ರಾಜ್ಯ

ಬಂಡೀಪುರದಲ್ಲಿ ಮೊದಲ ಬಾರಿ ಚಿಪ್ಪುಹಂದಿ ಗೋಚರ... ಅಳಿವಿನಂಚಿನ ಪ್ರಾಣಿ ರಕ್ಷಣೆ

Srinivas Rao BV

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಚಿಪ್ಪುಹಂದಿ ಕಾಣಿಸಿಕೊಂಡ ಘಟನೆ, ಗುಂಡ್ಲುಪೇಟೆ ತಾಲೂಕಿನ ಹಂಗಳಪುರದ ಜಮೀನಿನಲ್ಲಿ ನಡೆದಿದೆ.

ಹಂಗಳಪುರ ಗ್ರಾಮದ ಜಮೀನೊಂದರ ಟೊಮೆಟೊ ಬೆಳೆಗೆ ಹಾಕಲಾಗಿದ್ದ ಬಲೆಗೆ ಅಳಿವಿನಂಚಿನಲ್ಲಿರುವ ಚಿಪ್ಪುಹಂದಿ ಸಿಲುಕಿಕೊಂಡು ನರಳಾಡುತ್ತಿತ್ತು. ಈ ವೇಳೆ ಅರಣ್ಯ ಇಲಾಖೆ ಮಾಹಿತಿ ಪಡೆದು ಓಂಕಾರ್ ಅರಣ್ಯ ವಲಯಕ್ಕೆ ಬಿಟ್ಟಿದ್ದಾರೆ.ಪ್ರಾಣಿಗಳನ್ನು ಪತ್ತೆಹಚ್ಚಲು ಕ್ಯಾಮೆರಾ ಟ್ರಾಪ್ ಸೇರಿದಂತೆ ಇನ್ನಿತರ ಸಮೀಕ್ಷೆ ನಡೆಸಿದಾಗಲೂ ಚಿಪ್ಪು ಹಂದಿ ಇರುವುದು ಪತ್ತೆಯಾಗಿರಲಿಲ್ಲ ಎಂದು ಉನ್ನತಮೂಲಗಳು ಸ್ಪಷ್ಟಪಡಿಸಿವೆ.‌ಬಲೆಗೆ ಚಿಪ್ಪುಹಂದಿ ಸಿಲುಕಿಕೊಂಡು ನರಳಾಡುತ್ತಿತ್ತುಹುಳ-ಹುಪ್ಪಟೆ, ಕೀಟಗಳನ್ನು ತಿಂದು ಬದುಕುವ ಈ ನಿಶಾಚಾರಿ ಪ್ರಾಣಿ ಬೇಟೆಗಾರರ ಕೆಂಗಣ್ಣಿಗೆ ಗುರಿಯಾಗಿ ಅಳಿವಿನಂಚಿನಲ್ಲಿದೆ.

-ವರದಿ ಗುಳಿಪುರ ನಂದೀಶ ಎಂ

SCROLL FOR NEXT