ರವಿ ಪೂಜಾರಿ 
ರಾಜ್ಯ

ಇಲ್ಲಿ ಕ್ರಿಮಿನಲ್, ಅಲ್ಲಿ ಸಮಾಜ ಸೇವಕ: ಸೆಲೆಗಲ್'ನಲ್ಲಿ ಸಮಾಜ ಸೇವೆ ಮಾಡಿ ಜನಮನ್ನಣೆ ಗಳಿಸಿದ್ದ ಭೂಗತ ಪಾತಕಿ ರವಿ ಪೂಜಾರಿ

ಭಾರತದ ಮಟ್ಟಿಗೆ ಭೂಗತ ಪಾತಕಿ, ಗ್ಯಾಂಗ್ ಸ್ಟರ್ ಆಗಿರುವ ರವಿ ಪೂಜಾರಿ ಸೆನಗಲ್ ನಲ್ಲಿ ಗಣ್ಯ ವ್ಯಕ್ತಿಯಾಗಿದ್ದ ರವಿ ಪೂಜಾರಿ ಸ್ಥಳೀಯವಾಗಿ ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿಲ್ಲ. ರೈತರು, ಬಡ ಜನರಿಗೆ ಪಂಪ್ ಸೆಟ್ ಹಾಕಿಸಿಕೊಡುತ್ತಿದ್ದ. ಈ ಎಲ್ಲಾ ಕಾರ್ಯಗಳನ್ನೂ ಬೇರೆಯವರ ಪ್ರಾಯೋಜಕತ್ವದಲ್ಲಿಯೇ ಮಾಡಿಸಿ ಜನಮನ್ನಣೆ ಗಳಿಸಿದ್ದ...

ಬೆಂಗಳೂರು: ಭಾರತದ ಮಟ್ಟಿಗೆ ಭೂಗತ ಪಾತಕಿ, ಗ್ಯಾಂಗ್ ಸ್ಟರ್ ಆಗಿರುವ ರವಿ ಪೂಜಾರಿ ಸೆನಗಲ್ ನಲ್ಲಿ ಗಣ್ಯ ವ್ಯಕ್ತಿಯಾಗಿದ್ದ ರವಿ ಪೂಜಾರಿ ಸ್ಥಳೀಯವಾಗಿ ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿಲ್ಲ. ರೈತರು, ಬಡ ಜನರಿಗೆ ಪಂಪ್ ಸೆಟ್ ಹಾಕಿಸಿಕೊಡುತ್ತಿದ್ದ. ಈ ಎಲ್ಲಾ ಕಾರ್ಯಗಳನ್ನೂ ಬೇರೆಯವರ ಪ್ರಾಯೋಜಕತ್ವದಲ್ಲಿಯೇ ಮಾಡಿಸಿ ಜನಮನ್ನಣೆ ಗಳಿಸಿದ್ದ. ಹೀಗಾಗಿ ಆರೋಪಿ ಆ ಸ್ಥಳದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಬೆಳೆದಿದ್ದ. 

ಆತನ ಬಗ್ಗೆ ಅಲ್ಲಿ ವಿಚಾರಿಸಿದರೆ, ಪ್ರತಿಯೊಬ್ಬರಿಂದಲೂ ಉತ್ತಮ ಪ್ರತಿಕ್ರಿಯೆಗಳೇ ವ್ಯಕ್ತವಾಗುತ್ತಿದ್ದವು. ಸಮಾಜಸೇವೆಗೇನು ಆತ ತನ್ನ ಕೈಯಿಂದ ಹಣ ಪಾವತಿಸುತ್ತಿರಲಿಲ್ಲ. ಬದಲಿಗೆ ಪ್ರಾಯೋಜಕರನ್ನು ಹಿಡಿದು ಕೆಲಸ ಮಾಡಿಸಿಕೊಡುತ್ತಿದ್ದ. 

ಸೆನೆಗಲ್, ಐವರಿ ಕೋಸ್ಟ್ ಮತ್ತು ಬುರ್ಕಿನಾ ಫಾಸೋದಲ್ಲಿ ಆರೋಪಿ ಉತ್ತರ ಭಾರತೀಯರ ಪಾಲುದಾರಿಕೆಯಲ್ಲಿ ಹೋಟೆಲ್ ಉದ್ಯಮ, ಟೆಕ್ಸ್ ಟೈಲ್ ಹಾಗೂ ವಿದ್ಯುತ್ ಉಪಕರಣ ಮಾರಾಟ ಮಾಡುವ ಉದ್ಯಮ ಹೊಂದಿದ್ದ. ಈ ಉದ್ಯಮಗಳಲ್ಲಿ ಒಳ್ಳೆಯ ಆದಾಯ ಪಡೆಯುತ್ತಿದ್ದ. ಪಾಲುದಾರಿಕೆಯಲ್ಲಿ ಮಹಾರಾಜ ಎಂಬ ಭಾರತೀಯ ರೆಸ್ಟೋರೆಂಟ್ ನಡೆಸುತ್ತಿದ್ದ. 

ಈ ರೆಸ್ಟೋರೆಂಟ್'ಗ ಆ ಪ್ರದೇಶದಲ್ಲಿ ಉತ್ತಮ ಸ್ಪಂದನೆ ಇದೆ. ಉತ್ತಮ ಶುಚಿ-ರುಚಿಯ, ಗುಣಮಟ್ಟದ ಆಹಾರ ನೀಡುತ್ತಾರೆಂದು ಅಲ್ಲಿನ ನಾಗರೀಕರು ಹೇಳುತ್ತಾರೆ. 

ಮೊದಲಿಗೆ ಈತನ ಬಗ್ಗೆ ಅಲ್ಲಿನ ನಾಗರೀಕರಲ್ಲಿ ಒಳ್ಳೆಯ ಅಭಿಪ್ರಾಯವಿತ್ತು. ಆದರೆ, ಈತನ ಬಂಧನಕ್ಕೆ ಯಾರೂ ಕೂಡ ಅಡ್ಡಿಪಡಿಸಲಿಲ್ಲ. ಬಂಧನಗ ಬಳಿಕ ಆರೋಪಿಯ ಅಸಲಿಯತ್ತು ಎಲ್ಲರಿಗೂ ತಿಳಿಯಿತು ಎಂದು ಎಡಿಜಿಪಿ ಅಮರ್ ಕುಮಾರ್ ಪಾಂಡೆ ವಿವರಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT