ಹ್ಯಾರಿಸ್ ಪುತ್ರ ನಲಪಾಡ್ 
ರಾಜ್ಯ

ನಿಗೂಢ ಸ್ಫೋಟದಲ್ಲಿ ಶಾಸಕ ಹ್ಯಾರಿಸ್'ಗೆ ಗಾಯ: ಉದ್ದೇಶಪೂರ್ವಕ ದಾಳಿ ಎಂದ ಪುತ್ರ ನಲಪಾಡ್

ವಿವೇಕನಗರದ ವನ್ನಾರಪೇಟೆಯಲ್ಲಿ ಸಂಭವಿಸಿದ ಅನುಮಾನಾಸ್ಪದ ಸ್ಫೋಟದಲ್ಲಿ ಶಾಸಕ ಹ್ಯಾರಿಸ್ ಅವರು ಗಾಯಗೊಂಡಿದ್ದು, ಸ್ಫೋಟ ಉದ್ದೇಶಪೂರ್ವಕವಾಗಿತ್ತು ಎಂದು ಹ್ಯಾರಿಸ್ ಪುತ್ರ ನಲಪಾಡ್ ಅವರು ಹೇಳಿದ್ದಾರೆ. 

ಬೆಂಗಳೂರು: ವಿವೇಕನಗರದ ವನ್ನಾರಪೇಟೆಯಲ್ಲಿ ಸಂಭವಿಸಿದ ಅನುಮಾನಾಸ್ಪದ ಸ್ಫೋಟದಲ್ಲಿ ಶಾಸಕ ಹ್ಯಾರಿಸ್ ಅವರು ಗಾಯಗೊಂಡಿದ್ದು, ಸ್ಫೋಟ ಉದ್ದೇಶಪೂರ್ವಕವಾಗಿತ್ತು ಎಂದು ಹ್ಯಾರಿಸ್ ಪುತ್ರ ನಲಪಾಡ್ ಅವರು ಹೇಳಿದ್ದಾರೆ. 

ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ನಮ್ಮ ತಂದೆಯನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿ ಕಾರ್ಯಕ್ರಮದಲ್ಲಿ ಕೆಲವು ದುಷ್ಕೃತ್ಯ ಎಸಗಿದ್ದಾರೆ. ಇದು ಖಂಡಿತವಾಗಿಯೂ ಪಟಾಕಿಯಿಂದಾಗಿ ಸಂಭವಿಸಿದ ಸ್ಫೋಟವಲ್ಲ. ಕಚ್ಚಾ ಬಾಂಬ್ ಬಳಕೆಯಾಗಿರುವ ಅನುಮಾನವಿದೆ ಎಂದು ಆಸೋಪಿಸಿದ್ದಾರೆ. 

ನಮ್ಮ ಕ್ಷೇತ್ರದಲ್ಲಿ ಯಾರೂ ವೈರಿಗಳಿಲ್ಲ. ದೇವರ ದಯೆಯಿಂದ ಪ್ರಾಣಾಪಾಯದಿಂದ ತಂದೆ ಪಾರಾಗಿದ್ದಾರೆ. ಅವರಿಗೆ ಕಾಲಿಗೆ ಸುಟ್ಟು ಗಾಯಗಳಾಗಿವೆ ಎಂದು ತಿಳಿಸಿದ್ದಾರೆ. 

ಕಾರ್ಯಕ್ರಮಕ್ಕೆ ನಾನು 5 ನಿಮಿಷ ತಡವಾಗಿ ತೆರಳಿದ್ದೆ. ಅಷ್ಟರಲ್ಲಾಗಲೇ ಘಟನೆ ನಡೆದು ಹೋಗಿತ್ತು. ಕೂಡಲೇ ಆಸ್ಪತ್ರೆಗೆ ಧಾವಿಸಿದೆ. ಇತರೆ ಮೂವರೂ ಕೂಡ ಸುರಕ್ಷಿತವಾಗಿದ್ದಾರೆಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಆಯೋಗದ ವಿವಾದ: CEC Gyanesh Kumar ಭಾಗಿಯಾಗಬೇಕಿದ್ದ ಯುವಕರೊಂದಿಗಿನ ಕಾರ್ಯಕ್ರಮ ದಿಢೀರ್ ರದ್ದು!

'ಯಾರು ಚಿತ್ರೀಕರಿಸುತ್ತಿದ್ದರು?': ಜಮುಯಿ ದುರಂತಕ್ಕೆ ವಿಪಕ್ಷಗಳೇ ಕಾರಣ-ಬಿಜೆಪಿ ಸಚಿವ

ವಿಶ್ವಸಂಸ್ಥೆ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ

ಬಿಹಾರದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ? ಮಂದಾರ್ ಬೆಟ್ಟದಲ್ಲಿ ಯುವತಿಗೆ ಕಾಮುಕರಿಂದ ಕಿರುಕುಳ; ಒಂದೇ ವಾರದಲ್ಲಿ 3ನೇ ಪ್ರಕರಣ..!

ಸಿಕ್ಕಿಂನಲ್ಲಿ ವರುಣನ ಆರ್ಭಟ: Rimbi ಗ್ರಾಮದಲ್ಲಿ ಭೀಕರ ಭೂಕುಸಿತ; ಹಲವು ಮನೆಗಳು, ಸರ್ಕಾರಿ ವಸತಿ ಗೃಹಗಳು ಧ್ವಂಸ..!