ಬೆಂಗಳೂರು: ಮದುವೆ ಛತ್ರದಿಂದಲೇ ಚಿನ್ನಾಭರಣವಿದ್ದ ಓಮ್ನಿ ಕದ್ದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಬಸವ ಭವನದಲ್ಲಿ ನಡೆದಿದೆ.
ವರ, ಸಹೋದರನ ಚಿನ್ನಾಭರಣ ಸಮೇತ ಓಮ್ನಿ ಕದ್ದು ದುಷ್ಕರ್ಮಿಗಳು ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಂಗಳೂರು ಉತ್ತರ ತಾಲೂಕಿನ ಲಿಂಗ ಹಳ್ಳಿಯ ರವಿ ಅವರ ಓಮ್ನಿ ವಾಹನವಾಗಿದ್ದು, ಸೋದರ ಪ್ರವೀಣ್ ಮದುವೆ ಹಿನ್ನೆಲೆಯಲ್ಲಿ ಛತ್ರ ಕ್ಕೆ ಆಗಮಿಸಿದ್ದರು. ಊಟ ಮಾಡವುದಕ್ಕೆ ತೆರಳಬೇಕಾದ ಹಿನ್ನೆಲೆಯಲ್ಲಿ ಚಿನ್ನಾಭರಣವನ್ನು ಓಮ್ನಿಯಲ್ಲಿಟ್ಟು ಪಾರ್ಕಿಂಗ್ ಮಾಡಿದ್ದರು. ಊಟ ಮುಗಿಸಿಕೊಂಡು ವಾಪಸ್ಸಾದಾಗ ಓಮ್ನಿ ಆ ಸ್ಥಳದಲ್ಲಿ ಇರಲಿಲ್ಲ. ಹತ್ತಿರದಲ್ಲಿದ್ದ ಪರಿಶೀಲಿಸಿದಾಗ ಓಮ್ನಿ ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.