ಬೆಂಗಳೂರು: ಖ್ಯಾತ ಕನ್ನಡ ನಿರೂಪಕ ಗಜಾನನ ಹೆಗಡೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಕನ್ನಡ ಮಾಧ್ಯಮ ಲೋಕದ ಹಿರಿಯ ಮತ್ತು ಅನುಭವಿ ಪತ್ರಕರ್ತರಲ್ಲೊಬ್ಬರಾದ ಗಜಾನನ ಹೆಗಡೆ ನಿಧನರಾಗಿದ್ದಾರೆ. ಈ ಟಿವಿ, ಪ್ರಜಾ ಟಿವಿ, ಕಸ್ತೂರಿ ಟಿವಿ ಸೇರಿದಂತೆ ಪ್ರಮುಖ ವಾಹಿನಿಗಳಲ್ಲಿ ಪ್ರಮುಖ ನಿರೂಪಕರಾಗಿ ಗಜಾನನ ಹೆಗಡೆ ಕಾರ್ಯ ನಿರ್ವಹಿಸಿದ್ದರು.
ಮೂಲಗಳ ಪ್ರಕಾರ ಗಜಾನನ ಹೆಗಡೆ ಅವರು ಇತ್ತೀಚೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದರು. ಅವರ ತಲೆಗೆ ಪೆಟ್ಟಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರ ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಗಜಾನನ ಅವರ ಅಕಾಲಿಕ ಮರಣಕ್ಕೆ ಕನ್ನಡ ಮಾಧ್ಯಮಲೋಕ ಕಂಬನಿ ಮಿಡಿದಿದೆ.