ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಜೆಡಿಎಸ್ ಎಂಎಲ್ ಸಿ ಬೋಜೇಗೌಡರಿಗೆ ಕೊರೋನಾ ಸೋಂಕು

ಜೆಡಿಎಸ್​​ ವಿಧಾನಪರಿಷತ್ ಸದಸ್ಯ ಬೋಜೆಗೌಡರಿಗೆ ಕೋವಿಡ್​​-19 ಪಾಸಿಟಿವ್​​ ದೃಢವಾಗಿದೆ, ಇತ್ತೀಚೆಗಷ್ಟೇ ಜೆಡಿಎಸ್​​ ವಿಧಾನಪರಿಷತ್ ಸದಸ್ಯ ಬೋಜೇಗೌಡ ಕೊರೋನಾ ಪರೀಕ್ಷೆ ತಪಾಸಣೆಗೊಳಗಾಗಿದ್ದರು.

ಭೋಜೇಗೌಡ
Shilpa D
Updated On : 8 Jul 2020, 1:42 pm

ಬೆಂಗಳೂರು: ಜೆಡಿಎಸ್​​ ವಿಧಾನಪರಿಷತ್ ಸದಸ್ಯ ಬೋಜೆಗೌಡರಿಗೆ ಕೋವಿಡ್​​-19 ಪಾಸಿಟಿವ್​​ ದೃಢವಾಗಿದೆ, ಇತ್ತೀಚೆಗಷ್ಟೇ ಜೆಡಿಎಸ್​​ ವಿಧಾನಪರಿಷತ್ ಸದಸ್ಯ ಬೋಜೇಗೌಡ ಕೊರೋನಾ ಪರೀಕ್ಷೆ ತಪಾಸಣೆಗೊಳಗಾಗಿದ್ದರು. ಈಗ ಬೋಜೇಗೌಡರ​​​ ಕೊರೋನಾ ರಿಪೋರ್ಟ್​ ಬಂದಿದ್ದು, ಸೋಂಕು ಇರುವುದು ಧೃಡಪಟ್ಟಿದೆ. 

ಹೀಗಾಗಿ ಇವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿರಿಸಿ ಕೋವಿಡ್​​-19 ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರದ ನಿಯಮದ ಪ್ರಕಾರ ಬೋಜೆಗೌಡ 14 ದಿನ ಹೋಮ್​​ ಕ್ವಾರಂಟೈನ್​​ನಲ್ಲಿ ಇರಬೇಕಾಗಿದೆ. ಅಲ್ಲಿಯತನಕ ತಮ್ಮ ಆರೋಗ್ಯದ ಬಗ್ಗೆ ಮಾತ್ರ ಗಮನಹರಿಸಬೇಕಿದೆ. 

ಏನಾದರೂ ಸಮಸ್ಯೆ ಇದ್ದರೆ ಕೂಡಲೇ ವೈದ್ಯರ ಗಮನಕ್ಕೆ ತರಬೇಕಿದೆ. ಕ್ಷೇತ್ರದ ಜನ, ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ಫೋನ್​​ನಲ್ಲಿ ಮಾತ್ರ ಸಂಪರ್ಕಕ್ಕೆ ಸಿಗಬಹುದು. ಎರಡು ವಾರಗಳ ಕಾಲ ಯಾರ ಭೇಟಿಗೂ ಅವಕಾಶವಿಲ್ಲ.
 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement