ರಾಜ್ಯ

17ನೇ ಚಿತ್ರಸಂತೆ ಉದ್ಘಾಟಿಸಿದ ಸಿಎಂ ಬಿಎಸ್ ವೈ, ಬಜೆಟ್ ನಲ್ಲಿ 1 ಕೋಟಿ ಮೀಸಲಿಗೆ ಸಮ್ಮತಿ

Raghavendra Adiga

ಬೆಂಗಳೂರು: ಚಿತ್ರಸಂತೆಗಾಗಿ ಬಜೆಟ್ ನಲ್ಲಿ ಒಂದು ಕೋಟಿ ಅನುದಾನ ನೀಡಲಾಗುವುದು, ಸಾರ್ವಜನಿಕರು ಚಿತ್ರಕಲಾವಿದರ ಚಿತ್ರಗಳನ್ನು ಖರೀದಿಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಬೇಕು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಭಾನುವಾರ ನಗರದಲ್ಲಿ ಆಯೋಜಿಸಲಾಗಿದ್ದ ಹದಿನೇಳನೇ ಚಿತ್ರಸಂತೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಚಿತ್ರಕಲಾ ಪರಿಷತ್ ನಲ್ಲಿ ಚಿತ್ರಸಂತೆ ನಡೆಯುತ್ತಿದ್ದು ಕುಮಾರಕೃಪಾ ರಸ್ತೆಯುದ್ದ ಚಿತ್ರಕಲಾವಿದರು ತಮ್ಮ ಕಲಾಲೃತಿಗಳ ಪ್ರದರ್ಶನ ಹಾಗೂ ಮಾರಾಟ ಹಮ್ಮಿಕೊಂಡಿದ್ದಾರೆ. ಈ ವೇಳೆ ಕಾನ್ವಾಸಿನ ಮೇಲೆ ಸಹಿ ಮಾಡುವ ಮೂಲಕ ಮುಖ್ಯಮಂತ್ರಿಗಳು ಚಿತ್ರಸಂತೆಗೆ ಅಧಿಕೃತ ಚಾಲನೆ ನೀಡಿದ್ದಾರೆ.

ಈ ಚಿತ್ರಸಂತೆಯನ್ನು ರೈತರಿಗೆ ಸಮರ್ಪಿಸಿರುವುದು ನನಗೆ ಅಧಿಕ ಸಂತಸ ತಂದಿದೆ. ಮಣಿಪುರ, ಮಿಜರಾಮ್ ಸೇರಿ 18 ರಾಜ್ಯಗಳಿಂದ ಕಲಾವಿದರು  ಚಿತ್ರಸಂತೆಯಲ್ಲಿ ಭಾಗವಹಿಸಿದ್ದಾರೆ.  ಚಿತ್ರಸಂತೆ ಎಲ್ಲರ ಗಮನ ಸೆಳೆಯುತ್ತದೆ. ಚಿತ್ತಾರಗಳು ಚಿತ್ತಗಳನ್ನು ಸೆಳೆಯುತ್ತಿವೆ.  ಚಿತ್ರಕಲೆಗಳನ್ನು ಖರೀದಿಸುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದು ಯಡಿಯೂರಪ್ಪ ಆಶಿಸಿದ್ದಾರೆ. ಜತೆಗೆ ಕಲಾವಿದರು, ಕಲರಸಿಕರಿಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಶುಭಾಶಯಗಳನ್ನು ಸಿಎಂ ತಿಳಿಸಿದ್ದಾರೆ.

"ಮೀಣ ಸ್ವರಾಜ್ಯದ ವಿಚಾರ ಉದ್ಘಾಟನೆ ಮಹತ್ವ ಪಡೆದುಕೊಂಡಿದೆ. ಮಧ್ಯವರ್ತಿಗಳ ಕಾಟವಿಲ್ಲದೇ ಕಲೆಯನ್ನು ನೇರಾ ಮಾರಾಟ ಮಾಡುವುದು ಖುಷಿಯ ವಿಚಾರ. ನಾವೆಲ್ಲ ರಸ್ತೆಯಲ್ಲಿರುವ ಚಿತ್ರಗಳನ್ನು ನೋಡಲು ಒಂದು ದಿನ ಸಾಲುವುದಿಲ್ಲ. ದೇಶದಲ್ಲಿಯೇ ಅಪರೂಪದ ಸಂಗತಿ. ಬಜೆಟ್​​​ನಲ್ಲಿ 1 ಕೋಟಿ ರೂ ಕೊಡುವ ಮೂಲಕ ನಿಮ್ಮ ಸರ್ಕಾರ ಜೊತೆಗಿದೆ ಎಂದು ಹೇಳಲು ಹರ್ಷಪಡುತ್ತೇನೆ" ಅವರು ಹೇಳಿದ್ದಾರೆ.

ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿಎಲ್ ಶಂಕರ್ ಮಾತನಾಡಿ," ಸಿಎಂ ಯಡಿಯೂರಪ್ಪ ಉದಾರಿಗಳಾಗಿದ್ದಾರೆ. ಅವರ ಮುಂದೆ ನಾವು ಎರಡು ಬೇಡಿಕೆ ಇಟ್ಟಿದ್ದೆವು, ಪೂರ್ಣಚಂದ್ರ ತೇಜಸ್ವಿ ಹೆಸರಲ್ಲಿ ಜಾಗ ಕೇಳಿದ್ದೆವು. ಅದನ್ನು ಕೊಟ್ಟಿದ್ದಾರೆ. ಈಗ ಬಜೆಟ್ ನಲ್ಲಿ ಚಿತ್ರಸಂತೆಗಾಗಿ ಒಂದು ಕೋಟಿ ಮೀಸಲು ಇರಿಸುವುದಾಗಿ ಹೇಳಿದ್ದಾರೆ." ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇಂದು ರಾತ್ರಿ 8 ಗಂಟೆವರೆಗೂ ಚಿತ್ರಸಂತೆ ನಡೆಯಲಿದ್ದು ಕಲಾಭಿಮಾನಿಗಳನ್ನು ಕುಮಾರಕೃಪಾರಸ್ತೆ ಕೈಬೀಸಿ ಕರೆಯುತ್ತಿದೆ.

SCROLL FOR NEXT