ರಾಜ್ಯ

ಬೆಂಗಳೂರು: ಶಂಕಿತ ವೇಶ್ಯಾವಾಟಿಕೆ ದಂಧೆಯಿಂದ  ಮಹಿಳೆಯ ರಕ್ಷಣೆ

Raghavendra Adiga

ಬೆಂಗಳೂರು: ಶಂಕಿತ ಮಾಂಸ ದಂಧೆಯನ್ನು ಪತ್ತೆ ಹಚ್ಚಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಅಧಿಕಾರಿಗಳು ಸೋಮವಾರ ಇಂಡಿಗೊ ವಿಮಾನದ ಮೂಲಕ ಚಂಡೀಘರ್ ನಿಂದ ಆಗಮಿಸಿದ್ದ 35 ವರ್ಷದ ಮಹಿಳೆಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರಕ್ಷಿಸಿದ್ದಾರೆ. 

ಈ ಸಂಬಂಧ ಮಹಿಳೆಯೊಡನೆ ಬಂದ ಇನ್ನೋರ್ವ ಮಹಿಳೆಯನ್ನು ಬಂಧಿಸಲಾಗಿದೆ. ಉನ್ನತ ಮೂಲವೊಂದರ ಪ್ರಕಾರ, ಸಂಜೆ 4.20ರ ಸುಮಾರು ಸಂತ್ರಸ್ಥೆ ಝಾನ್ಸಿ (ಹೆಸರು ಬದಲಿಸಿದೆ)ಶಟಲ್ ಬಸ್ ಅವಳನ್ನು ಟರ್ಮಿನಲ್ಗೇಟ್‌ಗೆ ಕರೆತಂದ ಕೂಡಲೇ ಕರ್ತವ್ಯದಲ್ಲಿದ್ದ ಸಿಐಎಸ್ಎಫ್ ಕಾನ್‌ಸ್ಟೆಬಲ್‌ ಬಳಿ ಧಾವಿಸಿ, ಅವಳಿಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾಳೆಕಾನ್‌ಸ್ಟೆಬಲ್ ತಕ್ಷಣವೇ ಉಸ್ತುವಾರಿ ಸಿಐಎಸ್ಎಫ್ ಇನ್ಸ್‌ಪೆಕ್ಟರ್‌ಗೆ ಕರೆ ಕಳಿಸಿದ್ದು ಅವರು ಒಂದೆರಡು ಮಹಿಳಾ ಕಾನ್‌ಸ್ಟೆಬಲ್‌ಗಳೊಂದಿಗೆ ಗೇಟ್ ತಲುಪಿದರುಝಾನ್ಸಿ ನವದೆಹಲಿ ಮೂಲದವರಾಗಿದ್ದು, ಅವರೊಂದಿಗೆ ಇನ್ನೋರ್ವ ಯುವತಿ ಅಮೃತ (ಹೆಸರು ಬದಲಾಯಿಸಲಾಗಿದೆ)  ಇದ್ದಳು.ದೆಹಲಿಯ ಪ್ರಮುಖ ಕಾರ್ಯಗಳಲ್ಲಿ ಅವರು ನೃತ್ಯಹಾಗೂ ಸಂಗೀತವನ್ನು ಪ್ರದರ್ಶಿಸುತ್ತಿದ್ದರು.

ರು. "ದೆಹಲಿಯಲ್ಲಿ ಲೈಂಗಿಕ ವ್ಯಾಪಾರದಲ್ಲಿ ತೊಡಗಿರುವ ಕೆಲವು ಮಹಿಳೆಯರ ಕೈಗೆ ಈಕೆ ಸಿಕ್ಕಿದ್ದಳು.ತನ್ನ ಜೊತೆಯಲ್ಲಿರುವ ಮಹಿಳೆ ಆ ದಂಧೆಯ ಭಾಗವಾಗಿದ್ದಳುಆ ದಂಧೆಕೋರರು ಅಮೃತ ಜತೆಯಾಗಿ ಝಾನ್ಸಿಯನ್ನು ಬೆಂಗಳೂರಿಗೆ ಕಳಿಸಿದ್ದರು ಆದರೆ ಝಾನ್ಸಿಗೆ ತಾನು ಸಿಕ್ಕಿರುವ ವ್ಯೂಹದ ಬಗೆಗೆ ಭಯವಿತ್ತು.ಅವರು ಅವಳನ್ನು ಲೈಂಗಿಕ ವ್ಯಾಪಾರಕ್ಕೆ ತಳ್ಳುತ್ತಾರೆ ಎಂಬ ಆತಂಕದಲ್ಲಿದ್ದಳು.ದೆಹಲಿಯಲ್ಲಿರುವ ತನ್ನ ಕುಟುಂಬವನ್ನು ಹೇಗಾದರೂ ತಲುಪಲು ಸಹಾಯ ಮಾಡುವಂತೆ ಆಕೆ ತಮ್ಮನ್ನು ಕೇಳಿಕೊಂಡಿದ್ದಳು"ಅಧಿಕಾರಿಗಳು ವಿವರಿಸಿದ್ದಾರೆ.

ಈ ವಿಷಯವು ಮಾನವ ಕಳ್ಳಸಾಗಣೆಗೆ ಸಂಬಂಧಿಸಿದ್ದರಿಂದ, ಸಿಐಎಸ್ಎಫ್ ಸಿಬ್ಬಂದಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರು"ಸಂಜೆ 7.30 ರ ಸುಮಾರಿಗೆ ಸಹಾಯಕ ಪೊಲೀಸ್ ಆಯುಕ್ತ ಸುಬ್ರಮಣಿಯನ್ ವಿಮಾನ ನಿಲ್ದಾಣಕ್ಕೆ ಬಂದು ಝಾನ್ಸಿ ಮತ್ತು ಅಮೃತ ಇಬ್ಬರನ್ನೂ  ಹೆಚ್ಚಿನ ವಿಚಾರಣೆಗಾಗಿ ಠಾಣೆಗೆ ಕರೆದೊಯ್ದರು." ಎಂದು ಮೂಲಗಳು ತಿಳಿಸಿವೆ."ಅವಳು ವಿಮಾನದೊಳಗಿದ್ದಾಗ ತಾನು ದಂಧೆಯಲ್ಲಿ ಸಿಕ್ಕಿದ್ದೇನೆಂದು ಆಕೆಗೆ ಅರಿವಾಗಿದೆ.  ಅಮೃತ ವಿರುದ್ಧ ಮಾನವ ಕಳ್ಳಸಾಗಣೆ ಆರೋಪಕ್ಕೆ ಎಫ್‌ಐಆರ್ ಸಿದ್ಧಪಡಿಸಲಾಗುತ್ತಿದೆ. ದೆಹಲಿಯ ಝಾನ್ಸಿಯನ್ನು  ದೆಹಲಿಯಲ್ಲಿರುವ ಅವರ ಕುಟುಂಬದವರಿಗೆ ತಲುಪಿಸಲು  ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ”ಎಂದು ಈಶಾನ್ಯ ಉಪ ಪೊಲೀಸ್ ಆಯುಕ್ತ ಭೀಮಶಂಕರ್ ಗುಲೇಡ್ ಹೇಳೀದ್ದಾರೆ.

SCROLL FOR NEXT