ರಾಜ್ಯ

ಇಂದಿನಿಂದ ಜಂಟಿ ಅಧಿವೇಶನ: ಗೋಲಿಬಾರ್, ದೇಶದ್ರೋಹ ಕೇಸ್ ಹಿಡಿದು ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಸಜ್ಜು

Manjula VN

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ಮೊಟ್ಟ ಮೊದಲ ವಿಧಾನಮಂಡಲದ ಜಂಟಿ ಅಧಿವೇಶನ ಸೋಮವಾರದಿಂದ ಆರಂಭಗೊಳ್ಳಲಿದೆ. 

ಇನ್ನೂ ಬಗೆಹರಿಯದ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯವೆಂಬ ಕೆಂಡವನ್ನು ಮಡಿಲಿನಲ್ಲಿ ಇಟ್ಟುಕೊಂಡೇ ಮಂಗಳೂರು, ಗೋಲಿಬಾರ್, ನೆರೆ ಪರಿಸ್ಥಿತಿ ನಿಭಾಯಿಸುವಲ್ಲಿನ ವೈಫಲ್ಯ, ದೇಶದ್ರೋಹ ಪ್ರಕರಣಗಳ ಹೆಸರಿನಲ್ಲಿ ಪೊಲೀಸ್, ವ್ಯವಸ್ಥೆ ದುರುಪಯೋಗ ಹಾಗೂ ರಾಜ್ಯ ಸರ್ಕಾರವನ್ನು ಕೇದ್ರ ಸರ್ಕಾರ ಕಡೆಗಣಿಸುತ್ತಿದೆ ಎಂದು ಆರೋಪಿಸಿ ಬಲ ಪ್ರತಿರೋಧಕ್ಕೆ ಸಜ್ಜಾಗಿರುವ ಪ್ರತಿಪಕ್ಷಗಳನ್ನು ಎದುರಿಸುವ ಕಠಿಣ ಸವಾಲನ್ನು ಯಡಿಯೂರಪ್ಪ ಅವರು ಎದುರಿಸಬೇಕಿದೆ. 

ಸರ್ಕಾರವು ವಾಡಿಕೆಯಂತೆ ಜನವರಿಯಲ್ಲಿದೇ ವಿಧಾನಮಂಡಲ ಜಂಟಿ ಅಧಿವೇಶನವನ್ನು ನಡೆಸಬೇಕಿತ್ತು. ಆದರೆ, ಡಯಿರೂಪ್ಪ ಅವರು ವಿಶ್ವ ಆರ್ಥಿಕ ಒಕ್ಕೂಟದ ಸಮಾವೇಶದಲ್ಲಿ ಭಾಗವಿಸುವ ಕಾರಣ ನೀಡಿ ಜ.20ರಿಂದ 30ರವರೆಗೆ ನಿಗದಿಯಾಗಿದ್ದ ಅಧಿವೇಶನವನ್ನು ಮುಂದೂಡಲಾಗಿತ್ತು. ಹೀಗಾಗಿ ವರ್ಷದ ಮೊದಲ ಅಧಿವೇಶನ ಸೋಮವಾರ ಪ್ರಾರಂಭವಾಗಲಿದ್ದು, ಫೆ.20ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ. 

ಮೊದಲಿಗೆ ವಿಧಾನಸಭೆ ಹಾಗೂ ಪರಿಷತ್ ನ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲ ವಿ.ಆರ್.ವಾಲಾ ಭಾಷಣ ಮಾಡಿಲಿದ್ದು, ಸರ್ಕಾರ ಕಾರ್ಯಕ್ರಮಗಳನ್ನು ಜನತೆ ಮುಂದೆ ತೆರೆದಿಡಲಿದ್ದಾರೆ. ಸರ್ಕಾರದ ಮುಂದಿನ 1 ವರ್ಷದ ನಡೆ ಹಾಗೂ ಯೋಜನೆಗಳನ್ನು ಪ್ರಸ್ತಾಪಿಸಲಿದ್ದಾರೆ. 

15ನೇ ವಿಧಾನಸಭೆಯ ಆರನೇ ಅಧಿವೇಶನದ ಆರಂಭಕ್ಕೆ ಭಾಷಣದ ಮೂಲಕ ಅಡಿಗಲ್ಲು ಹಾಕಲಿರುವ ರಾಜ್ಯಪಾಲರನ್ನು ಸ್ವಾಗತಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ಸಿದ್ಧತೆ ಮಾಡಿಕೊಂಡಿದ್ದಾರೆ. 

ರಾಜ್ಯಪಾಲರ ಭಾಷಣದ ಬಳಿಕ ಅದರ ಪ್ರತಿಯನ್ನು ಸಬೆಯಲ್ಲಿ ಮಂಡಿಸಿ, 15 ನಿಮಿಷಗಳ ಕಾಲ ಕಲಾಪ ಮುಂದೂಡಲಾಗುವುದು. ಬಳಿಕ ವಿಧಾನಸಭೆ ಹಾಗೂ ವಿಧಾನಪರಿಷತ್ ಪ್ರತ್ಯೇಕವಾಗಿ ಮರು ಸಮಾವೇಶಗೊಳ್ಳಲಿದೆ. ಈ ವೇಳೆ ಕಳೆದ ಅಧಿವೇಶನದಲ್ಲಿ ವರದಿಯನ್ನು ಒಪ್ಪಿಸಿದ ನಂತರ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಸಬೆಯ ಮುಂದೆ ಮಂಡಿಲಸಲಾಗುವುದು ಬಳಿಕ ಸಂತಾಪ ಸೂಚನೆ ನಿರ್ಣ ಮಂಡಿಸಿ ಮಂಗಳವಾರಕ್ಕೆ ಕಲಾಪ ಮುಂದೂಡುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ. 

SCROLL FOR NEXT