ಸಾಂದರ್ಭಿಕ ಚಿತ್ರ 
ರಾಜ್ಯ

ರಾಜ್ಯದ ತಾಲ್ಲೂಕು ಹಂತದ ಆಸ್ಪತ್ರೆಯಲ್ಲಿ ಮೊದಲ ಪ್ರಕರಣ: ಮೊಣಕಾಲು ಚಿಪ್ಪು ಬದಲಾವಣೆ 

ರಾಜ್ಯದಲ್ಲಿ ಮೊದಲ ಬಾರಿಗೆ ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಮೊಣಕಾಲು ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿ ಯಾಗಿ ಮಾಡಲಾಗಿದೆ.

ಗಂಗಾವತಿ: ರಾಜ್ಯದಲ್ಲಿ ಮೊದಲ ಬಾರಿಗೆ ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಮೊಣಕಾಲು ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿ ಯಾಗಿ ಮಾಡಲಾಗಿದೆ.

ವಯೋಸಹಜ ಹಾಗೂ ಅತಿಯಾದ ಮೊಣಕಾಲಿನ ಮೇಲಿನ ಒತ್ತಡದಿಂದಾಗಿ ಸವೆಯುವ ಮೊಣಕಾಲು ಚಿಪ್ಪಿನ ಬದಲಾವಣೆ ( ಟೋಟಲ್‌ ನೀ ರಿಪ್ಲೇಸ್‌ಮೆಂಟ್) ಶಸ್ತ್ರಚಿಕಿತ್ಸೆಯನ್ನು ಇಬ್ಬರು ರೋಗಿಗಳಿಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯರು ಮಾಡಿದ್ದಾರೆ.

"ಆಯುಷ್ಮಾನ್ ‌ಭಾರತ ಯೋಜನೆಯಡಿ ಹೊಸಪೇಟೆ ತಾಲ್ಲೂಕಿ ಗ್ರಾಮೀಣ ಭಾಗದ ಶಾರದಮ್ಮ ಹಾಗೂ ಗಂಗಾವತಿಯ ಸಿದ್ದಪ್ಪ ಪೂಜಾರಿ ಎಂಬ ಇಬ್ಬರು ಹಿರಿಯರಿಗೆ ಈ ಚಿಕಿತ್ಸೆ ನೆರವೇರಿಸಲಾಗಿದೆ" ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಈಶ್ವರ ಸವುಡಿ ತಿಳಿಸಿದ್ದಾರೆ.

ಸುಮಾರು ಐದು ಗಂಟೆಗಳ ಕಾಲ ನಡೆದ ಶಸ್ತ್ರ ಚಿಕಿತ್ಸೆಯಲ್ಲಿ ವೈದ್ಯರಾದ ಸಲಾವುದ್ದೀನ್, ರೇಣುಕಾರಾಧ್ಯ, ಸುಜಾತ, ಶಿವರಾಜ ಪಾಟೀಲ್ ಪಾಲ್ಗೊಂಡಿದ್ದರು.

ಈಗಾಗಲೆ ಹತ್ತಾರು ಅಧುನಿಕ ವೈದ್ಯ ಸೌಲಭ್ಯ, ಸತತ ಎರಡು ಬಾರಿ ಕೇಂದ್ರ ಸರ್ಕಾರದ ಕಾಯಕಲ್ಪ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ತಾಲ್ಲೂಕು ಆಸ್ಪತ್ರೆ ಎಂಬ ಖ್ಯಾತಿವೆತ್ತ ಆಸ್ಪತ್ರೆ ಈಗ ಮತ್ತೊಂದು ಮೈಲಿಗಲ್ಲು ದಾಖಲಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel