ಬೆಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಹಾಗೂ ಚರ್ಚ್ ಗಳಲ್ಲಿ ಕಳ್ಳತನ ಮಾಡುತ್ತಿದ್ದ ಕೇರಳ ಮೂಲದ ಮೂವರು ಆರೋಪಿಗಳನ್ನು ಆರ್'ಎಂಸಿ ಯಾರ್ಡ್ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಕೇರಳದ ಅಲೆಕ್ಸ್ (28, ದೀಪು ಪಾಜ್ (29) ಮತ್ತು ಮೊಹಮ್ಮದ್ ಮುಖ್ತಾರ್ (27) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಿಂದ 6.1 ಕೆಜಿ ಗಾಂಜಾ, 100 ಗ್ರಾಂ ಚಿನ್ನಾಭರಣವನ್ು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಹೊರಗಿನಿಂದ ಗಾಂಜಾ ತರಿಸಿಕೊಂಡು ಕಡಿಮೆ ಮೊತ್ತಕ್ಕೆಮಾರಾಟ ಮಾಡುತ್ತಿದ್ದರು. ಅಲ್ಲದೆ, ಈ ಹಿಂದೆ ಮಂಗಳೂರಿನ ಅಲೋಶಿಯಸ್ ಕಾಲೇಜಿನ ಬಳಿಯ ಚರ್ಚ್ ಮತ್ತು ಕೆಂಗೇರಿ ಉಪನಗರದ ಬೆಥೋಸ್ತಾ ಚರ್ಚ್ ನ ಬಾಗಿಲು ಮುರಿದು ಕಳವು ಮಾಡಿದ್ದರು. ನಗರದ ಕೆಎಲ್ಇ ಡೆಂಟಲ್ ಕಾಲೇಜಿನ ಹಿಂಭಾಗದಲ್ಲಿ ಆರೋಪಿಗಳು ಗಾಂಜಾ ಮಾರಾಟ ಮಾಡಲು ಯತ್ನಿಸುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.