ರಾಜ್ಯ

ಸರ್ಕಾರಿ ಕಾರ್ಯಕ್ರಮದ‌ ವೇದಿಕೆ ದುರುಪಯೋಗ: ಇಬ್ಬರು ವರದಿಗಾರರ ಮೇಲೆ ದೂರು

Srinivasamurthy VN

ಗಂಗಾವತಿ: ಆನೆಗೊಂದಿ ಉತ್ಸವದ ವಿದ್ಯಾರಣ್ಯ ವೇದಿಕೆಯಲ್ಲಿ ಕವನ ವಾಚಿಸಿ ಮೋದಿಯನ್ನು ಟೀಕಿಸಿದ್ದಕ್ಕೆ  ಹಾಗೂ ಅದನ್ನು ಪ್ರಸಾರ ಮಾಡಿದ್ದಕ್ಕೆ ಇಬ್ಬರು ಪತ್ರಕರ್ತರ ಮೇಲೆ ನಗರಠಾಣೆಯಲ್ಲಿ ರಾತ್ರಿ ದೂರು ದಾಖಲಾಗಿದೆ.

ಖಾಸಗಿ ವಾಹಿನಿಯೊಂದರ ಕೊಪ್ಪಳ ಜಿಲ್ಲಾ ವರದಿಗಾರ ಸೀರಾಜ್ ಬಿಸರಳ್ಳಿ, ಹಾಗೂ ಕನ್ನಡ ನೆಟ್ ಡಾ.ಕಾಂ ಎಂಬ ಸಂಸ್ಥೆಯ ಸಂಪಾದಕ ರಾಜಾಭಕ್ಷಿ ವಿರುದ್ಧ ಇಲ್ಲಿನ ನಗರ ಠಾಣೆಯಲ್ಲಿ ಶಿವು ಅರಕೇರಿ ಎಂಬುವವರು ದೂರು ದಾಖಲಿಸಿದ್ದಾರೆ.

ಉತ್ಸವದ ಸಂದರ್ಭದಲ್ಲಿ  ವಿದ್ಯಾರಣ್ಯ ವೇದಿಕೆಯಲ್ಲಿ ನಡೆದಿದ್ದ ಕವಿಗೋಷ್ಠಿಯಲ್ಲಿ ಕವನ ವಾಚಿಸುವ ನೆಪದಲ್ಲಿ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಹಾಗೂ ಪೌರತ್ವ ಕಾಯ್ದೆಯ ಸಿಎಎ, ಎನ್ಆರ್ಸಿಯ ಬಗ್ಗೆ ಟೀಕೆ ಮಾಡಿದ್ದಾರೆ. ಇದನ್ನು ಜ.14ರಂದು ಕನ್ನಡ ಡಾಟ್ ನೆಟ್ ಎಂಬ ಆನ್ಲೈನ್ ನಲ್ಲಿ  ಸಂಪಾದಕ ರಾಜಾಭಕ್ಷಿ ಪ್ರಸಾರ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸರ್ಕಾರಿ ಕಾರ್ಯಕ್ರಮದ‌ ವೇದಿಕೆ ಬಳಸಿಕೊಂಡು ಸರ್ಕಾರವನ್ನು ಟೀಕಿಸಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಿವಕುಮಾರ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.

SCROLL FOR NEXT