ಸಂಗ್ರಹ ಚಿತ್ರ 
ರಾಜ್ಯ

ಪಾಂಡವಪುರ ತಹಸೀಲ್ದಾರ್ ಪ್ರೇಮ ವಿವಾಹ ವಿವಾದ: ಮಂಡ್ಯ ಎಸ್‍ಪಿ ಸಂಧಾನ

ತಾಲ್ಲೂಕು ತಹಸೀಲ್ದಾರ್ ಒಬ್ಬರ ಪ್ರೇಮ ವಿವಾಹ ವಿವಾದವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಇತ್ಯರ್ಥಪಡಿಸಲಾಯಿತು.

ಮಂಡ್ಯ: ತಾಲ್ಲೂಕು ತಹಸೀಲ್ದಾರ್ ಒಬ್ಬರ ಪ್ರೇಮ ವಿವಾಹ ವಿವಾದವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಇತ್ಯರ್ಥಪಡಿಸಲಾಯಿತು.

ಪಾಂಡವಪುರ ತಹಸೀಲ್ದಾರ್ ಪ್ರಮೋದ್ ಪಾಟೀಲ್ ಅವರ ಪ್ರೇಮ ವಿವಾಹದ ವಿವಾದವನ್ನೇ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಸಂಧಾನದ ಮೂಲಕ ಇತ್ಯರ್ಥಪಡಿಸಿದ್ದಾರೆ.

ಪ್ರಮೋದ್ ಕುಟುಂಬದವರು ದಿಢೀರನೆ ಮಂಗಳವಾರ ಮಂಡ್ಯಕ್ಕೆ ಆಗಮಿಸಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳನ್ನು ಮೌಖಿಕವಾಗಿ ಸಂಪರ್ಕಿಸಿ ತಮ್ಮ ಮಗ ಪ್ರೇಮ ವಿವಾಹವಾಗುತ್ತಿರುವದರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು.

ಪೋಷಕರ ಮನವಿಯ ಮೇರೆಗೆ  ಪ್ರಮೋದ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯ ಮೇರೆಗೆ ಕಚೇರಿಗೆ ಬರುವಂತೆ ತಿಳಿಸಲಾಗಿತ್ತು. ಅದರಂತೆ  ಪಾಂಡವಪುರ ತಹಸೀಲ್ದಾರ್ ಪ್ರಮೋದ್ ಪಾಟೀಲ್ ಅವರು ಪತ್ನಿಯೊಂದಿಗೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿ ಕಳೆದ ಅಕ್ಟೋಬರ್ ನಲ್ಲಿ ಪ್ರೇಮವಿವಾಹವಾಗಿರುವ ಬಗ್ಗೆ ತಮ್ಮ ಪ್ರೇಮವಿವಾಹವನ್ನು ದೃಢೀಕರಿಸಿದರು.
 
ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ತಾವು ಅಕ್ಟೋಬರ್ ತಿಂಗಳಲ್ಲಿ ದೇವಾಲಯವೊಂದರಲ್ಲಿ ಮದುವೆಯಾಗಿದ್ದೇವೆ. ಪ್ರೇಮವಿವಾಹವಾಗಿರುವ ತನ್ನ ಪತ್ನಿ ಕೂಡ ಗೆಜೆಟೆಡ್ ಅಧಿಕಾರಿಣಿಯಾಗಿದ್ದು, ಹೈಕೋರ್ಟ್ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಸಂಗತಿಯನ್ನು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಅವರೆದರು ತಮ್ಮ ಪ್ರೇಮ ವಿವಾಹ ಸಂಗತಿಯನ್ನು ಪ್ರಮೋದ್ ಪಾಟೀಲ್ ತಿಳಿಸಿದರು.

ಪ್ರಮೋದ್ ಪಾಟೀಲ್ ಅವರಿಗೆ ಮನೆಯವರು ಬೇರೆ ಹುಡುಗಿ ಮದುವೆ ನಿಶ್ಚಯಿಸಿದ್ದರು. ಆದರೆ, ತಾನು ಪ್ರೀತಿಸುತ್ತಿದ್ದ ಬೇರೆ ಜಾತಿಯ ಯುವತಿಯನ್ನೇ ಮದುವೆಯಾಗುವುದಾಗಿ ಪ್ರಮೋದ್ ಪಾಟೀಲ್ ತನ್ನ ಕುಟುಂಬದವರಿಗೆ ತಿಳಿಸಿದ್ದರು. ಆದರೂ ಈವರೆಗೆ ಸುಮ್ಮನಿದ್ದ ಪ್ರಮೋದ್ ಕುಟುಂಬದವರು ದಿಢೀರನೆ ಮಂಗಳವಾರ ಮಂಡ್ಯಕ್ಕೆ ಆಗಮಿಸಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳನ್ನು ಸಂಪರ್ಕಿಸಿ ಮೌಖಿಕವಾಗಿ ವಿಷಯ ತಿಳಿಸಿದ್ದರು. ಇದರಿಂದಾಗಿ  ಪ್ರಮೋದ್ ಅವರು ತಾನು ಪ್ರೇಮವಿವಾಹವಾಗಿರುವ ವಿಷಯವನ್ನು ಪತ್ನಿಯೊಂದಿಗೆ ಮಂಡ್ಯ ಎಸ್ಪಿ ಕಚೇರಿಗೆ ಆಗಮಿಸಿ ತಮ್ಮ ಪ್ರೇಮ ಪ್ರಕರಣವನ್ನು ವಿವರವಾಗಿ ಬಹಿರಂಗಪಡಿಸಿದರು.

ಈ ಸಂದರ್ಭದಲ್ಲಿ ಪ್ರಮೋದ್ ಅವರ ಸೋದರ ಮತ್ತು ಸ್ನೇಹಿತರು, ಪಾಂಡವಪುರ ಉಪ ವಿಭಾಗಾಧಿಕಾರಿ ಶೈಲಜಾ ಅವರೂ ಜತೆಗಿದ್ದರು.

ವರದಿ: ನಾಗಯ್ಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

SCROLL FOR NEXT