ರಾಜ್ಯ

ಉಪ ಕುಲಪತಿ ನೇಮಕಾತಿಯಲ್ಲಿ ಪಾರದರ್ಶಕ ಜಾರಿಗೆ ಶೀಘ್ರದಲ್ಲೇ ಕಾಯ್ದೆ ತಿದ್ದುಪಡಿ: ಡಿಸಿಎಂ

Manjula VN

ಕಲಬುರಗಿ: ಉಪ ಕುಲಪತಿಗಳ ನೇಮಕಾತಿಯಲ್ಲಿ ಪಾರದರ್ಶಕ ವ್ಯವಸ್ಥೆ ಜಾರಿಗೆ ತರಲು ಈಗಿರುವ ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆಗೆ ತಿದ್ದುಪಡಿ ತರಲು ಚಿಂತನೆ ನಡೆಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ. 

ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಬಳಿಕ ವಿಶ್ವವಿದ್ಯಾಲಯದ ವಾಚನಾಲಯದ ಮಂಥನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಕುಲಪತಿಗಳ ನೇಮಕಾತಿಯಲ್ಲಿ ಪಾರದರ್ಶಕ ವ್ಯವಸ್ಥೆ ಜಾರಿಗೆ ತರಲು ಈಗಿರುವ ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆಗೆ ತಿದ್ದುಪಡಿ ತರಲು ಚಿಂತನೆ ನಡೆಸಲಾಗಿದೆ. ಈ ಕುರಿತು ಅಧಿವೇಶನದ ಚರ್ಚೆ ವೇಳೆ ಪ್ರಸ್ತಾಪ ಮಾಡಲಾಗುತ್ತದೆ. ಆದರೆ, ಗುಲ್ಬರ್ಗಾ ವಿಶ್ವವಿದ್ಯಾಲಯದ ಉಪ ಕುಲಪತಿ ನೇಮಕಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಗುಲ್ಬರ್ಗಾ ವಿವಿ ಉಪಕುಲಪತಿಗಳ ಆಯ್ಕೆ ಕುರಿತ ಪ್ರಕ್ರಿಯೆ ತಿಂಗಳೊಳಗಾಗಿ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ. 

ವಿಶ್ವವಿದ್ಯಾಲಗಳಲ್ಲಿ ಬಹುತೇಕ ರಿಜಿಸ್ಟ್ರಾರ್ ಗಳೇ ಉಪನ್ಯಾಸರಾಗಿದ್ದಾರೆ. ಹೀಗಾಗಿ ಅವರ ಬದಲಿಗೆ ಕೆಎಎಸ್ ಅಧಿಕಾರಿಗಲನ್ನು ನಿಯೋಜಿಸುವ ಮೂಲಕ ವಿವಿ ಆಡಳಿತಗಳಲ್ಲಿ ಬದಲಾವಣೆ ತರುವ ಉದ್ದೇಶವಿದೆ. ಉಪನ್ಯಾಸಕರು ಪಾಠ ಮತ್ತು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಲು ಇದರಿಂದ ಸಾಧ್ಯವಾಗಲಿದೆ. ಮಾರುಕಟ್ಟೆಯ ಪೂರಕವಾಗಿ ಸ್ಪಂದಿಸುವ ಬೇಡಿಕೆಗಳನ್ನು ಮಾನದಂಡವನ್ನಾಗಿಸಿ ಕೋರ್ಸುಗಳ ಪಠ್ಯಕ್ರಮವನ್ನು ಅಮೂಲಾಗ್ರವಾಗಿ ಬದಲಿಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ. 

SCROLL FOR NEXT