ಆನೆಗೊಂದಿ ಉತ್ಸವಕ್ಕೆ ಸಂಭ್ರಮದ ಸಮಾರೋಪ: ನಟ ಯಶ್ ಭಾಗಿ 
ರಾಜ್ಯ

ಆನೆಗೊಂದಿ ಉತ್ಸವಕ್ಕೆ ಸಂಭ್ರಮದ ಸಮಾರೋಪ: ನಟ ಯಶ್ ಭಾಗಿ 

ಎರಡು ದಿನಗಳ ಕಾಲ ನಡೆದ ಐತಿಹಾಸಿಕ ಆನೆಗೊಂದಿ ಉತ್ಸವ ಅದ್ಧೂರಿ ಸಮಾರೋಪ ಕಂಡಿದ್ದು, ಸ್ಯಾಂಡಲ್ ವುಡ್ ಸ್ಟಾರ್ ನಟ ಯಶ್ ಭಾಗಿಯಾಗಿದ್ದರು. 

ಕೊಪ್ಪಳ: ಎರಡು ದಿನಗಳ ಕಾಲ ನಡೆದ ಐತಿಹಾಸಿಕ ಆನೆಗೊಂದಿ ಉತ್ಸವ ಅದ್ಧೂರಿ ಸಮಾರೋಪ ಕಂಡಿದ್ದು, ಸ್ಯಾಂಡಲ್ ವುಡ್ ಸ್ಟಾರ್ ನಟ ಯಶ್ ಭಾಗಿಯಾಗಿದ್ದರು. 

ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ನಟ ಯಶ್, ಯುವಕರಿಗೆ ಕೆರೆ ಉಳಿಸಲು ಮನವಿ ಮಾಡಿದ್ದಾರೆ. ಸಮಾರೋಪ ಸಮಾರಂಭದ ಬಳಿಕ ನಡೆದ ವಿವಿಧ ಕಾರ್ಯಕ್ರಮಗಳು ನೆರೆದಿದ್ದ ಪ್ರೇಕ್ಷಕರಿಗೆ ಮನೋರಂಜನೆ ನೀಡಿದವು.

ಜ್ಯೂನಿಯರ್ ಜಾನಕಿ ಹಾಡು ಒಂದು ಕಡೆ ಸಂಗೀತಾ ಮೂಲಕ ಮನರಂಜನೆ ನೀಡಿದರೆ, ರಾಕಿಂಗ್ ಸ್ಟಾರ್ ಯಶ್ ಆನೆಗೊಂದಿ ಉತ್ಸವಕ್ಕೆ ಬಂದು ಡೈಲಾಗ್ ಹೇಳಿ ಜನರಿಗೆ ಮನರಂಜನೆ ನೀಡಿದರು. ವಿಶೇಷವೇಂದರೆ, ಕೊಪ್ಪಳದ ಯಶೊಮಾರ್ಗದ ಬಗ್ಗೆ ಅವರು ಮಾತನಾಡಿದ್ದು, ಯುವಕರಿಗೆ ಪ್ರೆರಣೆ ನೀಡಿತು.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರ ಗ್ರಾಮದಲ್ಲಿ ತಾವು ಕೆರೆ ಹೂಳೆತ್ತಿದ ಬಗ್ಗೆ ಯಶ್ ಮಾತನಾಡಿದರು. ಯುವಕರಿಗೆ ಕೆರೆ ಉಳಿಸಲು ಯಶ್ ಮನವಿ ಮಾಡಿದ್ದು, ಜನ ಪ್ರತಿನಿಧಿಗಳು, ಅಧಿಕಾರಿಗಳು, ನೀವು ಮನಸ್ಸು ಮಾಡಿದರೆ ಕೊಪ್ಪಳಕ್ಕೆ ಬರದ ನಾಡು ಅನ್ನೋ ಹಣೆ ಪಟ್ಟಿ ಕಳಚಬಹುದು ಎಂದು ಹೇಳಿದರು. ಕೊಪ್ಪಳ ಜಿಲ್ಲೆ ನನಗೆ ಯಾವಾಗಲೂ ಅಚ್ಚು ಮೆಚ್ಚು, ಕೊಪ್ಪಳ ಜನರ ಆಶೀರ್ವಾದ ನನ್ನ ಮೇಲೆ ಇರಬೇಕೆಂದರು.

ಇನ್ನು ಮೊಬೈಲ್ ಮಲ್ಲಪ್ಪ ಎಂದು ಖ್ಯಾತಿ ಪಡೆದ ಧಾರವಾಡದ ಹಾಸ್ಯ ಕಲಾವಿದ ಜನರಿಗೆ ಸಖತ್ ಮನರಂಜನೆ ನೀಡಿದರು. ಬೆಂಗಳೂರಿನ ಚಿತ್ರತಂಡದ ಸಂತೆಯಿಂದ ನಡೆದ ಕಾರ್ಯಕ್ರಮಗಳು ನೋಡುಗರನ್ನ ತನ್ನತ್ತ ಸೆಳೆದವು. ಕಾರ್ಯಕ್ರಮದ ಕುರಿತು ಮಾತನಾಡಿದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಪ್ರತಿ ವರ್ಷ ಆನೆಗೊಂದಿ ಉತ್ಸವ ಆಚರಣೆ ಮಾಡುತ್ತೇವೆ ಎಂದು ಜನರಿಗೆ ಆಶ್ವಾಸನೆ ನೀಡಿದ್ದಾರೆ.

ಒಟ್ಟಾರೆ ಎರಡು ದಿನಗಳ ಕಾಲ ನಡೆದ ಆನೆಗೊಂದಿ ಉತ್ಸವಕ್ಕೆ ಸಂಭ್ರಮದ ತೆರೆ ಬಿದ್ದಿದೆ. ಕೆಲವು ಸಣ್ಣ ಪುಟ್ಟ ಗೊಂದಲಗಳನ್ನ ಹೊರತುಪಡಿಸಿದಅರೆ ಆನೆಗೊಂದಿ ಉತ್ಸವಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಕಳೆದ ಐದು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದ್ದ ಆನೆಗೊಂದಿ ಉತ್ಸವ ಈ ಬಾರಿ ಆಚರಣೆ ಮಾಡಿದ್ದು,ಈ ಭಾಗದ ಜನರಲ್ಲಿ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನ ಮರಕಳಿಸುವಂತೆ ಮಾಡ್ತು.

-ಬಸವರಾಜ ಕರುಗಲ್, ಕೊಪ್ಪಳ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT