ಸಂಗ್ರಹ ಚಿತ್ರ 
ರಾಜ್ಯ

ಕೊರೋನಾ ಸೋಂಕಿತರಿಗೆ ಆಯುರ್ವೇದ ಔಷಧ?: ಕ್ಲಿನಿಕಲ್ ಪ್ರಯೋಗ ಬಹುತೇಕ ಯಶಸ್ವಿ

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಆತಂಕದ ನಡುವಲ್ಲೇ ಆಯುರ್ವೇದ ಔಷಧಿಯೊಂದು ಜನರಲ್ಲಿ ಆಶಾಭಾವನೆಯನ್ನು ಮೂಡಿಸಲು ಆರಂಭಿಸಿದೆ. 

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಆತಂಕದ ನಡುವಲ್ಲೇ ಆಯುರ್ವೇದ ಔಷಧಿಯೊಂದು ಜನರಲ್ಲಿ ಆಶಾಭಾವನೆಯನ್ನು ಮೂಡಿಸಲು ಆರಂಭಿಸಿದೆ. 

ಡಾ.ಗಿರಿಧರ ಕಜೆ ಭೌಮ್ಯ ಹಾಗೂ ಸಾತ್ವ್ಯ ಎಂಬ ಮಾತ್ರೆ ಸಂಶೋಧಿಸಿದ್ದರು. 14 ಔಷಧೀಯ ಸಸ್ಯಗಳಿಂದ ತಯಾರಿಸಲಾದ ಈ ಔಷಧವನ್ನು ಕೊರೋನಾ ಸೋಂಕಿತರ ಮೇಲೆ ಪ್ರಯೋಗ ನಡೆಸಲು ಜೂ.5ರಂದು ಕ್ಲಿನಿಕಲ್ ಟ್ರಯಲ್'ಗೆ ನೋಂದಾಯಿಸಿದ್ದರು, ಇದಕ್ಕೆ ಬೆಂಗಳೂರಿನ ಮೆಡಿಕಲ್ ಕಾಲೇಜು ಎಥಿಕ್ಸ್ ಕಮಿಟಿಯು ಅನುಮತಿ ನೀಡಿತ್ತು. 

ಜೂ.7ರಿಂದ 25ರವರೆಗೆ 10 ಮಂದಿ ರೋಗ ಲಕ್ಷಣಗಳುಳ್ಳ 23 ವರ್ಷದಿಂದ 65 ವಯಸ್ಸಿನ ಸೋಂಕಿತರಿಗೆ ಔಷಧ ನೀಡಲಾಗಿತ್ತು. 3-10 ದಿನದಲ್ಲಿ ಎಲ್ಲರಿಗೂ ಸೋಂಕು ನೆಗೆಟಿವ್ ಬಂದಿದೆ. ಪ್ರತಿ ರೋಗಿಗೆ ರೂ.90 ಗಳಿಂದ ರೂ.180 ಮಾತ್ರ ಖರ್ಚಾಗಿದೆ ಎಂದು ತಿಳಿದುಬಂದಿದೆ. 

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್ಐ) ನ ಕೋವಿಡ್ ಕೋರ್ ಸಮಿತಿಯ ನೋಡಲ್ ಅಧಿಕಾರಿ ಡಾ.ಸ್ಮಿತಾ ಎಸ್ ಸೆಗು ಪ್ರತಿಕ್ರಿಯೆ ನೀಡಿ, ಆಯುರ್ವೇದ ಹಾಗೂ ಆಯುಷ್ ಔಷಧಿಗಳ ಚಿಕಿತ್ಸಾ ಪ್ರಯೋಗಾಗಳು ಮುಂದುವರೆದಿವೆ. ಆದರೆ, ಇದನ್ನು ನಿಯಮಿತ ಚಿಕಿತ್ಸೆಯ ಜೊತೆಗೆ ನೀಡಿದಲಾಗುತ್ತಿದೆ. ಇದರಿಂದ ರೋಗಿಗಳಲ್ಲಿ ಧನಾತ್ಮಕ ಬೆಳವಣಿಗೆಗಳು ಕಂಡು ಬರುತ್ತಿದೆ ಎಂದು ಹೇಳಿದ್ದಾರೆ. 

ಈ ಹಿಂದೆ ನಾನು ಆಯುರ್ವೇದ ಔಷದಿ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದೆ. ಬಳಿಕ ಬಿಎಂಸಿಆರ್ಐ ಎಥಿಕ್ಸ್ ಸಮಿತಿ ಅನುಮತಿ ನೀಡಿತ್ತು. 10 ಮಂದಿ ಸೋಂಕಿತರ ಮೇಲೆ ಪ್ರಯೋಗ ನಡೆಸಲಾಗಿದ್ದು, ಉತ್ತಮ ಫಲಿತಾಂಶ ಬಂದಿದೆ. ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೂ ಔಷಧಿ ನೀಡಲಾಗುತ್ತಿದೆ. ಸೋಂಕಿತ ವ್ಯಕ್ತಿಗಳಿಗೆ ದಿನದಲ್ಲಿ ಮೂರು ಬಾರಿ ಆಯುರ್ವೇದ ಮಾತ್ರೆಗಳನ್ನು ನೀಡಲಾಗುತ್ತಿದೆ. ವೈರಸ್ ನಿಂದ ಬಳಲುತ್ತಿರುವ ಸಾವಿರಾರು ಜನರಿದೆ ನಾನು ಈ ವರೆಗೂ ಚಿಕಿತ್ಸೆ ನೀಡಿದ್ದೇನೆಂದು ಗಿರಿಧರ್ ಕಜೆಯವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ'.. 'ನಿಮ್ಮನ್ನು ಈರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ'; Kichcha Sudeepಗೆ ಪತ್ರ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: ಉಲ್ಟಾ ಹೊಡೆದ Falahari Maharaj, ಕ್ಷಮೆಯಾಚನೆ! video

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!