ರೇವತಿ- ನಿಖಿಲ್ 
ರಾಜ್ಯ

ನಿಖಿಲ್-ರೇವತಿ ವಿವಾಹದಿಂದ ಮತ್ತಷ್ಟು ಗಟ್ಟಿಯಾಗಲಿದೆ ಜೆಡಿಎಸ್-ಕಾಂಗ್ರೆಸ್ ಬಂಧ!

ರಾಜಕೀಯ ವಿವಾಹಗಳು ಸಂಬಂಧಗಳನ್ನು ಬೆಸೆಯಲು ಕಾರಣವಾಗುತ್ತವೆ ಎಂಬುದನ್ನು ಕೇಳಿದ್ದೇವೆ, ರೇವತಿ- ನಿಖಿಲ್ ಕುಮಾರ್ ವಿವಾಹ ಕೂಡ ಇದೇ ರೀತಿಯಲ್ಲಿ ಸಾಗುತ್ತಿದೆ.

ಬೆಂಗಳೂರು:  ರಾಜಕೀಯ ವಿವಾಹಗಳು ಸಂಬಂಧಗಳನ್ನು ಬೆಸೆಯಲು ಕಾರಣವಾಗುತ್ತವೆ ಎಂಬುದನ್ನು ಕೇಳಿದ್ದೇವೆ, ರೇವತಿ- ನಿಖಿಲ್ ಕುಮಾರ್ ವಿವಾಹ ಕೂಡ ಇದೇ ರೀತಿಯಲ್ಲಿ ಸಾಗುತ್ತಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಾಧ್ಯತೆ ಇರಲಿ, ಇಲ್ಲದಿರಲಿ, ಆದರೆ ನಿಖಿಲ್ ರೇವತಿ  ವಿವಾಹ ಎಲ್ಲಾ ಮದುವೆಗಳ ತಾಯಿಯಂತಾಗುವುದರಲ್ಲಿ ಯಾವುದೇ ಸಂಶಯವಿಲ್ಲ,  ರೇವತಿ-ನಿಖಿಲ್ ವಿವಾಹಕ್ಕೆ ಇನ್ನೂ ಕೇವಲ 62 ದಿನ ಮಾತ್ರ ಬಾಕಿ ಉಳಿದಿದೆ, ಕನಸಿನ ಮದುವೆಗಾಗಿ ಎಲ್ಲಾ ರೀತಿಯ ಸಿದ್ಧತೆ ಆರಂಭವಾಗಿದೆ, 

ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ 57 ಎಕರೆ ಜಮೀನು ಕಲ್ಯಾಣ ಮಂಟಪವಾಗಿ ಬದಲಾಗುತ್ತಿದೆ. ಬೆಂಗಳೂರಿನಿಂಗ ಸುಮಾರು ಒಂದೂವರೆ ಗಂಟೆ ಪ್ರಯಾಣಿಸಿದರೇ ಈ ಸ್ಥಳ ಸಿಗುತ್ತದೆ, ಆದರೆ ಇಲ್ಲಿ ಯಾವುದೇ ಟ್ರಾಫಿಕ್ ಸಮಸ್ಯೆ ಇರುವುದಿಲ್ಲ.

ಇನ್ನೂ ಮದುವೆ ಸ್ಥಳದಲ್ಲಿ ವಿವಿಐಪಿ ಗ್ಯಾಲಕ್ಸಿ ಧರೆಗಿಳಿಯಲಿದೆ.  ಏಕೆಂದರೇ ವಧು-ವರರ ಎರಡು ಕುಟುಂಬಗಳು ರಾಜಕೀಯವಾಗಿ ಪ್ರಭಾವಿಶಾಲಿಗಳೇ, ವಿಐಪಿಗಳಿಗಾಗಿ 5 ಲಕ್ಷ ಆಹ್ವಾನ ಪತ್ರಿಕೆ ಮುದ್ರಣವಾಗುತ್ತಿವೆ,  ಈ ವಿವಾಹಕ್ಕೆ ರಾಜ್ಯದ ಉದ್ದ ಮತ್ತು ಅಗಲವಾಗಿ ಪ್ರತಿ ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಆಹ್ವಾನಿಸಲಾಗುತ್ತದೆ.

ಕೆಲ ದಿನಗಳ ಹಿಂದೆ ನಡೆದ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹಲವು ಪ್ರಮುಖರು ಹಾಜರಾಗಿದ್ದರು. ಇನ್ನೂ ವಿವಾಹ ಮಹೋತ್ಸವಕ್ಕೆ ರಾಷ್ಟ್ರೀಯ ನಾಯಕರು ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.  ಸ್ಟಾಲಿನ್, ಜಗಮೋಹನ್ ರೆಡ್ಡಿ, ಚಂದ್ರಬಾಬು ನಾಯ್ಡು ಸೇರಿದಂತೆ ಅನೇಕ ಗಣ್ಯರು ಪಾಲ್ಗೋಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮಮತಾ ಬ್ಯಾನರ್ಜಿ, ರಾಹುಲ್ ಗಾಂಧಿ ಸೇರಿದಂತೆ ಹಲವು ರಾಷ್ಚ್ರೀಯ ನಾಯಕರು ಮತ್ತು ಸ್ಯಾಂಡಲ್ ವುಡ್ ಕಲಾವಿದರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT