ರಾಜ್ಯ

ಹೆಚ್'ಡಿಕೆ ಭೂ ಅಕ್ರಮ ಪರಿಶೀಲನೆ ವೇಳೆ ಹಿರೇಮಠ ಮೇಲೆ ದುಷ್ಕರ್ಮಿಗಳಿಂದ ದಾಳಿ

Manjula VN

ರಾಮನಗರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಡಿ.ಸಿ.ತಮಣ್ಣ ಅವರ ವಿರುದ್ಧದ ಬಿಡದಿಯ ಕೇತಗಾನಹಳ್ಳಿ ಭೂಕಬಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಪರಿಸ್ಥಿತಿ ತಿಳಿದುಕೊಳ್ಳಲು ಸ್ಥಳಕ್ಕೆ ತೆರಳಿದ್ದ ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ. 

ಹಿರೇಮಠ ಸೇರಿದಂತೆ ಪದಾಧಿಕಾರಿಗಲಾದ ರವಿಕೃಷ್ಣಾ ರೆಡ್ಡಿ, ಪ್ರಭುಗೌಡ ಪಾಟೀಲ್, ಸಿಎನ್ ದೀಪಕ್, ಮುಕ್ಕಾಬಿ, ಬಿಎಸ್ ಮಲ್ಲಿಕಾರ್ಜುನಯ್ಯ ಮತ್ತು ಶಿವರಾಮ್ ಭೇಟಿ ನೀಡಿದ ವೇಳೆ ಕುಮಾರಸ್ವಾಮಿಯವರ ಬೆಂಬಲಿಗರು ಮೊಟ್ಟೆಗಳನ್ನು ಎಸೆದು ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ. 

ಘಟನೆ ಕುರಿತು ಮಾಹಿತಿ ನೀಡಿರುವ ಹಿರೇಮಠ ಅವರು, ಪೊಲೀಸ್ ಸಿಬ್ಬಂದಿ ನಮ್ಮ ಜೊತೆಗಿದ್ದರೂ ಹನುಮಂತೇಗೌಡ ಮತ್ತು ಕೆಲವರು ನಮಗೆ ಬೆದರಿಕೆ ಹಾಕಿದ್ದೂ ಅಲ್ಲದೆ, ನಮ್ಮ ಕಾಲಿನ ಚಕ್ರಗಳ ಗಾಳಿ ತೆಗೆದು ಉದ್ಧಟತನ ಪ್ರದರ್ಶಿಸಿದರು ಎಂದು ಹೇಳಿದ್ದಾರೆ. 

ಬಳಿಕ ಪೊಲೀಸರು ಚಕ್ರಗಳಿಗೆ ಗಾಳಿ ತುಂಬಿಸಲು ವಾಹನವನ್ನು ತೆಗೆದುಕೊಂಡು ಹೋದಾಗ ತಾವು ಗ್ರಾಮದಲ್ಲಿ ಕುಳಿತಿದ್ದೆವು.ಆ ವೇಳೆ ಕೆಲವರು ಕೋಳಿ ಮೆಟ್ಟೆಗಲನ್ನು ನಮ್ಮಮೇಲೆ ಎಸೆದು ದೌರ್ಜನ್ಯ ಎಸಗಿಸಿದರು. ನಂತರ ವಿಷಯವನ್ನು ಪೊಲೀಸರಿಗೆ ಕರೆ ಮಾಡಿ ತಿಳಿಸಿದಾಗ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ರಕ್ಷಣೆ ನೀಡಿ, ತಮ್ಮನ್ನು ಬಿಡಗಿ ಪೊಲೀಸ್ ಠಾಣೆಗೆ ಕರೆತಂದರು ಎಂದು ತಿಳಿಸಿದ್ದಾರೆ. 

SCROLL FOR NEXT