ರಾಜ್ಯ

'ಟೀ ಸ್ಪೂನ್ ಶುಗರ್' ಅಂದರೆ 10 ಸಾವಿರ ರೂ!: ಇದು ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ಬಳಕೆಯಾಗುವ ಲಂಚದ ಕೋಡ್ ವರ್ಡ್ 

ರೌಡಿಗಳು ಕೋಡ್ ವರ್ಡ್ ಬಳಸುವುದನ್ನು ಕೇಳಿದ್ದೇವೆ. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಬಳಸುವ ಕೋಡ್ ವರ್ಡ್ ಕೇಳಿದ್ದೀರಾ?ಅದು ಲಂಚ ಪಡೆಯಲು ಬಳಕೆಯಾಗುವ ಶಬ್ದ. 

ಬೆಂಗಳೂರು:ರೌಡಿಗಳು ಕೋಡ್ ವರ್ಡ್ ಬಳಸುವುದನ್ನು ಕೇಳಿದ್ದೇವೆ. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಬಳಸುವ ಕೋಡ್ ವರ್ಡ್ ಕೇಳಿದ್ದೀರಾ?ಅದು ಲಂಚ ಪಡೆಯಲು ಬಳಕೆಯಾಗುವ ಶಬ್ದ. 


ದಾಖಲೆಗಳ ದಾಖಲಾತಿಗೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಲಂಚ ಕೇಳಲು ಅಧಿಕಾರಿಗಳು ಬಳಸುವ ಕೋಡ್ ವರ್ಡ್ ನ್ನು ನಿನ್ನೆ ಹೈಕೋರ್ಟ್ ನಲ್ಲಿ ನ್ಯಾಯಾಧೀಶರೊಬ್ಬರು ಬಿಚ್ಚಿಟ್ಟಿದ್ದಾರೆ. 


ತುಮಕೂರಿನ ಹಿರಿಯ ಸಬ್ ರಿಜಿಸ್ಟ್ರಾರ್ ಒಬ್ಬರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಆಲಿಸಿದ ನ್ಯಾಯಾಧೀಶ ಬಿ ಎ ಪಾಟೀಲ್, ಅರ್ಜಿದಾರರ ಪರ ವಕೀಲ ಕೆ ಸತೀಶ್ ವಾದ ನಡೆಸುತ್ತಿದ್ದಾಗ ಈ ಕೋಡ್ ವರ್ಡ್ ನ್ನು ಬಹಿರಂಗಗೊಳಿಸಿದ್ದಾರೆ.


ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ಕೆಲಸ ಹೇಗೆ ಆಗುತ್ತದೆ ಎಂದು ನನಗೆ ಗೊತ್ತಿದೆ. ಸೇಲ್ ಡೀಡ್, ಗಿಫ್ಟ್ ಡೀಡ್, ವಿಲ್, ರಿಲೀಸ್ ಡೀಡ್, ಲೀಸ್ ಡೀಡ್ ಮೊದಲಾದವುಗಳ ದಾಖಲಾತಿ ಮಾಡಿಕೊಡಲು ಸಬ್ ರಿಜಿಸ್ಟ್ರಾರ್ ಸಾರ್ವಜನಿಕರಿಂದ ಲಂಚ ಕೇಳಲು ದಾಖಲೆಗಳ ರಿಜಿಸ್ಟ್ರೇಷನ್ ಆದ ನಂತರ ಪೆಟ್ಟಿ ಶಾಪ್ ನಿಂದ ಟೀ ತರಿಸಲು ಹೇಳುತ್ತಾರೆ. ದಾಖಲಾತಿ ಮಾಡಿಸುವವರು ಸಬ್ ರಿಜಿಸ್ಟ್ರಾರ್ ಬಳಿ ನಿಮಗೆ ಸಕ್ಕರೆ ಇಲ್ಲದೆ ಟೀ ಬೇಕಾ, ಸಕ್ಕರೆ ಹಾಕಿ ಟೀ ಬೇಕಾ ಎಂದು ಕೇಳುತ್ತಾರೆ, ಆಗ ಸಬ್ ರಿಜಿಸ್ಟ್ರಾರ್ ಒಂದು ಟೀ ಸ್ಪೂನ್, ಎರಡು ಟೀ ಸ್ಪೂನ್, ಮೂರು ಟೀ ಸ್ಪೂನ್ ಹೀಗೆ ದಾಖಲಾತಿ ಮಾಡುವ ಆಸ್ತಿಯ ಮೌಲ್ಯವನ್ನು ಆಧರಿಸಿ ಎಷ್ಟು ಟೀ ಸ್ಪೂನ್ ಶುಗರ್ ಟೀ ಎಂದು ಹೇಳುತ್ತಾರೆ.


