲ್ವಿ ಜಲಾಶಯ ಕಗ್ಗಂಟು ಪರಿಹಾರ

Lingaraj Badiger

ಹೊಸಪೇಟೆ: ಕಳೆದ ಎರಡು ವರ್ಷಗಳಿಂದ ಬಗೆಹರಿಯದೆ ಕಗ್ಗಂಟಾಗಿ ಪರಿಣಮಿಸಿದ್ದ ಮಾಲ್ವಿ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆ ಕೊನೆಗೂ ಮಠಾದೀಶರ ಮಧ್ಯಸ್ಥಿಕೆಯಲ್ಲಿ ಬಗೆಹರಿದಿದೆ.

ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ರಾಜವಾಳ ಗ್ರಾಮದ ಬಳಿಯ ತುಂಗಭದ್ರ ನದಿಯಿಂದ ಮಾಲವಿ ಜಲಾಶಯಕ್ಕೆ ನೀರು ತುಂಬಿಸಲು ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲಿ ಚಾಲನೆ ನೀಡಲಾಗಿತ್ತು. ಆದರೆ ರಾಜವಾಳ ಗ್ರಾಮದ ಬಳಿಯಲ್ಲಿ ಜಾಕ್ವೆಲ್ ನಿರ್ಮಿಸಲು ಅಲ್ಲಿನ ಗ್ರಾಮಸ್ಥರು ವಿರೋಧಿಸಿದ್ದರು. ಹಾಗಾಗಿ ಕಳೆದ ವರ್ಷವೇ ನಿರ್ಮಾಣವಾಗಬೇಕಿದ್ದ ಜಾಕ್ವೆಲ್ ಗೆ ಇದುವರೆಗೆ ಭೂಮಿ ಪೂಜೆ ಕೂಡ ನೆರವೇರಿದ್ದಿಲ್ಲ. ಇನ್ನು ಗ್ರಾಮಸ್ಥರ ಬೇಡಿಕೆಗೆ ಸಂಸದ ದೇವೇಂದ್ರಪ್ಪ ಕೂಡ ಬೆಂಬಲಿಸಿ ಕಾಮಗಾರಿಗೆ ತಡೆಯೊಡ್ಡಿದ್ದರು. ಆದರೆ ನಿನ್ನೆ ನಂದೀಪುರ ದೊಡ್ಡ ಬಸವೇಶ್ವರ ಮಠದ ಶ್ರೀಗಳು ಮತ್ತು ಕೊಟ್ಟೂರು ಚಾನೇಕೊಟಿ ಮಠದ ಶ್ರೀ ಸೇರಿದಂತೆ ಎಂಟಕ್ಕೂ ಹೆಚ್ಚು ಮಠಾದೀಶರು ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ನೇತೃತ್ವದಲ್ಲಿ ರಾಜವಾಳ ಗ್ರಾಮಕ್ಕೆ ಬೇಟಿ‌ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಜಾಕ್ವಲ್ ನಿಂದ ಉಂಟಾಗುವ ಸಮಸ್ಯೆಯನ್ನ ಆಲಿಸಿದರು. ಜಾಕ್ವೆಲ್ ನಿರ್ಮಾಣದಿಂದ ಗ್ರಾಮದ ಸ್ಮಶಾನಕ್ಕೆ ಸ್ಥಳಾವಕಾಶ ಇಲ್ಲದಂತಾಗುವುದನ್ನ ಅರಿತ ಶಾಸಕ ಭೀಮಾನಾಯ್ಕ್ ಗ್ರಾಮಸ್ಥರ ಬೇಡಿಕೆಯಂತೆ ಒಂದು ಎಕ್ಕರೆ ಜಾಗವನ್ನ ಸ್ಮಶಾನಕ್ಕೆ ಜಿಲ್ಲಾಡಳಿತದಿಂದ ಕೊಡಿಸುವ ಭರವಸೆಯನ್ನ ನೀಡಿದರು. ಅಲ್ಲದೆ ಗ್ರಾಮಸ್ಥರ ಇನ್ನೊಂದು ಬೇಡಿಕೆಯಾಗಿದ್ದ ದೇವಸ್ಥಾನ ಕಟ್ಟಡಕ್ಕೂ ಕೂಡ ನೆರವು ನೀಡುವ ಭರವಸೆ ನೀಡಿದ ನಂತರ ಗ್ರಾಮಸ್ಥರು ಜಾಕ್ವೆಲ್ ನಿರ್ಮಾಣಕ್ಕೆ ಅನುಮತಿ ನೀಡಿದರು. 

ಕಳೆದ ಎರಡು ವರ್ಷಗಳಿಂದ ಬಗೆಹರಿಯದೇ ಇದ್ದ ಸಮಸ್ಯಯನ್ನ ಮಠಾದೀಶರು ಮುಂದಾಳತ್ವದಿಂದ ಬಗೆ ಹರಿದಿದ್ದು ಹಗರಿಬೊಮ್ಮನಹಳ್ಳಿ ತಾಲೂಕಿಗೆ ಜೀವ ಜಲ ನೀಡಿದ ಕೀರ್ತಿ ಇಲ್ಲಿನ ಮಠಾದೀಶರಿಗೆ ಮತ್ತು ಶಾಸಕ ಭೀಮಾನಯ್ಕೆ ಗೆ ಸಲ್ಲುತ್ತದೆ. ಬೇಸಿಗೆ ಬಂತೆಂದ್ರೆ ಸಾಕು ಟ್ಯಾಂಕರ್ ಮೂಲಕ ನೀರು ಹರಿಸುವ ಪರಿಸ್ಥಿತಿ ಇಂದಿಗೂ ಹಗರಿಬೊಮ್ಮನಹಳ್ಳಿ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಇದೆ. ಈ ಮಾಲ್ವಿ ಜಲಾಶಯಕ್ಕೆ ನೀರು ತುಂಬಿದರೆ ಇಂತ ಎಲ್ಲಾ ಸಮಸ್ಯಗಳು ಕಣ್ಮರೆಯಾಗಲಿವೆ. ಕಳೆದ ಐವತ್ತು ವರ್ಷಗಳಿಂದ ಇಲ್ಲಿನ ರೈತರು ಮತ್ತು ಹೋರಾಟಗಾರರು ನಡೆಸಿದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ.

SCROLL FOR NEXT