ಹಂಪಿಯ ಒಂದು ನೋಟ 
ರಾಜ್ಯ

ಹಂಪಿಯಲ್ಲಿ ಶೀಘ್ರವೇ ಬ್ಯಾಟರಿ ಚಾಲಿತ ರೈಲು, ಡಬಲ್ ಡೆಕ್ಕರ್ ಬಸ್ ಸೇವೆ ಪ್ರಾರಂಭ

ಹಂಪಿಯ ವಿಶ್ವ ಪಾರಂಪರಿಕ ತಾಣಕ್ಕೆ ಪ್ರವಾಸಿಗರನ್ನು ಹೆಚ್ಚು ಹೆಚ್ಚು ಆಕರ್ಷಿಸಲು ಬಳ್ಲಾರಿ ಜಿಲ್ಲಾಡಳಿತ ಸಜ್ಜಾಗಿದ್ದು ಶೀಘ್ರದಲ್ಲೇ ಬ್ಯಾಟರಿ ಚಾಲಿತ ರೈಲುಗಳನ್ನು ಪರಿಚಯಿಸಲು ಸಿದ್ದತೆ ನಡೆಸಿದೆ. 

ಬಳ್ಳಾರಿ: ಹಂಪಿಯ ವಿಶ್ವ ಪಾರಂಪರಿಕ ತಾಣಕ್ಕೆ ಪ್ರವಾಸಿಗರನ್ನು ಹೆಚ್ಚು ಹೆಚ್ಚು ಆಕರ್ಷಿಸಲು ಬಳ್ಲಾರಿ ಜಿಲ್ಲಾಡಳಿತ ಸಜ್ಜಾಗಿದ್ದು ಶೀಘ್ರದಲ್ಲೇ ಬ್ಯಾಟರಿ ಚಾಲಿತ ರೈಲುಗಳನ್ನು ಪರಿಚಯಿಸಲು ಸಿದ್ದತೆ ನಡೆಸಿದೆ. ಮೂರು ಬೋಗಿಗಳನ್ನು ಹೊಂದಿರುವ ಈ ರೈಲು ಒಮ್ಮೆಗೆ  90 ಪ್ರವಾಸಿಗರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ವಿಶ್ವ ಪರಂಪರೆ ತಾಣದ ವಿಸ್ತೀರ್ಣ ಹೆಚ್ಚಿರುವ ಕಾರಣ ಬೇಸಿಗೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬಂದು ನಡೆದಾಡುವುದು ಕಷ್ಟವಾಗುತ್ತದೆ. ಇದರಿಂದಾಗಿ ಮಾಲಿನ್ಯ ರಹಿತ ವಾಹನಗಳನ್ನು ಪರಿಚಯಿಸಲು ಆಡಳಿತ ನಿರ್ಧರಿಸಿದೆ. ಪ್ರತಿ ಕೋಚ್  32 ಆಸನಗಳನ್ನು ಹೊಂದಿರುತ್ತದೆ ಮತ್ತು ಮೂರು ಇಂತಹಾ ಕೋಚ್ ಗಳನ್ನು ಇಂಜಿನ್ ಗೆ ಜೋಡಿಸಲಾಗುತ್ತದೆ ಎಂದು ಮೂಲಗಳು ಹೇಳಿದೆ.

ಈ ಬ್ಯಾಟರಿ ಚಾಲಿತ ರೈಲು ವಿರೂಪಾಕ್ಷ ದೇವಾಲಯ, ಉಗ್ರ ನರಸಿಂಹ, ಸಾಸಿವೆಕಾಳು ಗಣಪತಿ, ರಾಣಿಯ ಸ್ನಾನಗೃಹ, ಕಮಲ ಮಹಲ್ ಸೇರಿದಂತೆ ಪ್ರಮುಖ ಸ್ಮಾರಕಗಳನ್ನು ಒಟ್ತಾಗಿಸಲಿದೆ. ಹಂಪಿಯ ಯಾವುದೇ ಸ್ಮಾರಕಗಳನ್ನು ಬಿಡದಂತೆ ಎಲ್ಲವನ್ನೂ ಈ ರೈಲು ಸಂಪರ್ಕಿಸಲಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ  ಎಸ್.ಎಸ್.ನಕುಲ್ ಪತ್ರಿಕೆಗೆ ಹೇಳಿದ್ದಾರೆ. ಹಂಪಿಯ ಅನೇಕ ಸ್ಥಳಗಳಲ್ಲಿ ದೊಡ್ಡ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿರುವುದರಿಂದ, ಬ್ಯಾಟರಿ ಚಾಲಿತ ಈ ರೈಲುಗಳು ಹೆಚ್ಚಿನ ಜನರನ್ನು ಆಕರ್ಷಿಸಬಹುದು. ಹಂಪಿ ಸ್ಮಾರಕಗಳ ದರ್ಶನ ಪಡೆಯಲು ಪ್ರವಾಸಿಗರಿಗೆ ಸಹಾಯ ಮಾಡಲು ಬ್ಯಾಟರಿ ಚಾಲಿತ ಡಬಲ್ ಡೆಕ್ಕರ್ ಬಸ್‌ಗಳನ್ನು ಪರಿಚಯಿಸುವ ಯೋಜನೆ ಸಿದ್ಧವಾಗಿದೆ, ”ಎಂದು ಅವರು ಹೇಳಿದರು.

ಕಳೆದ ತಿಂಗಳು ಹಂಪಿಯಲ್ಲಿ ಬ್ಯಾಟರಿ ಚಾಲಿತ ವಾಹನವೊಂದರ ಅಪಘಾತದ ನಂತರ ಅಂತಹ ವಾಹನಗಳ ಸೇವೆಯನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಗಿತ್ತು.  ಪ್ರಸ್ತುತ, ವಿಜಯ ವಿಟ್ಟಲ ದೇವಾಲಯ ಸಂಕೀರ್ಣಕ್ಕೆ ಪ್ರವಾಸಿಗರನ್ನು ಕರೆದೊಯ್ಯಲು ನಾಲ್ಕು ವಾಹನಗಳಿದೆ. ಏಕೆಂದರೆ  ಇತರ ವಾಹನಗಳ ಸಂಚಾರವನ್ನು ದೇವಾಲಯದ ಸಂಕೀರ್ಣ ಮತ್ತು ಸುತ್ತಮುತ್ತ ನಿರ್ಬಂಧಿಸಲಾಗಿದೆ. "ಹಂಪಿಯು ವ್ಯಾಪ್ತಿದೊಡ್ಡದಾಗಿದೆ. ದೂರದ ಕಾರಣಕ್ಕೆ  ಹಲವಾರು ಸ್ಮಾರಕಗಳನ್ನು ಪ್ರವಾಸಿಗರು ನೋಡುವುದನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ.ಡಬಲ್ ಡೆಕ್ಕರ್ ಬಸ್ ಮತ್ತು ಬ್ಯಾಟರಿ ಚಾಲಿತ ರೈಲು ವಾಸಿಗರಿಗೆ ಸಾಕಷ್ಟು ಸಹಾಯ ಮಾಡುತ್ತದೆ ”ಎಂದು ಸ್ಥಳೀಯರೊಬ್ಬರು ಹೇಳಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT