ರಾಜ್ಯ

ಕೊರೋನಾ ಶಂಕಿತ ಗರ್ಭಿಣಿಯರಿಗೆ ವಿಲ್ಸನ್ ಗಾರ್ಡನ್ ಆಸ್ಪತ್ರೆ ನಿಗದಿ: ಬಿಬಿಎಂಪಿ ಆದೇಶ

Nagaraja AB

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕೋರೋನಾ ಶಂಕಿತ ಗರ್ಭಿಣಿಯರ ಪರೀಕ್ಷೆಗಾಗಿ ವಿಲ್ಸನ್ ಗಾರ್ಡನ್ ನ ಹೆರಿಗೆ ಆಸ್ಪತ್ರೆಯನ್ನು ಮೀಸಲಿರಿಸಿ ಬಿಬಿಎಂಪಿ ಆರೋಗ್ಯಾಧಿಕಾರಿ ಆದೇಶ ಹೊರಡಿಸಿದ್ದಾರೆ. 

ಹೆರಿಗೆಗೆಂದು ದಾಖಲಾದ ಗರ್ಭಿಣಿಯರಲ್ಲಿ ಸೋಂಕು ದೃಢಪಟ್ಟಲ್ಲಿ, ಆಸ್ಪತ್ರೆಯನ್ನು ಸೋಂಕು ನಿವಾರಣಾ ಔಷಧಿ ಸಿಂಪಡಿಸಿ ಸ್ವಚ್ಛಗೊಳಿಸಬೇಕಿರುವುದರಿಂದ ಗರ್ಭಿಣಿಯರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಪ್ರತ್ಯೇಕ ಆಸ್ಪತ್ರೆಯ ಅಗತ್ಯವಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. 

ಈಗಾಗಲೇ ಎಲ್ಲಾ ಗರ್ಭಿಣಿಯರಿಗೆ ಪ್ರಸವದ 15 ದಿನಗಳ ಮುನ್ನ ಗಂಟಲು ದ್ರವದ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ಅವುಗಳ ವರದಿ ಬರುವುದು ವಿಳಂಬವಾದಲ್ಲಿ ಗರ್ಭಿಣಿಯರು ಕೋವಿಡ್ ಫಲಿತಾಂಶ ಅರಿಯದೆಯೇ ಬಿಬಿಎಂಪಿ ರೆಫರಲ್ ಆಸ್ಪತ್ರೆ ಮತ್ತು ಮೆಟರ್ನಿಟಿ ಹೋಂಗಳಿಗೆ ದಾಖಲಾಗುತ್ತಾರೆ. ಇವರಲ್ಲಿ ಅನೇಕರು ಸೋಂಕಿತರಾಗುವುದು ದೃಢಪಡುತ್ತಿರುವುದು ಇತ್ತೀಚಿಗೆ ಬೆಳಕಿಗೆ ಬಂದಿದೆ. ಈಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ ಎಂದು ಸುತ್ತೋಲೆ ತಿಳಿಸಿದೆ.

SCROLL FOR NEXT