ರಾಜ್ಯ

ಕನ್ನಡ ಮಾತನಾಡಿದರೆ ದಂಡ ವಿಧಿಸುತ್ತಿದ್ದ ಶಾಲೆಯ ವಿರುದ್ಧ ಕ್ರಮಕ್ಕೆ ಶಿಕ್ಷಣ ಸಚಿವರಿಂದ ಸೂಚನೆ

Srinivasamurthy VN

ಬೆಂಗಳೂರು: ಶಾಲಾ ಆವರಣದಲ್ಲಿ ಕನ್ನಡ ಮಾತನಾಡಿದರೆ ವಿದ್ಯಾರ್ಥಿಗಳಿಗೆ 100ರೂ. ದಂಡ ವಿಧಿಸುತ್ತಿರುವ ಎಸ್.ಎಲ್.ಎಸ್. ಅಂತಾರಾಷ್ಟ್ರೀಯ ಗುರುಕುಲದ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಆದೇಶಿಸಿದ್ದಾರೆ.

ಚನ್ನಸಂದ್ರದಲ್ಲಿರುವ ಎಸ್ಎಲ್ ಎಸ್ ಅಂತಾರಾಷ್ಟ್ರೀಯ ಗುರುಕುಲ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಶಾಲಾ ಆವರಣದಲ್ಲಿ ಕನ್ನಡ ಮಾತನಾಡಿದರೆ ಅದನ್ನು ಅಪರಾಧ ಎಂದು ಪರಿಗಣಿಸಿ ಮೊದಲ ಬಾರಿಗೆ 50 ರೂ. ಹಾಗೂ ಇದು ಪುನರಾವರ್ತನೆಯಾದರೆ 100 ರೂ. ದಂಡ ವಿಧಿಸುವುದಾಗಿ ಶಾಲೆಯ ಆಡಳಿತ ಮಂಡಳಿ ಮಕ್ಕಳ ಪೋಷಕರಿಗೆ ಸೂಚನೆ ಪತ್ರ ಕಳಿಸಿದ್ದಾರೆ.

ಈ ಶಾಲೆಯು ಕನ್ನಡ ಕಲಿಕಾ ನಿಯಮವನ್ನು ಪೂರ್ಣವಾಗಿ ಉಲ್ಲಂಘಿಸಿರುವುದರಿಂದ ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸಲು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದು ಅವರ ಕೋರಿಕೆಯಂತೆ ಕ್ರಮ ವಹಿಸಲು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸೂಚಿಸಿದ್ದಾರೆ.

SCROLL FOR NEXT