ರಾಜ್ಯ

ಮಹಿಳೆಗೆ ಲೈಂಗಿಕ ಕಿರುಕುಳ: ಕೆಎಸ್ಆರ್`ಟಿಸಿ ಬಸ್ ನಿರ್ವಾಹಕ ಅಮಾನತು!

Srinivasamurthy VN

ಬೆಂಗಳೂರು: ಮಹಿಳಾ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಕೆಎಸ್ಆರ್`ಟಿಸಿ ಬಸ್ ನಿರ್ವಾಹಕನನ್ನು ಅಮಾನತು ಮಾಡಲಾಗಿದೆ.

ಹೌದು.. ಕರ್ತವ್ಯದ ಸಮಯದಲ್ಲೇ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದ ನಿರ್ವಾಹಕನನ್ನು ಕೆಎಸ್ಆರ್‌ಟಿಸಿ ಅಮಾನತುಗೊಳಿಸಿದ್ದು, ಇಸಬು ಆಲಿ ತಲ್ಲೂರು ಅಮಾನತುಗೊಂಡ ನಿರ್ವಾಹಕನಾಗಿದ್ದಾನೆ. ಮೂಲಗಳ ಪ್ರಕಾರ ಬೆಂಗಳೂರಿನಿಂದ ಪುತ್ತೂರಿಗೆ ತೆರಳುತ್ತಿದ್ದ ಬಸ್ಸಿನಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಹಾಸನದಿಂದ ಪುತ್ತೂರಿಗೆ ಹೊರಟಿದ್ದರು. ಈ ವೇಳೆ ಟಿಕೆಟ್ ನೀಡುವ ನೆಪದಲ್ಲಿ ಕಂಡಕ್ಟರ್ ಮಹಿಳೆಯ ಪಕ್ಕದಲ್ಲಿ ಬಂದು ಕೂತಿದ್ದನು. ನಂತರ ಪಕ್ಕದಲ್ಲಿ ಕೂತಿದ್ದ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸುವುದಕ್ಕೆ ಶುರುಮಾಡಿದ್ದನು.

ಮಹಿಳೆ ಎಷ್ಟೇ ವಿರೋಧ ವ್ಯಕ್ತಪಡಿಸಿದ್ದರೂ ಕಂಡಕ್ಟರ್ ಮಾತ್ರ ಮಹಿಳೆಯ ಕೈ ಹಿಡಿದುಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ನಿರ್ವಾಹಕನಿಗೆ ತಿಳಿಯದಂತೆ ಮೊಬೈಲಿನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಕಂಡಕ್ಟರ್ ವರ್ತನೆಗೆ ಅಕ್ರೋಶ ವ್ಯಕ್ತಪಡಿಸಿದ್ದರು.

ಬಹಿರಂಗ ಪಡಿಸಿದರೆ ಮಾನ ಹರಾಜು ಬೆದರಿಕೆ
ಇನ್ನು ಕಾಮಚೇಷ್ಠೆ ಬಗ್ಗೆ ಹೇಳಿಕೊಂಡರೆ ನಿನ್ನ ಮರ್ಯಾದೆಯನ್ನು ಮೂರು ಖಾಸಿಗೆ ಹರಾಜು ಹಾಕುವುದಾಗಿ ಮಹಿಳೆಗೆ ಇಸಬು ಆಲಿ ತಲ್ಲೂರು ಬೆದರಿಕೆ ಹಾಕಿದ್ದ. ಬೆದರಿಕೆ ತಂತ್ರಕ್ಕೆ ಹೆದರದ ಮಹಿಳೆ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಕಾಮುಕ ನಿರ್ವಾಹಕನ ವಿರುದ್ಧ ಕೇಸ್ ದಾಖಲಿಸಿದ್ದರು. ಕಾಮಕ ನಿರ್ವಾಹಕನ ಕುಚೇಷ್ಟೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕೆಎಸ್ಆರ್‌ಟಿಸಿ ಆಡಳಿತ ಮಂಡಳಿ ಆರೋಪಿ ಇಸಬು ಆಲಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. 

ಕಾಮುಕ ನಿರ್ವಾಹಕನಿಗೆ ಸಾರ್ವಜನಿಕ ಥಳಿತ
ಇದೇ ವೇಳೆ ಕಾಮುಕ ನಿರ್ವಾಕನನ್ನು ಸಾರ್ವಜನಿಕರು ಥಳಿಸಿದ್ದಾರೆ. ಮಹಿಳೆ ತನಗಾದ ದೌರ್ಜನ್ಯವನ್ನು ಪರಿಚಯಸ್ಥರೊಂದಿಗೆ ಹೇಳಿಕೊಂಡಿದ್ದು, ಇದನ್ನು ಕೇಳಿದ ಆಕೆಯ ಸ್ನೇಹಿತರು ನಿರ್ವಾಹಕ ಇಸಬು ಆಲಿ ತಲ್ಲೂರು ಥಳಿಸಿದ್ದಾರೆ. ಈ ಸಂಬಂಧ ನಿರ್ವಾಹಕ ಇಸಬು ಆಲಿ ತಲ್ಲೂರು ಕೂಡ ಮಹಿಳೆ ಮತ್ತು ಆಕೆಯ ಸ್ನೇಹಿತರು ಸಂಬಂಧಿಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

SCROLL FOR NEXT