ರಾಮನಗರ: ಬೆಂಗಳೂರು ದಕ್ಷಿಣ ತಾಲೂಕಿನ ದೇವಮಾಚೋಹಳ್ಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಉರುಳಿಬಿದ್ದ ಪರಿಣಾಮ ಬೆಂಗಳೂರಿನ ನಾಲ್ವರು ಯುವಕರು ಜಲಸಮಾಧಿಯಾಗಿದ್ದಾರೆ.
ಕಾರಿನಲ್ಲಿ ಐವರು ಯುವಕರು ಬೆಂಗಳೂರಿನಿಂದ ತುಮಕೂರಿನ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗಾಗೆ ಹೋಗುತ್ತಿದ್ದರು. ವೇಗವಾಗಿ ಕಾರನ್ನು ಚಲಾಯಿಸುತ್ತಿದ್ದರಿಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ. ಈ ವೇಳೆ ಕಾರಿನಲ್ಲಿ ನೀರು ತುಂಬಿಕೊಂಡಿದ್ದು ಕಾರಿನಿಂದ ಹೊರಬರಲಾಗದೆ ನಾಲ್ವರು ಮೃತಪಟ್ಟಿದ್ದು ಓರ್ವನ ಸ್ಥಿತಿ ಗಂಭೀರವಾಗಿದ್ದು ಆತನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನ ಅಗ್ರಹಾರದ ನಿವಾಸಿಗಳಾದ ಸುನೀಲ್, ಸಂತೋಷ್, ಮಂಜುನಾಥ್ ಹಾಗೂ ರಾಘವೇಂದ್ರ ಮೃತ ದುರ್ದೈವಿಗಳು.