ರಾಜ್ಯ

ಸಾಮಾಜಿಕ ಅಂತರದ ಲಕ್ಷ್ಮಣ ರೇಖೆ ದಾಟದಿರಿ- ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ 

Nagaraja AB

ಬೆಂಗಳೂರು: ಲಕ್ಷಣರಹಿತ ಹಾಗೂ ಕಡಿಮೆ ಲಕ್ಷಣವುಳ್ಳ ಕೋವಿಡ್ ಸೋಂಕಿತರಿಗಾಗಿ ಬೆಂಗಳೂರಿನ ನೆಲಮಂಗಲದಲ್ಲಿ ದೇಶದಲ್ಲೇ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಸೇವೆಗೆ ಸಿದ್ಧಪಡಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. 

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,10,100 ಹಾಸಿಗೆ ಯನ್ನು ಒಳಗೊಂಡ ಕೋವಿಡ್ ಕೇರ್ ಸೆಂಟರ್ ನಲ್ಲಿ  100 - 200 ಜನರಿಗೆ  ಒಬ್ಬ ವೈದ್ಯರಂತೆ 600 ವೈದ್ಯರು,1000 ನರ್ಸ್‌ಗಳು ಇನ್ನಿತರ ಆರೋಗ್ಯ ಯೋಧರು ಬೇಕಾಗಿದ್ದು ಎಲ್ಲವನ್ನೂ ಸರ್ಕಾರ ವ್ಯವಸ್ಥಿತವಾಗಿ ನಿರ್ವಹಿಸುತ್ತಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಕೊರೋನ ನಿಯಂತ್ರಿಸಲು 8 ವಲಯಗಳಾಗಿ ವಿಂಗಡಿಸಲಾಗಿದ್ದು ಪ್ರತಿ ವಲಯಕ್ಕೆ ಒಬ್ಬ ಸಚಿವರುಗಳಂತೆ ಡಾ.ಅಶ್ವತ್ಥ ನಾರಾಯಣ್, ಆರ್.ಅಶೋಕ್, ಸುರೇಶ್ ಕುಮಾರ್,ಸೋಮಣ್ಣ, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಗೋಪಾಲಯ್ಯ ಹಾಗೂ ಎಸ್.ಆರ್.ವಿಶ್ವನಾಥ್ ಸೇರಿದಂತೆ ಶಾಸಕರು,ಒಬ್ಬ ಹಿರಿಯ ಐಎ‌ಎಸ್ ಅಧಿಕಾರಿ,ಕಾರ್ಪೊರೇಟರ್ ಗಳನ್ನು
ಒಳಗೊಂಡ ಟಾಸ್ಕ್ ಫೋರ್ಸ್‌ನ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಟ್ರೇಸಿಂಗ್ ಮತ್ತು ಟ್ರ್ಯಾಕಿಂಗ್ ಮಾಡಲು ಕಷ್ಟಸಾಧ್ಯವಾಗಿದೆ.ಇನ್ನು ಮುಂದೆ ಇದನ್ನು ಕಟ್ಟುನಿಟ್ಟಾಗಿ ನಿರ್ವಹಿಸಲಾಗುವುದು.ಸಾರ್ವಜನಿಕರು ಸರ್ಕಾರ ಜೊತೆಗೆ ಸಹಕಾರ ನೀಡಬೇಕು, ಸಾಮಾಜಿಕ ಅಂತರದ ಲಕ್ಷ್ಮಣ ರೇಖೆ ದಾಟಬೇಡಿ  ಎಂದು ಅವರು ಮನವಿ ಮಾಡಿದರು.

SCROLL FOR NEXT