ಬೆಂಗಳೂರು: ರೇವಾ ವಿಶ್ವವಿದ್ಯಾಲಯದ ಸಂಸ್ಥಾಪಕರ ದಿನಾಚರಣೆಯನ್ನು ಇದೇ 2020ನೇ ಜನವರಿ, 6 ರಂದು ರೇವಾ ಕ್ಯಾಂಪಸ್‍ನಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಪ್ರತಿವರ್ಷದಂತೆ ಈ ವರ್ಷವೂ ರೇವಾ ಜೀವಮಾನ ಶ್ರೇಷ್ಠ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಾಲಿನ ಪ್ರಶಸ್ತಿ ವಿಜೇತರು ಪದ್ಮವಿಭೂಷಣ ಪ್ರಶಸ್ತಿ ವಿಜೇತರಾದ ಡಾ. ಕೆ. ಕಸ್ತೂರಿ ರಂಗನ್, ಕುಲಾಧಿಪತಿಗಳು, ಸೆಂಟ್ರಲ್ ವಿಶ್ವವಿದ್ಯಾಲಯ, ರಾಜಸ್ತಾನ, ಚೇರ್ಮನ್ (ಮಾಜಿ) ಇಸ್ರೋ ಮತ್ತು ಶ್ರೀಯುತ ಕೆ. ರಾಘವೇಂದ್ರರಾವ್, ಪ್ರಖ್ಯಾತ ಭಾರತೀಯ ಸಿನಿಮಾ ನಿರ್ದೇಶಕರು, ಕಥಾಸಂಕಲನಕಾರರು, ನಿರ್ಮಾಪಕರಿಗೆ ನೀಡಲಾಯಿತು, ಹಾಗೆಯೇ ರೇವಾ ಎಕ್ಸಲೆನ್ಸ್ ಪ್ರಶಸ್ತಿಯನ್ನು ಡಾ. ಸತೀಶ್ ರೆಡ್ಡಿ, ವೈಜ್ಞಾನಿಕ ಸಲಹೆಗಾರರು, ರಕ್ಷಣಾ ಮಂತ್ರಿ, ಭಾರತ ಸರ್ಕಾರ, ಆಖಆಔ ಚೇರ್ಮನ್, ನವದೆಹಲಿ ಅವರಿಗೆ ನೀಡಲಾಯಿತು.
ಜೀವಮಾನ ಶ್ರೇಷ್ಟ ಪ್ರಶಸ್ತಿಯನ್ನು ಪಡೆದಿರುವ ಡಾ. ಕೆ. ಕಸ್ತೂರಿ ರಂಗನ್ ರವರು ಪ್ರಶಸ್ತಿಯನ್ನು ಸ್ವೀಕರಿಸಿ, ವಿಶ್ವವಿದ್ಯಾಲಯದ ಪ್ರಗತಿಯ ಬಗ್ಗೆ ಬಹಳ ಸಂತೋಷ ವ್ಯಕ್ತಪಡಿಸಿದರು, ಇಲ್ಲಿರುವ ವ್ಯವಸ್ಥಾಪಕರು, ಬೋದಕ, ಭೋಧಕೇತರ ಹಾಗೂ ವಿದ್ಯಾರ್ಥಿಗಳ ಕೊಡುಗೆಯನ್ನು ಪ್ರಶಂಸಿದರು, ಅವರು ಮಾತನಾಡುತ್ತಾ ಸಂಶೋಧನೆ ಬಗ್ಗೆ ಬಹಳ ಒತ್ತು ಕೊಡಬೇಕು ಮತ್ತು ಅದರಿಂದ ನಮ್ಮ ರಾಷ್ಟ್ರದ ಆರ್ಥಿಕ ಅಭಿವೃದ್ದಿಗೆ ಶ್ರಮಿಸಬೇಕೆಂದು ಎಲ್ಲರಿಗೂ ಸಂದೇಶ ನೀಡಿದರು.
ಹಾಗೆಯೇ ಶ್ರೀ. ರಾಘವೇಂದ್ರರಾವ್ ತಮ್ಮ 50 ವರ್ಷದ ಸಿನಿಮಾ ರಂಗದ ಪಯಣದ ಅನುಭವವನ್ನು ಹಂಚಿಕೊಂಡರು, ಯುವಕು ನಮ್ಮ ದೇಶ್ ಪ್ರಗತಿಗಾಗಿ ತಮ್ಮನ್ನು ತಾವು ಸಮರ್ಪಣಾಭಾವದಿಂದ ತೊಡಗಿಸಿಕೊಳ್ಳಬೇಕೆಂದು, ತಮ್ಮ ತಾಯ್ನಾಡಿನ ಬಗ್ಗೆ ಹೆಮ್ಮ ಮತ್ತು ಗರ್ವವಿರಬೇಕೆಂದು ತಿಳಿಸಿದರು.
ಶ್ರೀಯುತ ಡಾ. ಸತೀಶ್‍ರೆಡ್ಡಿರವರ ಪರವಾಗಿ ಡಾ.ಸುಧೀರ್ ಕಾಮತ್‍ರವರು ರೇವಾ ಎಕ್ಸಲೆನ್ಸ್ ಪ್ರಶಸ್ತಿಯನ್ನು ಸ್ವೀಕರಿಸಿ, ರೇವಾ ವಿಶ್ವವಿದ್ಯಾಲಯಕ್ಕೆ ಶುಭಕೋರಿ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ರೇವಾ ಮಾಡುತ್ತಿರುವ ಸಂಶೋಧನೆಯನ್ನು ಪ್ರಶಂಸಿದರು.
"ಸಂಸ್ಥಾಪಕರ ದಿನಾಚರಣೆ"ಯ ಅಧ್ಯಕ್ಷತೆ ವಹಿಸಿದ್ದ ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಶ್ರೀಯುತ ಡಾ. ಪಿ. ಶ್ಯಾಮರಾಜುರವರು ಮಾತನಾಡುತ್ತಾ "ಕಲಿಕೆ ನಿರಂತರವಾದದ್ದು, ನಾವು ಕಲಿಯುವುದು ಬಹಳವಿದೆ. ರೇವಾ ಈ ಹಂತಕ್ಕೆ ಬರುವುದಕ್ಕೆ ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳೇ ಕಾರಣ" ಎಂದು ಶ್ಲಾಘಿಸಿದರು. ಈ ದಿನವು ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಪಿ.ಶ್ಯಾಮರಾಜು ರವರ ಹುಟ್ಟುಹಬ್ಬದ ದಿನವೂ ಆಗಿರುತ್ತದೆ.