ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ 
ರಾಜ್ಯ

ವಿಜಯಪುರ ವಿಮಾನ ನಿಲ್ದಾಣಕ್ಕೆ ಕ್ಯಾಬಿನೆಟ್ ಅನುಮೋದನೆ: ಕಾರ್ಯಾಚರಣೆ ಪ್ರಾರಂಭಕ್ಕೆ 18 ತಿಂಗಳ ಗಡುವು

ಉತ್ತರ ಕರ್ನಾಟಕದ ಅಭಿವೃದ್ದಿಗಾಗಿ ಅತ್ಯಂತ ಮುಖ್ಯವಾಗಿರುವ ವಿಜಯಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ರಾಜ್ಯ ಸಚಿವ ಸಂಪುಟ ಗುರುವಾರ ಒಪ್ಪಿಗೆ ಸೂಚಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದಾದರೆ 2022ರ ಪ್ರಾರಂಭಕ್ಕೆ ಇಲ್ಲಿಂದ ಮೊದಲ ವಿಮಾನ ಹಾರಾಟ ಪ್ರಾರಂಭವಾಗಲಿದೆ.

ವಿಜಯಪುರ: ಉತ್ತರ ಕರ್ನಾಟಕದ ಅಭಿವೃದ್ದಿಗಾಗಿ ಅತ್ಯಂತ ಮುಖ್ಯವಾಗಿರುವ ವಿಜಯಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ರಾಜ್ಯ ಸಚಿವ ಸಂಪುಟ ಗುರುವಾರ ಒಪ್ಪಿಗೆ ಸೂಚಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದಾದರೆ 2022ರ ಪ್ರಾರಂಭಕ್ಕೆ ಇಲ್ಲಿಂದ ಮೊದಲ ವಿಮಾನ ಹಾರಾಟ ಪ್ರಾರಂಭವಾಗಲಿದೆ.

ವಿಜಯಪುರ ನಗರದಿಂದ 15 ಕಿ.ಮೀ ದೂರದಲ್ಲಿ ನಿರ್ಮಾಣವಾಗಲಿರುವ ವಿಮಾನ ನಿಲ್ದಾಣ ಬುರವಪುರ ಹಾಗೂ ಮಧುಬನಿ ಗ್ರಾಮಗಳ 727 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗಲಿದೆ.

220 ಕೋಟಿ ರೂ.ಗಳ ವಿಮಾನ ನಿಲ್ದಾಣದ ಮೊದಲ ಹಂತಕ್ಕೆ ಅನುಮತಿ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಹೇಳಿದ್ದಾರೆ. "ಹಂತ -1 ಕ್ಕೆ 95 ಕೋಟಿ ರೂ. ವೆಚ್ಚವಾಗಲಿದ್ದು, 18 ತಿಂಗಳ ಗಡುವು ನೀಡಲಾಗಿದೆ. ಈ ಹಂತದ ಭಾಗವಾಗಿ ರನ್‌ವೇ, ವಿಮಾನ ನಿಲ್ದಾಣ ಟರ್ಮಿನಲ್ ಕಟ್ಟಡ ಟ್ಯಾಕ್ಸಿವೇ ನಿರ್ಮಿಸಲಾಗುವುದು.  ಈ ಹಂತ ಮುಗಿದ ಕೂಡಲೇ ನಾವು ಕಮರ್ಷಿಯಲ್ ಕಾರ್ಯಾಚರಣೆ ಪ್ರಾರಂಭಿಸಬಹುದು, ”ಎಂದು ಅವರು ಹೇಳಿದರು. "70 ಪ್ರಯಾಣಿಕರ ಆಸನ ಸಾಮರ್ಥ್ಯ ಹೊಂದಿರುವ ಎಟಿಆರ್ -72 ಮಾದರಿಯ ವಿಮಾನಗಳ ಕಾರ್ಯಾಚರಣೆ ತದನಂತರದಲ್ಲಿ  ಪ್ರಾರಂಭವಾಗಬಹುದು" ಎಂದು ಅವರು ವಿವರಿಸಿದ್ದಾರೆ.

125 ಕೋಟಿ ರೂ.ಗಳ ವೆಚ್ಚದ ಎರಡನೇ ಹಂತವು ಕಾರ್ಯಾಚರಣೆ ಪ್ರಾರಂಭವಾದ ನಂತರ ಜಾರಿಗೆ ತರಲಾಗುವುದು ಎಂದುಉಪಮುಖ್ಯಮಂತ್ರಿ ಹೇಳಿದ್ದಾರೆ.

ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ) ಯೊಂದಿಗೆ ಈ ಯೋಜನೆಯನ್ನು ನೋಡಲ್ ಏಜೆನ್ಸಿ ಮಾದರಿಯಲ್ಲಿ ನಿರ್ವಹಿಸುತ್ತಿದೆ. ಇದನ್ನು ರಾಜ್ಯ ಲೋಕೋಪಯೋಗಿ ಇಲಾಖೆ ಜಾರಿಗೆ ತರಲಿದೆ.

 “ವಿಮಾನ ನಿಲ್ದಾಣವು ಸ್ಥಾಪನೆಯಾದ ಬಳಿಕ ಈ ಪ್ರದೇಶವು ಕೈಗಾರಿಕೆ ಮತ್ತು ಪ್ರವಾಸೋದ್ಯಮದಲ್ಲಿ ವೇಗವಾಗಿ ಅಭಿವೃದ್ಧಿಯನ್ನು ಕಾಣುತ್ತದೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ” ಎಂದು ಅಧಿಕಾರಿಯೊಬ್ಬರು ಹೇಳಿದರು. "ಈಗ ಯೋಜಿಸಲಾದ ರನ್ ವೇ  1900 ಮೀ ಉದ್ದಕ್ಕೆ ಇರಲಿದೆ.  ವಿಮಾನ ನಿಲ್ದಾಣವು ಸಿದ್ಧವಾದಾಗ ಗರಿಷ್ಠ ಸಮಯದಲ್ಲಿ ಸುಮಾರು 200 ಪ್ರಯಾಣಿಕರನ್ನು ನಿಭಾಯಿಸಬಲ್ಲದು. ಭವಿಷ್ಯದಲ್ಲಿ ಬೇಡಿಕೆಗೆ ಅನುಗುಣವಾಗಿ ದೊಡ್ಡ ವಿಮಾನಗಳನ್ನು (ಬೋಯಿಂಗ್ 737 / ಏರ್‌ಬಸ್ ಎ 320) ನಿರ್ವಹಿಸಲು  ನಿಲ್ದಾಣದ ಸಾಮರ್ಥ್ಯ ವಿಸ್ತರಣೆ ಮಾಡಲಾಗುತ್ತದೆ. "

ಇದು ಪ್ರಾದೇಶಿಕ ಸಂಪರ್ಕ ಯೋಜನೆ (ಉಡಾನ್) ಅಡಿಯಲ್ಲಿ ವಾಯುಯಾನ ಸೇವೆ ಒದಗಿಸಲಿದೆ. ವಿಮಾನ ನಿಲ್ದಾಣ ಯೋಜನೆಯನ್ನು ಮೊದಲಿಗೆ ಗೆ ಮಾರ್ಚ್ 2007 ರಲ್ಲಿ ರಾಜ್ಯ ಸರ್ಕಾರವು ಅಂಗೀಕರಿಸಿತು ಆದರೆ ಹಲವಾರು ಅಡೆತಡೆಗಳ ಪರಿಣಾಮ 2012 ರಲ್ಲಿ ಯೋಜನೆಯು ಸ್ಥಗಿತಗೊಂಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT