ಕೊಪ್ಪಳದ ವನ್ಯಜೀವಿ ಸಂಪತ್ತನ್ನು ಅನಾವರಣಗೊಳಿಸುವ ಅಪರೂಪದ ಸಾಕ್ಷ್ಯಚಿತ್ರ ಬಿಡುಗಡೆಗೆ ಸಜ್ಜು 
ರಾಜ್ಯ

ಕೊಪ್ಪಳದ ವನ್ಯಜೀವಿ ಸಂಪತ್ತನ್ನು ಅನಾವರಣಗೊಳಿಸುವ ಅಪರೂಪದ ಸಾಕ್ಷ್ಯಚಿತ್ರ ಬಿಡುಗಡೆಗೆ ಸಜ್ಜು

ಕೊಪ್ಪಳದ ವನ ಸಂಪತ್ತು, ವನ್ಯಜೀವಿಗಳನ್ನು ಇದೇ ಮೊದಲ ಬಾರಿಗೆ ಪರದೆ ಮೇಲೆ ತೋರಿಸಲು  ಹಿರಿಯ ವನ್ಯಜೀವಿ ಛಾಯಾಗ್ರಾಹಕ ಮತ್ತು ಕೊಪ್ಪಳ ಜಿಲ್ಲೆಯ ಮಾಜಿ ಗೌರವಾನ್ವಿತ ವನ್ಯಜೀವಿ ವಾರ್ಡನ್ ಇಂದ್ರಜೀತ್ ಘೋರ್ಪಡೆ ಸಿದ್ದವಾಗಿದ್ದಾರೆ. ಇದಕ್ಕಾಗಿ ಅವರು 12 ಭಾಗಗಳ ವನ್ಯಜೀವಿ ಸಾಕ್ಷ್ಯಚಿತ್ರ - ದಿ ಡೆಕ್ಕನ್.ಶಾಟ್ (The Deccan.Shot) ಎಂಬ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದಾರ

ಹುಬ್ಬಳ್ಳಿ: ಕೊಪ್ಪಳದ ವನ ಸಂಪತ್ತು, ವನ್ಯಜೀವಿಗಳನ್ನು ಇದೇ ಮೊದಲ ಬಾರಿಗೆ ಪರದೆ ಮೇಲೆ ತೋರಿಸಲು  ಹಿರಿಯ ವನ್ಯಜೀವಿ ಛಾಯಾಗ್ರಾಹಕ ಮತ್ತು ಕೊಪ್ಪಳ ಜಿಲ್ಲೆಯ ಮಾಜಿ ಗೌರವಾನ್ವಿತ ವನ್ಯಜೀವಿ ವಾರ್ಡನ್ ಇಂದ್ರಜೀತ್ ಘೋರ್ಪಡೆ ಸಿದ್ದವಾಗಿದ್ದಾರೆ. ಇದಕ್ಕಾಗಿ ಅವರು 12 ಭಾಗಗಳ ವನ್ಯಜೀವಿ ಸಾಕ್ಷ್ಯಚಿತ್ರ - ದಿ ಡೆಕ್ಕನ್.ಶಾಟ್ (The Deccan.Shot) ಎಂಬ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದಾರೆ.

ಲ್ಲೆಯಲ್ಲಿ ಕಂಡುಬರುವ ಅಪರೂಪದ ಪ್ರಾಣಿ.ವರ್ಗಗಳ ಜತೆಗೆ ಹುಲ್ಲುಗಾವಲುಗಳು ಮತ್ತು ಜಮೀನುಗಳ ಬಗೆಗೆ . ವಿವರಿಸಲಾಗಿದ್ದು ಸತತ ಎರಡು ವರ್ಷಗಳ ಕಾಲ ಸ್ಥಳೀಯ ಸಮುದಾಯದೊಂದಿಗೆ ಹಲವಾರು ಸುತ್ತಿನ ಚರ್ಚೆ ನಡೆಸಿದ್ದು ವ್ಯಾಪಕ ಸಂಶೋಧನೆಯ ಫಲಿತಾಂಶವೇ ಈ ಸಾಕ್ಷ್ಯಚಿತ್ರವಾಗಿದೆ. ಕೊಪ್ಪಳ  ಡೆಕ್ಕನ್ ಕನ್ಸರ್ವೇಶನ್ ಫೌಂಡೇಶನ್ (ಡಿಸಿಎಫ್) ನ ಸಂಶೋಧನಾ ಯೋಜನೆಯಡಿ ಈ ಸಾಕ್ಷ್ಯಚಿತ್ರ ನಿರ್ಮಾಣಗೊಂಡಿದೆ. ಅತ್ಯಂತ  ಶೀಘ್ರದಲ್ಲೇ ಮೊದಲ ಸರಣಿಯನ್ನು ಅಂತರ್ಜಾಲದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಘೋರ್ಪಡೆ ಹೇಳಿದರು

