ಬೆಂಗಳೂರು: ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನಲ್ಲಿ ರೈಲ್ವೆ ಬೋಗಿ ಮತ್ತು ವ್ಯಾಗನ್ ಗಳ ಬಿಡಿ ಭಾಗಗಳನ್ನು ತಯಾರಿಸುವ ಕಾರ್ಖಾನೆ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಸಂಬಂಧ ರೈಲ್ವೆ ಇಲಾಖೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪ್ರಸ್ತಾವನೆ ಸಲ್ಲಿಸಿದೆ, ಒಂದು ಸಿಎಂ ಇದಕ್ಕೆ ಸಮ್ಮತಿಸಿದರೇ ಕಿತ್ತೂರಿನಲ್ಲಿ ರೈಲ್ವೆ ಬಿಡಿ ಭಾಗಗಳ ತಯಾರಿಕಾ ಕೇಂದ್ರ ಆರಂಭವಾಗುತ್ತದೆ.
ದೇಶದಲ್ಲಿ ರಾಯ್ ಬರೇಲಿ ಬಿಟ್ಟರೇ ಈ ಕಾರ್ಖಾನೆ ಕಿತ್ತೂರಿನಲ್ಲಿ ಸ್ಥಾಪನೆಯಾದಂತಾಗುತ್ತದೆ.
ರೈಲಿನ ಬೋಗಿ, ವ್ಯಾಗನ್ ಮತ್ತು ಟ್ರೈನ್ ಸೆಟ್ ಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಹೀಗಾಗಿ ತಯಾರಿಕೆಯ ಮತ್ತೊಂದು ಘಟಕ ಸ್ಥಾಪಿಸಲು ಯೋಜಿಸಲಾಗಿದೆ.
ರೈಲ್ವೆ ಇಲಾಖೆ ಅಥವಾ ರಾಜ್ಯ ಸರ್ಕಾರಇದಕ್ಕಾಗಿ ಯಾವುದೇ ವೆಚ್ಚವನ್ನು ಮಾಡುವುದಿಲ್ಲ, ಏಕೆಂದರೆ ತಯಾರಕರು ಭೂಮಿಗಾಗಿ ಹಣ ಪಾವತಿಸಿ ನಂತರ ಅವರ ಘಟಕಗಳನ್ನು ಇಲ್ಲಿ ಸ್ಥಾಪಿಸಬೇಕಾಗುತ್ತದೆ.