ರಾಜ್ಯ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ: ಟೈಮರ್ ಜೊತೆಗೆ ಬಾಂಬ್ ಸಂಪರ್ಕ ಕೊಟ್ಟಿರಲಿಲ್ಲ ಉಗ್ರರು

Manjula VN

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಸಜೀವ ಬಾಂಬ್ ಜೊತೆಗೆ ಉಗ್ರರು ಟೈಮರ್ ಸಂಪರ್ಕ ಕಲ್ಪಿಸಿರಲಿಲ್ಲ ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ.

ನಿಲ್ದಾಣದಲ್ಲಿ ಪತ್ತೆಯಾಗಿದ್ದ ಬಾಂಬ್'ಗೂ, ಟೈಮರ್'ಗೂ ಸಂಪರ್ಕ ಕಲ್ಪಿಸಿರಲಾಗಿರಲಿಲ್ಲ. ಬಾಂಬ್ ನಲ್ಲಿದ್ದ ಟೈಮರ್ ಆಫ್ ಆಗಿತ್ತು. ಒಂದು ವೇಳೆ ಉಗ್ರರು ಟೈಮರ್ ಗೆ ಬಾಂಬ್ ಕನೆಕ್ಷನ್ ನೀಡಿದ್ದಿದ್ದರೆ, ಅದನ್ನು ಆತ ತನಗೆ ಬೇಕಾದ ಸಮಯದಲ್ಲಿ ಸ್ಫೋಟಿಸಲು ಅವಕಾಶವಿರುತ್ತಿತ್ತು. ಆದರೆ, ಸ್ಫೋಟ ಸಂಭವಿಸದೆ ಇದ್ದುದರ ಹಿಂದೆ ಕೇವಲ ಭಯದ ವಾತಾವರಣ ಮೂಡಿಸುವ ಉದ್ದೇಶ ಮಾತ್ರವೇ ಇತ್ತೇ ಎಂಬ ಶಂಕೆಗಳು ಇದೀಗ ವ್ಯಕ್ತವಾಗುತ್ತಿವೆ. 

ಮತ್ತೊಂದೆಡೆ ಆ ದುಷ್ಕರ್ಮಿ ಬಾಂಬ್ ಮತ್ತು ಟೈಮರ್ ನಡುವೆ ಸಂಪರ್ಕ ಕಲ್ಪಿಸಲು ಮರೆತು ಹೋಗಿರಬಹುದು ಅಥವಾ ಕಲ್ಪಿಸಿದ ಸಂಪರ್ಕ ಆತನ ಪ್ರಯಾಣ ಅವಧಿಯಲ್ಲಿ ಕಡಿತಗೊಂಡಿರಬಹುದು ಎಂದೂ ಕೂಡ ವಿಶ್ಲೇಷಿಸಲಾಗುತ್ತಿದೆ. ದುಷ್ಕರ್ಮಿ ಬಸ್ಸಿನಲ್ಲಿ ಬಂದಿದ್ದ. ಬಜ್ಪೆ ಕಡೆ ತೆರಳುವ ಬಸ್ಸು ಸದಾ ಜನರಿಂದ ತುಂಬಿರುತ್ತದೆ. ಈ ನಡುವೆ ತಿಕ್ಕಾಟದಲ್ಲಿ ಬ್ಯಾಗ್ ನಲ್ಲಿಟ್ಟ ಬಾಂಬ್'ನ ಸಂಪರ್ಕ ವ್ಯವಸ್ಥೆ ಕಡಿತಗೊಂಡಿರಬಹುದು ಎಂದು ಹೇಳಲಾಗುತ್ತಿದೆ.

SCROLL FOR NEXT