ರಾಜ್ಯ

ಈ ವಾರಾಂತ್ಯ, ಪಕ್ಷಿ ಪ್ರಿಯರ ಪಾಲಿಗೆ ನೆಚ್ಚಿನ ತಾಣವಾಗಲಿದೆ ನಂದಿ ಬೆಟ್ಟ

Nagaraja AB

ಬೆಂಗಳೂರು: ಬೆಂಗಳೂರಿಗೆ ಸನ್ನಿಹದಲ್ಲಿರುವ ಪ್ರಸಿದ್ಧ ಚಾರಣ ತಾಣ ನಂದಿಬೆಟ್ಟದಲ್ಲಿ ಈ ವಾರಾಂತ್ಯದಲ್ಲಿ  ಹಕ್ಕಿ ಹಬ್ಬ ನಡೆಯಲಿದೆ. ಸೂರ್ಯೋದಯ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಖ್ಯಾತಿ ಪಡೆದಿರುವ ನಂದಿ ಬೆಟ್ಟದಲ್ಲಿ ಈ ಬಾರಿ ಹಕ್ಕಿ ಹಬ್ಬವನ್ನು ಆಯೋಜಿಸಲಾಗಿದೆ.

ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ ಇದೇ ಮೊದಲ ಬಾರಿಗೆ ಬೆಂಗಳೂರು ಹೊರವಲಯದಲ್ಲಿ ಹಕ್ಕಿ ಹಬ್ಬವನ್ನು ಆಯೋಜಿಸುತ್ತಿದ್ದು, ಅವನತಿ ಅಂಚಿನಲ್ಲಿರುವ ಪಕ್ಷಿಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.  ಕಳೆದ ವರ್ಷ ಬೀದರ್  ಹಾಗೂ ಮಂಗಳೂರಿನ ಪಿಲುಕುಲಾ ನಿಸರ್ಗಧಾಮದಲ್ಲಿ 2017ರಲ್ಲಿ ಹಂಪಿಯ ದಾರೋಜಿ ಕರಡಿ ವನ್ಯದಾಮದಲ್ಲಿ ಪಕ್ಷಿ ಹಬ್ಬವನ್ನು ಆಯೋಜಿಸಲಾಗಿತ್ತು. 

ಎರಡು ದಿನಗಳ ಕಾರ್ಯಕ್ರಮಕ್ಕೆ 75 ಜನರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಪರಿಸರ ಪ್ರವಾಸೋದ್ಯಮ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ನಂದಿಬೆಟ್ಟ, ಬ್ರಹ್ಮಗಿರಿ ಮತ್ತು ಚನ್ನಗಿರಿ ವ್ಯಾಪ್ತಿಯಲ್ಲಿನ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ  ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಪಕ್ಷಿಗಳನ್ನು ತೋರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹಿಮಾಲಯದಿಂದ ನಂದಿಬೆಟ್ಟಕ್ಕೆ ವಲಸೆ ಬರುವ ಪಕ್ಷಿಗಳನ್ನು ಹಕ್ಕಿ ಹಬ್ಬದ ವೇಳೆ ವೀಕ್ಷಿಸಬಹುದಾಗಿದೆ ಎಂದು ಪಕ್ಷಿ ಪ್ರಿಯರೊಬ್ಬರು ಹೇಳಿದ್ದಾರೆ. ವಿಶ್ವದಾದ್ಯಂತ ಬರುವ ತಜ್ಞರೊಂದಿಗೆ ಪಕ್ಷಿ ಪ್ರಿಯರು ಸಂವಾದ ನಡೆಸಬಹುದಾಗಿದೆ

SCROLL FOR NEXT