ರಾಜ್ಯ

ರಾಜ್ಯದ 57 ಪ್ರಯೋಗಾಲಯಗಳಲ್ಲಿ ಇನ್ನೂ 27,000 ಮಾದರಿಗಳ ವೈದ್ಯಕೀಯ ವರದಿ ಬಾಕಿಯಿದೆ!

Manjula VN

ಬೆಂಗಳೂರು: ರಾಜ್ಯದ 57 ಪ್ರಯೋಗಾಲಯಗಳಲ್ಲಿ 27,000 ಮಾದರಿಗಳ ವೈದ್ಯಕೀಯ ವರದಿ ಇನ್ನೂ ಬಾಕಿಯಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಈ ಕುರಿತು ರಾಜ್ಯ ಕೋವಿಡ್-19 ವಾರ್ ರೂಮ್ ಮಾಹಿತಿ ನೀಡಿದ್ದು, 26,903 ಕೊರೋನಾ ಮಾದರಿಗಳ ಪರೀಕ್ಷೆ ಪ್ರಗತಿಯಲ್ಲಿದ್ದು, ರಾಜ್ಯದಾದ್ಯಂತ 57 ಆರ್‌ಟಿ-ಪಿಸಿಆರ್ ಖಾಸಗಿ ಮತ್ತು ಸರ್ಕಾರಿ ಪ್ರಯೋಗಾಲಯಗಳ ಈ ವೈದ್ಯಕೀಯ ವರದಿಗಳಿಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದೆ. 

ಜುಲೈ.4ರವರೆಗು ಕೆಲ ಪ್ರಯೋಗಾಲಯಗಳು ತಮ್ಮ ಸಾಮರ್ಥ್ಯ ಮೀರಿ ಪರೀಕ್ಷೆಗಳನ್ನು ನಡೆಸುತ್ತಿದ್ದು, ಇನ್ನೂ ಕೆಲವು ಗುರಿಗಳಿಂತಲೂ ಕಡಿಮೆ ಪರೀಕ್ಷೆಗಳನ್ನು ಮಾಡುತ್ತಿವೆ ಎಂದು ತಿಳಿಸಿವೆ. 

ಕೆಲ ಜಿಲ್ಲಾ ಪ್ರಯೋಗಾಲಯಗಳು ಕಡಿಮೆ ಸಾಮರ್ಥ್ಯವನ್ನು ಹೊಂದಿದ್ದು, ಪರೀಕ್ಷಾ ಯಂತ್ರಗಳ ಕ್ರಮಬದ್ಧತೆ, ಲ್ಯಾಬ್ ಟೆಕ್ನಿಷಿಯನ್ಸ್ ಗಳಲ್ಲಿ ವೈರಸ್ ಪತ್ತೆಯಾಗುತ್ತಿವೆ. ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಯೋಗಾಲಯಗಳನ್ನು ಮುಚ್ಚುವಂತಹ ಪರಿಸ್ಥಿತಿಗಳು ಎದುರಾಗುತ್ತಿವೆ. ಮುಚ್ಚಿದ ಪ್ರಯೋಗಾಲಯಗಳಲ್ಲಿ ಸಂಗ್ರಹಿಸಲಾಗಿದ್ದ ಮಾದರಿಗಳನ್ನು ಮತ್ತೊಂದು ಪ್ರಯೋಗಲಾಯಕ್ಕೆ ಸ್ಥಳಾಂತರಿಸಲಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಂದಾಗಿ ವೈದ್ಯಕೀಯ ವರದಿಗಳು ತಡವಾಗಿ ಬರುತ್ತಿವೆ ಎಂದು ಹೇಳಿದೆ. 

ಡಾ.ಸಿಎನ್.ಮಂಜುನಾಥ್ ಅವರು ಮಾತನಾಡಿ, ರಾಜ್ಯದ ಸಾಕಷ್ಟು ಲ್ಯಾಬ್ ಟೆಕ್ನಿಷಿಯನ್ಸ್, ಮೈಕ್ರೋಬಯಾಲಜಿಸ್ಟ್'ಗಳಲ್ಲಿ ವೈರಸ್ ದೃಢಪಡುತ್ತಿವೆ. ಅಂತಹ ಪ್ರಯೋಗಾಲಯಗಳನ್ನು ಮುಚ್ಚಲೇಬೇಕಾದ ಪರಿಸ್ಥಿತಿ ಎದುರಾಗುತ್ತಿವೆ. ಇಂತಹ ಪ್ರಕರಣಗಳು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಮತ್ತು ನಿಮ್ಹಾನ್ಸ್ ಪ್ರಯೋಗಾಲಯಗಳು ಮತ್ತು ಮಂಗಳೂರಿನ ಮತ್ತೊಂದು ಪ್ರಯೋಗಾಲಯದಲ್ಲಿ ನಂಟು ಹೊಂದಿರುತ್ತವೆ. ಪರೀಕ್ಷಾ ವರದಿಗಳು ತಡವಾಗುತ್ತಿರುವುದಕ್ಕೆ ಇದು ಪ್ರಮುಖ ಕಾರಣವೆಂದೇ ಹೇಳಬಹುದು. ನಿಮ್ಹಾನ್ಸ್‌ನಲ್ಲಿ ತರಬೇತಿ ಪಡೆದ ಬ್ಯಾಕಪ್ ತಂತ್ರಜ್ಞರ ತಂಡವನ್ನು ಹೊಂದಲು ನಾವು ಯೋಜಿನೆ ರೂಪಿಸುತ್ತಿದ್ದು, ಇದರಿಂದ ಸಂಕಷ್ಟದಲ್ಲಿರುವ ಪ್ರಯೋಗಾಲಯಗಳಿಗೆ ಈ ತಂತ್ರಜ್ಞರು ಹೋಗಿ ಪರೀಕ್ಷೆಗಳನ್ನು ನಡೆಸಲಿದ್ದಾರೆಂದು ತಿಳಿಸಿದ್ದಾರೆ. 

ಪ್ರಯೋಗಾಲಯಗಳ ಸಾಮರ್ಥ್ಯ ಹೆಚ್ಚಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಪರೀಕ್ಷೆಗಾಗಿ ಕಾಯುವ ಅವಧಿಯನ್ನು ಕಡಿಮೆ ಮಾಡಲು  ಪ್ರಯೋಗಾಲಯಗಳ ನಡುವೆ ಮಾದರಿಗಳ ಮರುಹಂಚಿಕೆ ಮಾಡುವ ಕಾರ್ಯ ಮಾಡುತ್ತಿದ್ದೇವೆಂದು ಆರೋಗ್ಯ ಆಯುಕ್ತ ಪಂಕಜ್ ಕುಮಾರ್ ಪಾಂಡೆಯವರು ಹೇಳಿದ್ದಾರೆ.

SCROLL FOR NEXT