ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಬೆಂಗಳೂರು: ಮೊಬೈಲ್ ನಿಂದ ಶೌಚಾಲಯದಲ್ಲಿದ್ದ ಯುವತಿಯ ಚಿತ್ರೀಕರಣ, ಆರೋಪಿ ಬಂಧನ

ಶೌಚಾಲಯಕ್ಕೆ ತೆರಳಿದ್ದ ಯುವತಿಯನ್ನು ಹಿಂಬಾಲಿಸಿ ವಿಡಿಯೋ ಮಾಡುತ್ತಿದ್ದ ರೆಸ್ಟೋರೆಂಟ್ ಸಿಬ್ಬಂದಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಬುದ್ಧಕಾಂತ್ ದೇಬನಾಥ್
Lingaraj Badiger
Updated On : 30 Jan 2020, 4:18 pm

ಬೆಂಗಳೂರು: ಶೌಚಾಲಯಕ್ಕೆ ತೆರಳಿದ್ದ ಯುವತಿಯನ್ನು ಹಿಂಬಾಲಿಸಿ ವಿಡಿಯೋ ಮಾಡುತ್ತಿದ್ದ ರೆಸ್ಟೋರೆಂಟ್ ಸಿಬ್ಬಂದಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. 

ಒಡಿಶಾ ಮೂಲದ ಬುದ್ಧಕಾಂತ್ ದೇಬನಾಥ್ ಬಂಧಿತ ಆರೋಪಿ. 

ಇದೇ ತಿಂಗಳ 26ರಂದು ರಾತ್ರಿ 8ರ ಸುಮಾರಿಗೆ ಯುವತಿಯೋರ್ವಳು ತನ್ನ ಸ್ನೇಹಿತರೊಂದಿಗೆ ನಗರದ ಖಾಸಗಿ ರೆಸ್ಟೋರೆಂಟ್ ವೊಂದಕ್ಕೆ ತೆರಳಿದ್ದಳು. ಈ ಸಂದರ್ಭದಲ್ಲಿ ಊಟದ ಮಧ್ಯೆಯೇ ಯುವತಿ ಮಹಿಳಾ ಶೌಚಾಲಯಕ್ಕೆ ಹೋದಾಗ, ಆಕೆಯನ್ನು ಹಿಂಬಾಲಿಸಿದ ಆರೋಪಿ, ಬಾತ್ ರೂಂ ಮೇಲ್ಭಾಗದಿಂದ ಯುವತಿಯನ್ನು ಚಿತ್ರೀಕರಿಸಿದ್ದನು. ಮೊಬೈಲ್ ನ ಫ್ಲ್ಯಾಶ್‌‌‌ ಬ್ಯಾಕ್ ಆನ್ ಮಾಡಿ ಚಿತ್ರೀಕರಣ ಮಾಡುತ್ತಿರುವುದನ್ನು ಗಮನಿಸಿದ ಯುವತಿ ಗಾಬರಿಯಿಂದ ಹೊರಗೆ ಬಂದು ರೆಸ್ಟೋರೆಂಟ್ ಸಿಬ್ಬಂದಿಗೆ ದೂರು ನೀಡಿದ್ದಳು. 

Advertisement

Advertisement

ಶೌಚಾಲಯದಲ್ಲಿ ಆ ದಿನ ಮಹಿಳಾ ಸಿಬ್ಬಂದಿ ಇಲ್ಲದಿರುವುದರಿಂದ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. 

ಆರೋಪಿಯನ್ನು ಗುರುತಿಸಿ ಯುವತಿ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅಶೋಕ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement