ರಾಜ್ಯ

ದಾವೊಸ್: ಕೃಷಿ ಬೆಳವಣಿಗೆ, ಗ್ರಾಮೀಣಾಭಿವೃದ್ಧಿಗೆ ವಿಶ್ವ ಆರ್ಥಿಕ ಸಮಾವೇಶದಲ್ಲಿ ಒತ್ತು ನೀಡಿದ ಸಿಎಂ ಯಡಿಯೂರಪ್ಪ 

Sumana Upadhyaya

ಬೆಂಗಳೂರು:ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ವಿಡ್ಜರ್ಲ್ಯಾಂಡ್ ನ ದಾವೊಸ್ ನಲ್ಲಿ ವಿಶ್ವ ಆರ್ಥಿಕ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.


ನಿನ್ನೆ ಮಂಗಳವಾರ ಸಮಾವೇಶದ ಒಂದನೇ ದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಕೃಷಿ ಪ್ರಗತಿ ಬಗ್ಗೆ ಒತ್ತು ನೀಡಿದರು. ರೈತರ ಆಸಕ್ತಿಗಳನ್ನು ನೋಡಿಕೊಂಡು ಮತ್ತು ಇನ್ನಷ್ಟು ಉದ್ಯೋಗ ಸೃಷ್ಟಿಗೆ ಹೂಡಿಕೆದಾರರು ಮತ್ತು ಕೈಗಾರಿಕೋದ್ಯಮಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಕರೆ ನೀಡಿದರು. ರೈತರ ಆರ್ಥಿಕ ಬೆಳವಣಿಗೆ ಮತ್ತು ಗ್ರಾಮೀಣಾಭಿವೃದ್ಧಿ ಕಡೆಗೆ ಹೆಚ್ಚು ಗಮನ ಹರಿಸಬೇಕೆಂದು ಹೂಡಿಕೆದಾರರಿಗೆ ಕರೆ ನೀಡಿದರು. ಇದರಿಂದ ರೈತರ ಆತ್ಮಹತ್ಯೆ ತಡೆಗಟ್ಟಬಹುದು ಎಂದಿದ್ದಾರೆ.


ನಮ್ಮ ರೈತರು ಮತ್ತು ಗ್ರಾಮೀಣದ ಯುವಕರ ಬಗ್ಗೆ ಗಮನ ಹರಿಸುವ ಹೂಡಿಕೆದಾರರು ಮತ್ತು ಕೈಗಾರಿಕೋದ್ಯಮಿಗಳ ಬಗ್ಗೆ ಜಾಗ್ರತೆ ವಹಿಸಲು ನಾನು ಸಿದ್ದನಿದ್ದೇನೆ. ನಗರಗಳ ಅಭಿವೃದ್ಧಿ ಯೋಜನೆಗಳು ಮತ್ತು ಆಹಾರ ಸಂಸ್ಕರಣೆ ಘಟಕಗಳಲ್ಲಿ ಭಾಗಿಯಾಗಿರುವ 2 ಸಾವಿರ ವಾಟ್ ಕಂಪೆನಿ ಕರ್ನಾಟಕದಲ್ಲಿ ಆಹಾರ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆ ಮಾಡಲು ಮುಂದಾಗಿವೆ.

SCROLL FOR NEXT