ರಾಜ್ಯ

ಮಂಗಳೂರು ಗಲಭೆ: ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಎಡಿಜಿಪಿ ಸಭೆ

Sumana Upadhyaya

ಮಂಗಳೂರು: ಕಳೆದ ತಿಂಗಳು ಡಿಸೆಂಬರ್ 19ರಂದು ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಅಮರ್ ಕುಮಾರ್ ಪಾಂಡೆ ನಿನ್ನೆ ನಗರಕ್ಕೆ ಭೇಟಿ ನೀಡಿ, ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.


ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮುಸ್ಲೀಮ್ ಕೇಂದ್ರೀಯ ಸಮಿತಿ ನಗರದ ನೆಹರೂ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿತ್ತು. ಅದೇ ರೀತಿ ಸ್ಟೇಟ್ ಬ್ಯಾಂಕ್ ಪ್ರದೇಶದಲ್ಲೂ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಎರಡೂ ಪ್ರತಿಭಟನೆಗಳನ್ನು ಹಿಂಪಡೆಯಲಾಗಿದೆ.

ಡಿ19ರಂದು ನಡೆದಿದ್ದ ಹಿಂಸಾಚಾರಗಳು ಮತ್ತು ಮರುಕಳಿಸುವ ಭೀತಿಯಿಂದ ಎಡಿಜಿಪಿ ಅವರು ಸರ್ಕಾರದ ನಿರ್ದೇಶನದಂತೆ ನಗರಕ್ಕೆ ಭೇಟಿ ನೀಡಿದ್ದರು. ಶನಿವಾರ ಇಡೀ ದಿನ ಪರಿಸ್ಥಿತಿಯನ್ನು ಅವರು ಪರಾಮರ್ಶಿಸಿದರು.


ಹಿಂಸಾಚಾರ ಮತ್ತು ಗೋಲಿಬಾರ್ ಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಪೊಲೀಸರು ಸಂಗ್ರಹಿಸಿದ ಇತರ ಸಾಕ್ಷ್ಯಗಳನ್ನು ಸಭೆಯಲ್ಲಿ ಎಡಿಜಿಪಿ ಅವರು ಪರಿಶೀಲಿಸಿದರು. ಹಿಂಸಾಚಾರ ನಡೆಸಿರುವುದು ದೃಡಪಟ್ಟರೆ ಗಲಭೆಕೋರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ತನಿಖಾಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.

SCROLL FOR NEXT