ನೈಜ್ಯ ಫೋಟೋ 
ರಾಜ್ಯ

ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ಸರ್ಕಾರಿ ಶಾಲೆಯ ಗೋಡೆಯ ಮೇಲೆ ಪಾಕಿಸ್ತಾನ ಪರ ಬರಹ!

ಪಾಕಿಸ್ತಾನದ ಪರ ಮಹಿಳೆಯರಿಬ್ಬರು ಘೋಷಣೆ ಕೂಗಿರುವ ಪ್ರಕರಣ ದಾಖಲಾದ ಬೆನ್ನಲ್ಲೇ ಹುಬ್ಬಳ್ಳಿ ಗ್ರಾಮಾಂತರ ತಾಲ್ಲೂಕಿನ ಬುದರ್ ಸಿಂಗಿ ಗ್ರಾಮದ ಸರ್ಕಾರಿ ಶಾಲೆಯ ಗೋಡೆ, ಬಾಗಿಲುಗಳ ಮೇಲೂ ಪಾಕ್ ಪರ ಬರಹಗಳು ಕಂಡುಬಂದಿದ್ದು, ಕೆಲ ಕಾಲ ಆತಂಕದ ವಾತಾವರಣ ಕಂಡುಬಂದಿತ್ತು.

ಹುಬ್ಬಳ್ಳಿ: ಪಾಕಿಸ್ತಾನದ ಪರ ಮಹಿಳೆಯರಿಬ್ಬರು ಘೋಷಣೆ ಕೂಗಿರುವ ಪ್ರಕರಣ ದಾಖಲಾದ ಬೆನ್ನಲ್ಲೇ ಹುಬ್ಬಳ್ಳಿ ಗ್ರಾಮಾಂತರ ತಾಲ್ಲೂಕಿನ ಬುದರ್ ಸಿಂಗಿ ಗ್ರಾಮದ ಸರ್ಕಾರಿ ಶಾಲೆಯ ಗೋಡೆ, ಬಾಗಿಲುಗಳ ಮೇಲೂ ಪಾಕ್ ಪರ ಬರಹಗಳು ಕಂಡುಬಂದಿದ್ದು, ಕೆಲ ಕಾಲ ಆತಂಕದ ವಾತಾವರಣ ಕಂಡುಬಂದಿತ್ತು.

ಶಿಕ್ಷಕರು ಹಾಗೂ ಮಕ್ಕಳು ಇಂದು ಬೆಳಗ್ಗೆ ಶಾಲೆಗೆ ಆಗಮಿಸುತ್ತಿದ್ದಂತೆಯೇ ಬಾಗಿಲು, ಗೋಡೆಗಳ ಮೇಲೆ ‘ಟಿಪ್ಟು ಸುಲ್ತಾನ್ ಶಾಲೆ’, ‘ಪಾಕಿಸ್ತಾನ ಜಿಂದಾಬಾದ್‍’ ಎಂಬ ಬರಹಗಳನ್ನು ಕಂಡು ದಂಗಾದರು.

ಈ ವಿಷಯ ತಿಳಿಯುತ್ತಿದ್ದಂತೆಯೇ ದೇಶವಿರೋಧಿ ಬರಹಗಳನ್ನು ಬರೆದಿರುವ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ  ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟಿಸಿದರು.

“ವಿಷಯ ನಮ್ಮ ಗಮನಕ್ಕ ಬರುತ್ತಿದ್ದಂತೆಯೇ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಯಿತು. ಇವನ್ನೆಲ್ಲ ಯಾರು ಬರೆದಿರುಬಹುದು ಎಂಬ ವಿಚಾರ ವಿದ್ಯಾರ್ಥಿಗಳಿಗೂ ತಿಳಿದಿಲ್ಲ” ಎಂದು ಮುಖ್ಯ ಶಿಕ್ಷಕ ಎಂ ಎಸ್‍ ಹುಲಗೇರಿ ಹೇಳಿದ್ದಾರೆ.

ಸರ್ಕಾರಿ ಶಾಲೆಗೆ ಭೇಟಿ ನೀಡಿದ ಡಿವೈಎಸ್‍ ಪಿ ರವಿ ನಾಯಕ್‍ ಮತ್ತು ರಾಮನಗೌಡ ಹಟ್ಟಿ ಶಿಕ್ಷಕರೊಡನೆ ಮಾತುಕತೆ ನಡೆಸಿ, ಮುಂದಿನ ಕ್ರಮದ ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚೀನಾದ ರೋಬೋಟ್ ನಾಯಿ ವಿವಾದ: AI Summit expoದಿಂದ ಗಾಲ್ಗೋಟಿಯಾಸ್ ವಿವಿಗೆ ಸ್ಟಾಲ್ ತೆರವುಗೊಳಿಸಲು ಸೂಚನೆ-Video

ಮುಸ್ಲಿಂರಿಗೆ ನೀಡಲಾಗಿದ್ದ ಶೇ.5 ರಷ್ಟು ಮೀಸಲಾತಿ ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರ

T20 World Cup 2026: ಸೂಪರ್ 8 ಹಂತದ ಗ್ರೂಪ್ 1ರ ವೇಳಾಪಟ್ಟಿ ಪ್ರಕಟ; ಫೆಬ್ರುವರಿ 22ರಂದು ಭಾರತ- ದಕ್ಷಿಣ ಆಫ್ರಿಕಾ ಮುಖಾಮುಖಿ!

KRS–ಕಬಿನಿಯಲ್ಲಿ 52 ಟಿಎಂಸಿ ಅಡಿ ನೀರಿದ್ದು, ಈ ಬೇಸಿಗೆಯಲ್ಲಿ ಬೆಂಗಳೂರಿಗೆ ನೀರಿನ ಕೊರತೆ ಇಲ್ಲ: BWSSB

ಸ್ತನ ಹಿಡಿದು, ಪೈಜಾಮಾ ಬಿಚ್ಚುವುದು ಅತ್ಯಾಚಾರ ಯತ್ನವಲ್ಲ: ಅಲಹಾಬಾದ್ ಹೈಕೋರ್ಟ್‌ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

SCROLL FOR NEXT