ರಾಜ್ಯ

ಬೆಂಗಳೂರಿಗರಿಗೆ ಸದ್ಯದಲ್ಲೇ ಮತ್ತೊಂದು ಹೊರೆ: ಶೀಘ್ರವೇ ನೀರಿನ ದರ ಏರಿಕೆ?

Shilpa D

ಬೆಂಗಳೂರು: ಐದು ವರ್ಷಗಳ ನಂತರ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನೀರಿನ ದರ ಏರಿಕೆಗೆ ನಿರ್ಧರಿಸಿದ್ದು. ಶೇಕಡಾ 30-50 ರಷ್ಟು ಬೆಲೆ ಏರಿಸಲು ಪ್ರಸ್ತಾಪಿಸಿದೆ.

ಜನವರಿ 15 ರಂದು ನಡೆಯುವ ಮೀಟಿಂಗ್ ನಲ್ಲಿ ಈ ಪ್ರಸ್ತಾವನೆ ಸಲ್ಲಿಸಲಿದೆ. ಒಂದು ವೇಳೆ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಿದರೇ ಶೀಘ್ರದಲ್ಲೆ ನೀರಿನ ದರದಲ್ಲಿ ಏರಿಕೆಯಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಹೇಳಿದ್ದಾರೆ.

ವಿದ್ಯುತ್ ದರ ಏರಿಕೆ ಮತ್ತು ಸಿಬ್ಬಂದಿಯ ವೇತನ ನಿರ್ವಹಣೆ ಮಾಡಬೇಕಾಗಿದೆ. ಹೀಗಾಗಿ ಹೆಚ್ಚಿನ ಹೊರೆಯಾಗುತ್ತಿದ್ದು, ದರ ಏರಿಕೆ ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ.

SCROLL FOR NEXT