ಸೌಮ್ಯಾ ರೆಡ್ಡಿ 
ರಾಜ್ಯ

ಆದರ್ಶ ಯುವ ಶಾಸಕಿ ಪ್ರಶಸ್ತಿಗೆ ಭಾಜನರಾದ ಜಯನಗರ ಎಂಎಲ್ ಎ ಸೌಮ್ಯಾ ರೆಡ್ಡಿ

ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯಾರೆಡ್ಡಿ ಆದರ್ಶ ಯುವ ಶಾಸಕಿ ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯಾರೆಡ್ಡಿ ಆದರ್ಶ ಯುವ ಶಾಸಕಿ ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳು ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ ಉತ್ತಮ ಸೇವಾ ಕಾರ್ಯಗಳಿಗಾಗಿ ಭಾರತೀಯ ಛಾತ್ರಾ ಸಂಸದ್ ಸೌಮ್ಯರೆಡ್ಡಿ ಅವರಿಗೆ "ಆದರ್ಶ ಯುವ ಶಾಸಕಿ" ಪ್ರಶಸ್ತಿ ನೀಡಿ ಗೌರವಿಸಿದೆ.

ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸೌಮ್ಯರೆಡ್ಡಿ ಶಾಸಕರಾದ ಮೊದಲ ಬಾರಿಗೆ ಎಲ್ಲರ ಗಮನ ಸೆಳೆದಿದ್ದರು. ಆಕೆಯಲ್ಲಿರುವ ಪರಿಸರ ಬಗೆಗಿನ ಕಾಳಜಿ, ಪ್ಲಾಸ್ಟಿಕ್ ವಿರುದ್ಧದ ಅಭಿಯಾನ, ಸಹಜವಾಗಿ ಎಲ್ಲರೊಂದಿಗೆ ಬೆರೆಯುವ ಗುಣ ಮತ್ತು ಶಾಸಕಿ ಎನ್ನುವ ಯಾವ ಗತ್ತೂ ಇಲ್ಲದೇ ಕೆಲಸದಲ್ಲಿಯೇ ತಮ್ಮನ್ನು ಕಾಣುವ ನಡೆಯಿಂದ ಕ್ಷೇತ್ರದಲ್ಲಿ ಇವರು ಚಿರಪರಿಚಿತ. ಕಾಲೇಜು ದಿನಗಳಿಂದಲೇ ಒಬ್ಬ ಜನಪ್ರತಿನಿಧಿಗಿರುವ ಗುರಿ ಇಟ್ಟುಕೊಂಡು ನಾಯಕತ್ವ ಗುಣ ಬೆಳೆಸಿಕೊಂಡಿದ್ದರು.

ತಮಗಿಂತಲೂ ತಮ್ಮ ಕ್ಷೇತ್ರದ ಜನರಿಗೆ ಪ್ರಶಸ್ತಿ ಸಂದಿರುವುದು ಬಹಳ ಖುಷಿತಂದಿದೆ. ಜನರಿಂದ ಆರಿಸಲ್ಪಟ್ಟಿರುವ ನಾನು ಮತಹಾಕಿದ ದೇವರುಗಳಿಗೆ ಸ್ಪಂದಿಸಬೇಕಿರುವುದು ನನ್ನ ಆದ್ಯಕರ್ತವ್ಯ. ಪರಿಸರದ ಬಗೆಗಿನ ಕಾಳಜಿ ಸ್ಪಂದಿಸುವ ಗುಣ ಪ್ರತಿಯೊಬ್ಬರಿಗೂ ಇರಲೇಬೇಕು ಎಂದರು.

ತಮ್ಮ ಅಭಿವೃದ್ಧಿಯ ಕಾರ್ಯಗಳಿಗೆ ತಂದೆ ಹಾಗೂ ಶಾಸಕರೂ ಆಗಿರುವ ರಾಮಲಿಂಗಾರೆಡ್ಡಿ ಅವರ ಪ್ರೇರಣೆ ಮತ್ತು ಸಹಕಾರ ಸದಾ ಇದ್ದು, ಅವರ ಸರಳತೆ ಮತ್ತು ಜನತೆಗೆ ಸ್ಪಂದಿಸುವ ಗುಣ ತಮ್ಮಲ್ಲಿ ಮೈದಳೆದಿದೆ ಎಂದು ಸೌಮ್ಯರೆಡ್ಡಿ ಹೇಳಿದರು.

ಇನ್ನು ಮಗಳ ಒಳ್ಳೆಯ ಕೆಲಸಗಳಿಗೆ ಬೆನ್ನೆಲುಬಾಗಿರುವ ಮಾಜಿ ಸಚಿವ ರಾಮಲಿಂಗಾರೆಡ್ಡಿ ಸಹ ಮಗಳು ಆದರ್ಶ ಶಾಸಕಿಯಾಗಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT