ರಾಜ್ಯ

ರಾಜ್ಯದ 43 ಸಂಸ್ಕೃತ ಶಾಲೆಗಳಿಗೆ ಬಜೆಟ್ ನಲ್ಲಿ ಅನುದಾನ: ಡಿಸಿಎಂ ಅಶ್ವಥ ನಾರಾಯಣ 

Sumana Upadhyaya

ಬೆಂಗಳೂರು; ಮುಂಬರುವ ಬಜೆಟ್ ನಲ್ಲಿ ರಾಜ್ಯದ 43 ಸಂಸ್ಕೃತ ಶಾಲೆಗಳಿಗೆ ಸರ್ಕಾರ ಅನುದಾನ ನೀಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ ನಾರಾಯಣ ತಿಳಿಸಿದ್ದಾರೆ.


ಅವರು ನಿನ್ನೆ ಬೆಂಗಳೂರಿನ ಬೇಗೂರು ಬ್ರಾಹ್ಮಣ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ರಾಜ್ಯದಲ್ಲಿರುವ ಸಂಸ್ಕೃತ ಶಾಲೆಗಳು ಸರ್ಕಾರದ ಬೆಂಬಲವಿಲ್ಲದೆ ನಡೆಯುತ್ತಿದೆ. ಸರ್ಕಾರದಿಂದ ಹಣ ಕೊಡಿ ಎಂಬ ಬೇಡಿಕೆಗಳು ಬರುತ್ತಿವೆ. ಈ ಬಗ್ಗೆ ಪರಾಮರ್ಶೆ ನಡೆಸಲು ಸಮಿತಿಯೊಂದನ್ನು ರಚಿಸಲಾಯಿತು. ಸಮಿತಿ ಸದಸ್ಯರು 43 ಶಾಲೆಗಳನ್ನು ಪರಾಮರ್ಶೆ ನಡೆಸಿ ಶಿಫಾರಸು ಮಾಡಿದ್ದಾರೆ, ಇದರ ಆಧಾರದ ಮೇಲೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಕೂಡ ಆಗಿರುವ ಅಶ್ವಥ ನಾರಾಯಣ ಹೇಳಿದ್ದಾರೆ.


ತಜ್ಞರ ಶಿಫಾರಸು ಮೇರೆಗೆ ವೇದ, ಉಪನಿಷತ್ತು, ಸಂಸ್ಕೃತಗಳ ಅಧ್ಯಯನಕ್ಕೆ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು. ಇಷ್ಟೇ ಅಲ್ಲದೆ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಇವುಗಳಿಗೆ ಅಧ್ಯಯನ ಕೇಂದ್ರವನ್ನು ಸಹ ಸ್ಥಾಪಿಸಲಾಗುವುದು ಎಂದರು.

SCROLL FOR NEXT