ಬಸವನಗುಡಿ ಪೊಲೀಸ್ ಠಾಣೆ 
ರಾಜ್ಯ

ಪತಿಯ ವಿರುದ್ಧ ವರದಕ್ಷಿಣೆ ದೂರು ನೀಡಿದ ವಿದೇಶಿ ಪತ್ನಿ

ವಿದೇಶಿ ಮೂಲದ ವಿವಾಹಿತೆ‌ ಮಹಿಳೆಯೋರ್ವಳು ತನ್ನ ಗಂಡನ ವಿರುದ್ಧ  ವರದಕ್ಷಿಣೆ ಕಿರುಕುಳ ಆರೋಪಿಸಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು  ನೀಡಿದ್ದಾರೆ.

ಬೆಂಗಳೂರು: ವಿದೇಶಿ ಮೂಲದ ವಿವಾಹಿತೆ‌ ಮಹಿಳೆಯೋರ್ವಳು ತನ್ನ ಗಂಡನ ವಿರುದ್ಧ  ವರದಕ್ಷಿಣೆ ಕಿರುಕುಳ ಆರೋಪಿಸಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು  ನೀಡಿದ್ದಾರೆ.

ದಕ್ಷಿಣ ಅಮೇರಿಕಾದ ಚಿಲಿ ದೇಶದ ಸಂತ್ರಸ್ತೆ ಕಾರ್ಲಾ ಮಾರ್ಟೂಸ್ ಬ್ರಾವೂ ಎಂಬ ಮಹಿಳೆ ತನ್ನ ಗಂಡ ವಿಕ್ರಂ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾರ್ಲಾ ಅವರು, ಭರತನಾಟ್ಯ, ಕಥಕ್ ಕಲಿಯಲು 2017 ರಲ್ಲಿ ಬೆಂಗಳೂರಿಗೆ ಬಂದಿದ್ದರು. ಈ  ಸಂದರ್ಭದಲ್ಲಿ ಕಾರ್ಲಾ ಅವರಿಗೆ  ಹೈದರಾಬಾದ್ ಮೂಲದ ವಿಕ್ರಂ ಮಾಡಾ ಜತೆಗೆ  ಪ್ರೇಮಾಂಕುರವಾಗಿದ್ದು, 2018 ರ ಜುಲೈನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು.

ಮದುವೆ  ಬಳಿಕ ಜೆ.ಪಿ.ನಗರದ ಪುಟ್ಟೇನಹಳ್ಳಿಯಲ್ಲಿ ವಾಸವಾಗಿದ್ದರು. 2019 ರಲ್ಲಿ ಪತ್ನಿ  ಕಾರ್ಲಾಳ ಚಿಲಿ ದೇಶಕ್ಕೆ ಹೋಗಿ ಬಂದಿದ್ದರು. ಆ ಬಳಿಕ ಪತ್ನಿ ಮನೆಯ ಸ್ಥಿತಿಗತಿ ಕಂಡು  ಪತಿ ಹಣಕ್ಕಾಗಿ ಕಿರುಕುಳ ನೀಡಿರುವುದಲ್ಲದೇ, ಪೋನ್ ಚೆಕ್ ಮಾಡಿ ಪತಿ ಕಿರುಕುಳ  ನೀಡುತ್ತಿದ್ದಾಗಿ ಕಾರ್ಲಾ ಆರೋಪಿಸಿದ್ದಾರೆ. ವಿಚ್ಛೇದನ ನೀಡಲು ಪರಸ್ಪರ ನಿರ್ಧರಿಸಿ ಮಾತನಾಡಲು ತೆರಳಿದ್ದಾಗ, ಪತಿ ವಿಕ್ರಂ ಮಾಡಾ ತನ್ನ ಮೇಲೆ ಹಲ್ಲೆ ಮಾಡಿರುವುದಾಗಿ ಕಾರ್ಲಾ ಆರೋಪಿಸಿದ್ದಾರೆ.

ಸದ್ಯ ಬಸವನಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಲಸೆ ವೀಸಾ ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಲಸೆ ನೀತಿ ಮತ್ತಷ್ಟು ಕಠಿಣ, ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌..!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!