ಸಿದ್ದರಾಮಯ್ಯ 
ರಾಜ್ಯ

ಮೀಸಲಾತಿ ಕದನ: ಪ್ರತಿಭಟನೆ ಬೆದರಿಕೆ ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ

ಎಸ್ಸಿ,ಎಸ್ಟಿಗೆ ಸರ್ಕಾರಿ ಉದ್ಯೋಗ, ಬಡ್ತಿಯಲ್ಲಿ ಮೀಸಲು ಕಡ್ಡಾಯವಲ್ಲ, ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂಕೋರ್ಟ್ ತೀರ್ಪು ರಾಜಕೀಯ ಬಿರುಗಾಳಿ ಎಬ್ಬಿಸಿದೆ. 

ಬೆಂಗಳೂರು: ಎಸ್ಸಿ,ಎಸ್ಟಿಗೆ ಸರ್ಕಾರಿ ಉದ್ಯೋಗ, ಬಡ್ತಿಯಲ್ಲಿ ಮೀಸಲು ಕಡ್ಡಾಯವಲ್ಲ, ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂಕೋರ್ಟ್ ತೀರ್ಪು ರಾಜಕೀಯ ಬಿರುಗಾಳಿ ಎಬ್ಬಿಸಿದೆ. 

ಸುಪ್ರೀಂಕೋರ್ಟ್ ಆದೇಶ ಸಂವಿಧಾನದ ಮೂಲ ತತ್ವಗಳಿಗೆ ಹಾಗೂ ಸಾಮಾಜಿಕ ನ್ಯಾಯ ತತ್ವಕ್ಕೆ ವಿರುದ್ಧವಾಗಿರುವುದರಿಂದ ಕೂಡಲೇ ಕೇಂದ್ರ ಸರ್ಕಾರ ತೀರ್ಪು ಪ್ರಶ್ನಿಸಿ ಪುನರ್ ಪರಿಶೀಲನಾ ಅರ್ಜಿ ಅಥವಾ ಸಂವಿಧಾನದ ಪೂರ್ಣ ಪೀಠಕ್ಕೆ ಮೇಲ್ಮನವಿ ಸಲ್ಲಿಸಬೇಕು. ಕೇಂದ್ರ ಸರ್ಕಾರ ಆಸಕ್ತಿ ತೋರಿಸದೇ ಇದ್ದರೆ, ಉಗ್ರ ಹೋರಾಟ ನಡೆಸುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಎಚ್ಚರಿಸಿದ್ದಾರೆ. 

ತೀರ್ಪಿನ ಸಂಬಂಧ ಅಗತ್ಯ ಬಿದ್ದರೆ, ಪ್ರಧಾನಮಂತ್ರಿಗಳು ಶಾಸನ ತಿದ್ದುಪಡಿ ಮಾಡಲಿ. ಜೊತೆಗೆ ಸರ್ವಪಕ್ಷಗಳ ಸಭೆ ಕರೆಯಲಿ ಸರ್ಕಾರಿ ವಕೀಲರು ಸರಿಯಾಗಿ ವಾದ ಮಾಡಿಲ್ಲ. ಇದು ಬಿಜೆಪಿಯ ಹುನ್ನಾರ ಇರಬಹುದು ಎಂದು ಸಂಶಯ ವ್ಯಕ್ತಪಡಿಸಿದರು. 

ಆಡಳಿತಾರೂಢ ಪಕ್ಷದ ವ್ಯಕ್ತಿಯೊಬ್ಬರು ಸಂವಿಧಾನವನ್ನು ಸುಡುವುದಾಗಿ ಹೇಳಿದ್ದಾರೆ. ಈ ಹೇಳಿಕೆಯನ್ನು ಮತ್ತೊಬ್ಬ ನಾಯಕರು ಸ್ಪಷ್ಟನೆ ನೀಡುತ್ತಾರೆ. ಯಡಿಯೂರಪ್ಪ ಅವರು ಎದೆ ಮುಟ್ಟಿ ಹೇಳಲಿ, ಒಬ್ಬೊಬ್ಬ ಶಾಸಕನಿಗೂ ಎಷ್ಟು ಖರ್ಚು ಮಾಡಿದ್ದಾರೆಂದು. ಇಂತಹ ವ್ಯಕ್ತಿಗಳನ್ನಿಟ್ಟುಕೊಂಡು ಯಡಿಯೂರಪ್ಪ ಅವರು ಎಷ್ಟರ ಮಟ್ಟಿಗೆ ಉತ್ತಮ ಆಡಳಿತ ನೀಡಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!