"ಕೊಪ್ಪಳ  ಜಿಲ್ಲೆಯು ವಿಶಿಷ್ಟವಾದ ಸಸ್ಯ ಮತ್ತು ಪ್ರಾಣಿಗಳನ್ನು ಹೊಂದಿದೆ, ಇದನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸಲಾಗಿದ್ದು ಅದೊಂದು ಕಾಲದಲ್ಲಿ ಏಷ್ಯಾಟಿಕ್ ಚಿರತೆಗಳು ಆಳಿದ ಸ್ಥಳ ಇದು. ಇಂದು, ತೋಳಗಳು, ಹೈನಾಗಳು ಮತ್ತು ಕೆಲವು ಆಯ್ದ ಪಕ್ಷಿಗಳಂತಹ ಕಾಡು ಪ್ರಾಣಿಗಳನ್ನು ನೋಡುವುದು ಕಷ್ಟಕರವಾಗಿದೆ. ಇಷ್ಟು ವರ್ಷಗಳ ನಂತರ ಕೊಪ್ಪಳದಲ್ಲಿ ಹಿನೆನಾ ಮತ್ತು ಅದರ ಆವಾಸಸ್ಥಾನವನ್ನು ಚಿತ್ರೀಕರಿಸಲು ನಮಗೆ ಸಾಧ್ಯವಾಯಿತು. ಈ ಎಲ್ಲಾ ಪ್ರಾಣಿಗಳನ್ನು 12 ಭಾಗಗಳ ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗುವುದು, ”ಎಂದು ಅವರು ಹೇಳಿದರು.

ಪ್ರಾಸಂಗಿಕವಾಗಿ, ಕೊಪ್ಪಳ ಜಿಲ್ಲೆಯಲ್ಲಿ  ಯಾವುದೇ ಅಭಯಾರಣ್ಯ ಮತ್ತು ಸಂರಕ್ಷಿತ ಪ್ರದೇಶಗಳಿಲ್ಲ. ಒಟ್ಟಾರೆ ಸಂರಕ್ಷಣಾ ಮೀಸಲು ಬಳ್ಳಾರಿ ಮತ್ತು ಕೊಪ್ಪಳ  ಜಿಲ್ಲೆಗಳಲ್ಲಿ ಹರಡಿದೆ ಮತ್ತು ಸ್ಥಳೀಯ ಸಂರಕ್ಷಣಾವಾದಿಗಳು ಈ ಸಾಕ್ಷ್ಯಚಿತ್ರದ ಮೂಲಕ ಸಂರಕ್ಷಿತ ಪ್ರದೇಶ ರಚನೆಗೆ ಒತ್ತಾಯಿಸುತ್ತಿದ್ದಾರೆ.

ತೋಳಗಳು, ಕರಡಿಗಳು, ಚಿರತೆಗಳು, ಬ್ಲ್ಯಾಕ್‌ಬಕ್ಸ್ ಮತ್ತು ಹಯೆನಾಗಳಂತಹ ಅಪರೂಪದ ಪ್ರಭೇದಗಳನ್ನು ಹೊಂದಿದ್ದರೂ ಸಹ ಕೊಪ್ಪಳ ಜಿಲ್ಲೆಯಲ್ಲಿ ಒಂದೇ ವನ್ಯಜೀವಿ ಅಭಯಾರಣ್ಯ ಇಲ್ಲ. ಸರ್ಕಾರ ಈ ದಿಕ್ಕಿನಲ್ಲಿ ಯೋಚಿಸಬೇಕು ”ಎಂದು ಘೋರ್ಪಡೆ ವಿವರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಆಳಂದದಲ್ಲಿ 6000 ಮತ ಡಿಲೀಟ್ ಆರೋಪ: ಎಲ್ಲಾ ಮಾಹಿತಿ ಈಗಾಗಲೇ ಕಲಬುರಗಿ ಎಸ್‌ಪಿ ಜೊತೆ ಹಂಚಿಕೊಳ್ಳಲಾಗಿದೆ: ಕರ್ನಾಟಕ ಸಿಇಒ

ಮುಡಾ ನಿವೇಶನ ಹಂಚಿಕೆಯಲ್ಲಿ ದೊಡ್ಡ ಪ್ರಮಾಣದ ಹಗರಣ ನಡೆದಿದೆ: ED

Hindenburg: Gautam Adani ಗೆ ಬಿಗ್ ರಿಲೀಫ್, SEBI ಕ್ಲೀನ್ ಚಿಟ್!

ವಿಜಯಪುರ ವಿಮಾನ ನಿಲ್ದಾಣಕ್ಕೆ 618 ಕೋಟಿ ರೂ. ಪರಿಷ್ಕೃತ ಅಂದಾಜುಗೆ ಸಚಿವ ಸಂಪುಟ ಅನುಮೋದನೆ

ಚಪ್ಪರ್, ಭಿಕಾರಿ, ಮರ್ಯಾದೇ ಇಲ್ವ: Bigg Boss ರಂಜಿತ್ ಮನೆಯಲ್ಲಿ ಜಗಳ, Video Viral

SCROLL FOR NEXT