ಇಲ್ಲಿ ದಾಖಲಾತಿ ಮಾಡಿಸಿಕೊಳ್ಳಲು ಹೋದ ಸಾರ್ವಜನಿಕರಿಗೆ ಈ ವಂಚನೆ ಗೊತ್ತಾಗುವುದಿಲ್ಲ, ಪಾಪ, ಆಫೀಸರ್ ಎಷ್ಟು ಒಳ್ಳೆಯವರು, ಏನೂ ಕೇಳಲಿಲ್ಲ, ಒಂದು ಕಪ್ ಟೀ ಮಾತ್ರ ಕೇಳಿದರು ಎಂದುಕೊಳ್ಳುತ್ತಾರೆ. ಇಲ್ಲಿ ಸ್ಪೂನ್ ಸಕ್ಕರೆ ಎಂದರೆ ಅದು ಲಂಚದ ಕೋಡ್ ವರ್ಡ್ ಎಂದು ಗೊತ್ತಾಗುವುದಿಲ್ಲ, ಒಂದು ಸ್ಪೂನ್ ಎಂದರೆ 10 ಸಾವಿರ ಎಂದರ್ಥ. 


ಎರಡು ಸ್ಪೂನ್ ಶುಗರ್ ಟೀ ಎಂದರೆ 20 ಸಾವಿರ, ಮೂರು ಸ್ಪೂನ್ ಎಂದರೆ 30 ಸಾವಿರ ರೂಪಾಯಿ ನೀಡಿ ಒಂದು ಕಪ್ ಟೀ ಕುಡಿಯಬೇಕು ಎಂದು ಹೈಕೋರ್ಟ್ ನಲ್ಲಿ ನ್ಯಾಯಮೂರ್ತಿಗಳು ವಿವರಿಸಿದರು.


ನ್ಯಾಯಾಧೀಶ ಪಾಟೀಲರು ಹೀಗೆ ಹೇಳುತ್ತಿದ್ದಂತೆ ಕೋರ್ಟ್ ಸಭಾಂಗಣದಲ್ಲಿ ನೆರೆದಿದ್ದ ಎಲ್ಲರೂ ನಗೆಗಡಲಲ್ಲಿ ತೇಲಿದರು.
ತುಮಕೂರಿನ ಸಬ್ ರಿಜಿಸ್ಟ್ರಾರ್ ಎಸ್ ರಾಘವೇಂದ್ರ, ತಮ್ಮ ವಿರುದ್ಧ ತುಮಕೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೇಸನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ನಕಲಿ ದಾಖಲೆಗಳನ್ನು ಆಧರಿಸಿ ಭಾರೀ ಆಸ್ತಿ ದಾಖಲಾತಿ ಮಾಡಿಸಿದ್ದಕ್ಕೆ ಅವರ ವಿರುದ್ಧ ಕೇಸು ದಾಖಲಾಗಿತ್ತು. 


ಹೈಕೋರ್ಟ್ ರಾಘವೇಂದ್ರ ವಿರುದ್ಧ ವಿಚಾರಣೆಗೆ ನಾಲ್ಕು ವಾರಗಳ ತಡೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT