ಸಾಂದರ್ಭಿಕ ಚಿತ್ರ 
ರಾಜ್ಯ

ಬೆಳಗಾವಿ: ಸೇತುವೆ ಮೇಲಿಂದ ಟ್ರ್ಯಾಕ್ಟರ್ ಪಲ್ಟಿ, 7 ಮಂದಿ ದುರ್ಮರಣ, ಹಲವರಿಗೆ ಗಾಯ

ಸೇತುವೆ ಮೇಲಿಂದ  ಟ್ರ್ಯಾಕ್ಟರ್ ಪಲ್ಟಿಯಾಗಿ ಬಿದ್ದು ಸುಮಾರು  7 ಜನ‌ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ  ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ: ಸೇತುವೆ ಮೇಲಿಂದ  ಟ್ರ್ಯಾಕ್ಟರ್ ಪಲ್ಟಿಯಾಗಿ ಬಿದ್ದು ಸುಮಾರು  7 ಜನ‌ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ  ಬೆಳಗಾವಿಯಲ್ಲಿ ನಡೆದಿದೆ.

ಕೂಲಿ ಕೆಲಸಕ್ಕೆ ಕಾರ್ಮಿಕರನ್ನು ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್ ಒಂದು ಬೋಗೂರ ಗ್ರಾಮದ ಬಳಿಯ  ಸೇತುವೆ ಮೇಲಿಂದ ಉರುಳಿ ಬಿದ್ದ ಪರಿಣಾಮ ಬೋಗೂರ ಗ್ರಾಮದ ಸಾವಿತ್ರಿ ಬಾಬು ಹುಣಸಿಕಟ್ಟಿ, ತಂಗೆವ್ವ ಯಲ್ಲಪ್ಪ ಹುಣಸೀಕಟ್ಟಿ, ಅಶೋಕ ಫಕೀರ ಕೇದಾರಿ, ಶಾಂತಮ್ಮ ಯಲ್ಲಪ್ಪ ಜುಂಜರಿ, ಶಾಂತವ್ವ ಹನುಮಂತ ಅಳಗುಂಡಿ, ನಾಗವ್ವ ಯಶವಂತ ಮಾಠೋಳ್ಳಿ ಎಂಬುವರು ಸಾವನ್ನಪ್ಪಿದ್ದಾರೆ.

ಖಾನಾಪುರ ತಾಲೂಕಿನ ಬೋಗೂರ ಗ್ರಾಮದಿಂದ ಕಾರ್ಮಿಕರು ಕೂಲಿ ಕೆಲಸಕ್ಕೆ ಇಟಗಿಗೆ ಹೊರಟಿದ್ದರು. ವೇಗವಾಗಿ ಹೊರಟಿದ್ದ ಟ್ರ್ಯಾಕ್ಟರ್ ಸುಮಾರು 30 ಅಡಿ ಎತ್ತರದ ಸೇತುವೆ ಮೇಲಿಂದ ಪಲ್ಟಿಯಾಗಿದೆ.‌ ಟ್ರ್ಯಾಕ್ಟರ್ ನ ಟ್ರಾಲಿ ಕಾರ್ಮಿಕರ ಮೈಮೇಲೆ ಬಿದ್ದಿದೆ.‌ ಸ್ಥಳದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. 

ಆಸ್ಪತ್ರೆಗೆ ಸಾಗಿಸುವಾಗ ಮೂವರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

'The Kerala Story 2: Goes Beyond' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

ನೀವು ಪಡೆದ IMF ಬೇಲ್ಔಟ್‌ಗಿಂತ 2 ಪಟ್ಟು ಹೆಚ್ಚು; ಜಾಗಬಿಟ್ಟು ಹೋಗುವುದೇ ಪಾಕ್​ಗಿರುವ ಒಂದೇ ಆಯ್ಕೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ!

SCROLL FOR NEXT