ರಾಜ್ಯ

ಪತ್ರಕರ್ತನ ಸೋಗಿನಲ್ಲಿ ಬಿಡಿಎ ಅಧಿಕಾರಿಯಿಂದ ಹಣ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯ ಅಕ್ರಮ ಬಯಲು!

ಆಂಗ್ಲ ಪತ್ರಿಕೆಯ ವರದಿಗಾರ ಎಂದು ಹೇಳಿಕೊಂಡು ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ಬಂದು ನಿಮ್ಮ ಅಕ್ರಮವನ್ನು ಬಯಲಿಗೆಳೆಯುತ್ತೇನೆ ಎಂದು ಬೆದರಿಸಿ ಬಿಡಿಎ ಅಧಿಕಾರಿಗಳಿಂದ ಹಣ ಸುಲಿಗೆ ಮಾಡುತ್ತಿದ್ದವನ ಅಕ್ರಮ ಬಯಲಿಗೆಳೆಯಲಾಗಿದೆ.

ಬೆಂಗಳೂರು: ಆಂಗ್ಲ ಪತ್ರಿಕೆಯ ವರದಿಗಾರ ಎಂದು ಹೇಳಿಕೊಂಡು ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ನಿಮ್ಮ ಅಕ್ರಮವನ್ನು ಬಯಲಿಗೆಳೆಯುತ್ತೇನೆ ಎಂದು ಬೆದರಿಸಿ ಬಿಡಿಎ ಅಧಿಕಾರಿಗಳಿಂದ ಹಣ ಸುಲಿಗೆ ಮಾಡುತ್ತಿದ್ದವನ ಅಕ್ರಮ ಬಯಲಿಗೆಳೆಯಲಾಗಿದೆ.


ತ್ರಿವಿಕ್ರಮ ಎಂದು ಹೆಸರು ಹೇಳಿಕೊಂಡು ಬಿಡಿಎ ಕೇಂದ್ರ ಕಚೇರಿಗೆ ಬಂದು ಅಧಿಕಾರಿಗಳಿಗೆ ಪೀಡಿಸುತ್ತಿದ್ದ ಎಂದು ತನಿಖೆ ವೇಳೆ ಪೊಲೀಸರಿಗೆ ತಿಳಿದುಬಂದಿದೆ. ಬಿಡಿಎಯ ಕಾರ್ಯಪಡೆ ಈತನ ಸೋಗಲಾಡಿತನ ಬಯಲು ಮಾಡಿದೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಬಿಡಿಎ ಅಧಿಕಾರಿಯೊಬ್ಬರು, ತ್ರಿವಿಕ್ರಮ ಬಿಡಿಎಯ ಐಟಿ ವಿಭಾಗದ ಹಿರಿಯ ಅಧಿಕಾರಿ ಬಳಿ ಬಂದು ಹಣ ನೀಡುವಂತೆ ಪೀಡಿಸುತ್ತಿದ್ದನು ಎಂದು ಹೇಳಿದ್ದಾರೆ.


ನಡೆದ ಘಟನೆಯೇನು?: ಕಳೆದ ಸೋಮವಾರ ತ್ರಿವಿಕ್ರಮ ಬಿಡಿಎ ಕೇಂದ್ರ ಕಚೇರಿಗೆ ಬಂದು ನನ್ನ ಫೋನ್ ನಲ್ಲಿ ನೀವು ನಡೆಸಿರುವ ಅಕ್ರಮಗಳ ಬಗ್ಗೆ ಕೆಲವು ದಾಖಲೆಗಳಿವೆ. ನೀವು ಇಷ್ಟು ಹಣ ಕೊಟ್ಟರೆ ಕೇಸನ್ನು ಇಲ್ಲಿಗೆ ಮುಚ್ಚಿಹಾಕುತ್ತೇನೆ, ಇಲ್ಲದಿದ್ದರೆ ಪತ್ರಿಕೆಯಲ್ಲಿ ಪ್ರಕಟಿಸುತ್ತೇನೆ ಎಂದು ಬೆದರಿಸಿದ. ಆರಂಭದಲ್ಲಿ ಅಧಿಕಾರಿ ತ್ರಿವಿಕ್ರಮನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಮರುದಿನ ಮತ್ತೆ ಅಧಿಕಾರಿ ಕಚೇರಿಗೆ ಬಂದು ತ್ರಿವಿಕ್ರಮ ಹಣಕ್ಕಾಗಿ ಪೀಡಿಸಲಾರಂಭಿಸಿದ. ಕೂಡಲೇ ಅಧಿಕಾರಿ ಪೊಲೀಸ್ ಕಾರ್ಯಪಡೆಗೆ ತಿಳಿಸಿದರು. ತ್ರಿವಿಕ್ರಮ ಎನ್ನುವ ವ್ಯಕ್ತಿ ಕ್ಯಾಂಪಸ್ ನೊಳಗೆ ತಿರುಗಾಡುತ್ತಿದ್ದರಿಂದ ಸುಲಭವಾಗಿ ಹಿಡಿಯಲು ಸಾಧ್ಯವಾಯಿತು. ಈತನ ಸುಲಿಗೆ ಕೇಸು ಬಿಡಿಎ ಕಚೇರಿಯಲ್ಲಿ ಸುದ್ದಿಯಾಗುತ್ತಿದ್ದಂತೆ ಇಂತಹ ಹಲವು ಸುಲಿಗೆ ಬೆದರಿಕೆ ಕೇಸುಗಳು ಬೆಳಕಿಗೆ ಬಂದವು ಎಂದು ಮತ್ತೊಬ್ಬ ಅಧಿಕಾರಿ ಹೇಳುತ್ತಾರೆ.


ಆತ ಕಳೆದೊಂದು ತಿಂಗಳಿನಿಂದ ಬಿಡಿಎ ಕಚೇರಿಯಲ್ಲಿ ಓಡಾಡುತ್ತಾ ಭೂ ಒತ್ತುವರಿ ಇಲಾಖೆಯ ಅಧಿಕಾರಿಗಳ ಬಳಿ ಬಂದು ಈ ರೀತಿ ನಿಮ್ಮ ಕೇಸುಗಳನ್ನು ಬಯಲಿಗೆಳೆಯುತ್ತೇನೆ ಎಂದು ಬೆದರಿಸುತ್ತಿದ್ದ ಎಂದು ಗೊತ್ತಾಗಿದೆ. ಒಬ್ಬ ಅಧಿಕಾರಿ ತನ್ನ ಅಕ್ರಮ ಬಯಲಿಗೆ ಬರಬಹುದು ಎಂಬ ಭೀತಿಯಿಂದ ಸ್ವಲ್ಪ ಹಣ ನೀಡಿದ್ದಾರೆ ಎಂದು ಗೊತ್ತಾಗಿದ್ದು ಅದರ ವಿವರ ಸಿಕ್ಕಿಲ್ಲ, ಹೊಸಕೆರೆಹಳ್ಳಿ ಮೂಲದವನು ಈ ತ್ರಿವಿಕ್ರಮ ಎಂಬುದು ತಿಳಿದುಬಂದಿದೆ.


ಆರಂಭಿಕ ವಿಚಾರಣೆ ವೇಳೆ ಈತ ಆರ್ ಟಿಐ ಕಾರ್ಯಕರ್ತ ಎಂದು ಗೊತ್ತಾಗಿದ್ದು ಕಂಪ್ಯೂಟರ್ ವಿಭಾಗದ ಕೆಲ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ. ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!