ರಾಜ್ಯ

ಬೆಂಗಳೂರು ಉಪನಗರ ರೈಲು ಯೋಜನೆಗೆ ಪೂರ್ವಸಿದ್ಧತಾ ಕಾರ್ಯ ಪ್ರಾರಂಭ

Raghavendra Adiga

ಬೆಂಗಳೂರು: ನಗರದಲ್ಲಿ ನಿರ್ಮಾಣವಾಗಲಿರುವ 18,621 ಕೋಟಿ ರೂ.ಗಳ ಉಪನಗರ ರೈಲು ಯೋಜನೆಗೆ ಆರ್ಥಿಕ ವ್ಯವಹಾರಗಳ ಸಂಪುಟ  ಸಮಿತಿಯಿಂದ  ಇನ್ನಷ್ತೇ ಗ್ರೀನ್ ಸಿಗ್ನಲ್ ಸಿಗಬೇಕಾಗಿದ್ದರೂ ಕುಡ ಬೆಂಗಳೂರಿನ ನೋಡಲ್ ಏಜೆನ್ಸಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಪೂರ್ವಸಿದ್ಧತಾ ಕಾರ್ಯಗಳನ್ನು ಪ್ರಾರಂಭಿಸಿದೆ. ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಉದ್ಯಮಗಳು (ಕೆ-ರೈಡ್) ಎರಡು ಪ್ರತ್ಯೇಕ ಕಾರ್ಯಗಳಿಗೆ ಸಂಬಂಧಿಸಿದಂತೆ ಟೆಂಡರ್‌ಗಳಿಗೆ ಕರೆ ನೀಡಿದೆ.

ಇದರಲ್ಲಿ ಒಂದನೆಯದಾಗಿ ಯೋಜನೆಯನ್ನು ಜಾರಿಗೆ ತರಲು ಅಂದಾಜು ಮಾಡಲಾದ 600 ಎಕರೆಗೂ ಹೆಚ್ಚು ಭೂಮಿಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಸಮೀಕ್ಷೆ ನಡೆಸುವ ಕಾರ್ಯವಾಗಿದ್ದರೆ ಇನ್ನೊಂದು ದು ಉದ್ದೇಶಿತ ಯೋಜನೆಯ ಹಾದಿಯಲ್ಲಿರುವ ಉಪಯುಕ್ತತೆಗಳನ್ನು ಸಮೀಕ್ಷೆ ಮಾಡುವುದಾಗಿದೆ. ಟೆಂಡರ್ ಸಲ್ಲಿಕೆ ಆಸಕ್ತಿ ಇರುವವರು ಮಾರ್ಚ್ 24ರೊಳಗೆ ಸಲ್ಲಿಕೆ ಂಆಡಬೇಕಿದೆ.

ಯೋಜನೆಯ ಅನುಮೋದನೆ ಬಾಕಿ ಇರುವಾಗ ಟೆಂಡರ್‌ಗಳನ್ನು ಕರೆಯುವುದರ ಹಿಂದಿನ ತಾರ್ಕಿಕತೆಯ ಬಗ್ಗೆ ಕೇಳಲಾಗಿ ನಾವು ಪೂರ್ವಸಿದ್ಧತಾ ಕಾರ್ಯಗಳನ್ನು ಪೂರ್ಣಗೊಳಿಸಿರಬೇಕು. , ಇದರಿಂದಾಗಿ ಅನುಮೋದನೆ ಬಂದಾಗ ನಾವು ತ್ವರಿತವಾಗಿ ಕೆಲಸ ಮಾಡಲು ಅನುಕೂಲವಾಗಲಿದೆ"  ರೈಲ್ವೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಯೋಜನೆಯು ನಾಲ್ಕು ಕಾರಿಡಾರ್‌ಗಳನ್ನು ಒಳಗೊಂಡಿರುತ್ತದೆ - ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ  (ಬೆಂಗಳೂರು ನಗರ) -ಯೇಶವಂತಪುರ-ಯಲಹಂಕ-ದೇವನಹಳ್ಳಿ-ಕೆಂಪೇ ಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ; ಬೈಯಪ್ಪನಹಳ್ಳಿ-ಬನಸ್ವಾಡಿ-ಲೊಟ್ಟೆಗೆಹಳ್ಳಿ-ವೈಟ್‌ಫೀಲ್ಡ್-ಯಶವಂತಪುರ- ಚಿಕ್ಕಬಾಣಾವರ ಕೆಂಗೇರಿ-ಕಂಟೋನ್ಮೆಂಟ್-ವೈಟ್‌ಫೀಲ್ಡ್; ಮತ್ತು ಹೀಲಾಲಿಗೆ ಬೈಯಪ್ಪನಹಳ್ಳಿ-ಚನ್ನಸಂದ್ರ-ಯಲಹಂಕ-ರಾಜನಕುಂಟೆ

SCROLL FOR NEXT