ರಾಜ್ಯ

ವೀಡಿಯೋ ಕಾಲ್ ಮೂಲಕ ಶೀಘ್ರವೇ ಪಾಸ್ ಪೋರ್ಟ್ ಸಂದರ್ಶನ

Shilpa D

ಬೆಂಗಳೂರು: ನಗರದಾದ್ಯಂತ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಸಂಖ್ಯೆ ಕಡಿಮೆಯಾಗಿದ್ದು, ಸುರಕ್ಷತೆ ದೃಷ್ಟಿಯಿಂದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಕೋರಮಂಗಲದಲ್ಲಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ನಿರ್ಧಾರ ಮಾಡಿದೆ. ವಿಡಿಯೋ ಕಾಲ್ ಮೂಲಕ ಶೀಘ್ರವೇ ಸಂದರ್ಶನ ಕರೆಯಲಿದೆ.

ಈಗಾಗಲೇ ಹಲವು ಮಂದಿಗೆ ದೂರವಾಣಿ ಕರೆ ಮೂಲಕ ಆನ್ ಲೈನ್ ಅಪಾಯಿಂಟ್ ಮೆಂಟ್ ನೀಡಿದ್ದೇವೆ,  ಇನ್ನು ಕೆಲವೇ ದಿನಗಳಲ್ಲಿ ವಿಡಿಯೋ ಕಾಲ್ ಮೂಲಕ ಸಂದರ್ಶನ ತೆಗೆದುಕೊಳ್ಳಲಿವೆ, ಇದರಿಂದ ಅಗತ್ಯವಿರುವ ದಾಖಲಾತಿಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. 

ಮಾರತ್ ಹಳ್ಳಿ, ಲಾಲ್ ಬಾಗ್ ನಲ್ಲಿರುವ ಪಾಸ್ ಪೋರ್ಟ್ ಸೇವಾ ಕೇಂದ್ರ ಕಚೇರಿಗಳು ಕಡ್ಡಾಯವಾಗಿ ದೈಹಿಕ ಹಾಜರಿ ಕೇಳುತ್ತವೆ, ಜೊತೆಗೆ ಬಯೋಮೆಟ್ರಿಕ್ ಸ್ಕ್ಯಾನಿಂಗ್ ಪಿಕ್ಚರ್ ಕೇಳುತ್ತದೆ. ಆದರೆ ಕೋರ ಮಂಗಲದಲ್ಲಿರುವ ಪ್ರಧಾನ ಕಚೇರಿಯಲ್ಲಿ ಇದನ್ನು ಕೇಳುವುದಿಲ್ಲ. ಹೀಗಾಗಿ ವಿಡಿಯೋ ಕಾಲ್ ಅವಕಾಶ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.

ಕೋರಮಂಗಲದಲ್ಲಿ ನಾವು ಸರಾಸರಿ 100 ಪಾಸ್‌ಪೋರ್ಟ್ ಅರ್ಜಿಗಳನ್ನು ಸ್ವೀಕರಿಸಿದ್ದೇವೆ, ಕ್ರಿಮಿನಲ್ ರೆಕಾರ್ಡ್, ದತ್ತು ಮಕ್ಕಳು ಸಿಂಗಲ್ ಪೇರೆಂಟ್ ನಂತಹ ವಿವಾದಾತ್ಮಕ   ಪಾಸ್ ಪೋರ್ಟ್ ಅರ್ಜಿಗಳು ಇವಾಗಿವೆ. ಅವರಿಗೆ ಪಾಸ್ ಪೋರ್ಟ್ ನೀಡಬೇಕಾದರೇ ಅವರ ಸಂಪೂರ್ಣ ಮಾಹಿತಿ ನಮಗೆ ಅಗತ್ಯವಿರುತ್ತದೆ. ಸಾಮಾನ್ಯ ಅಭ್ಯರ್ಥಿಗಳಂತೆ ಅವರಿಗೆ ಸುಲಭವಾಗಿ ಪಾಸ್ ಪೋರ್ಟ್ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಲ್ಲಾ ನೌಕರರು ಆರೋಗ್ಯ ಸೇತು ಆ್ಯಪ್ ಸ್ಥಾಪಿಸುವುದನ್ನು ಕಡ್ಡಾಯಗೊಳಿಸುವುದರ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಪ್ಲಿಕೇಶನ್‌ನಲ್ಲಿನ ಆರೋಗ್ಯ ಸ್ಥಿತಿ ‘ಸುರಕ್ಷಿತ’ ಅಥವಾ ‘ಕಡಿಮೆ ಅಪಾಯ’ ತೋರಿಸಿದರೆ, ಸಿಬ್ಬಂದಿಯನ್ನು ಕೆಲಸ ಮಾಡಲು ಅನುಮತಿಸಬಹುದು, ಆದರೆ ಅಪ್ಲಿಕೇಶನ್ ಮಧ್ಯಮ ಅಪಾಯವನ್ನು ತೋರಿಸಿದರೆ, ನಾವು ಸಿಬ್ಬಂದಿಗಳನ್ನು ಮನೆಗೆ ಕಳುಹಿಸಬೇಕಾಗಿದೆ. ನಮ್ಮ ಕೆಲವು ಸಿಬ್ಬಂದಿಗಳು ಸಹ ಈ ಕಾರಣದಿಂದಾಗಿ ಕೆಲಸ ಮಾಡಲು ವರದಿ ಮಾಡಲು ಸಾಧ್ಯವಿಲ್ಲ, ಮತ್ತು ಇದು ನಮ್ಮ ಕೆಲಸದ ಮೇಲೂ ಪರಿಣಾಮ ಬೀರಿದೆ, ”ಎಂದು ಅವರು ಹೇಳಿದ್ದಾರೆ.

"ನಾವು ಇನ್ನೂ ಅಗತ್ಯವಾದ ಮೂಲಸೌಕರ್ಯಗಳನ್ನು ಸ್ಥಾಪಿಸುತ್ತಿದ್ದೇವೆ. ಈ ಸಂವಾದಗಳನ್ನು ನಿರ್ವಹಿಸಲು ಕೆಲವು ಸಿಬ್ಬಂದಿಗಳಿಗೆ ಟ್ಯಾಬ್‌ಗಳನ್ನು ನೀಡಲಾಗುವುದು. ನಾವು ಬಳಸುವ ನಿರ್ದಿಷ್ಟ ಸಾಫ್ಟ್‌ವೇರ್ ಅನ್ನು ಇನ್ನೂ ನಿರ್ಧರಿಸಲಾಗುತ್ತಿದೆ ಎಂದು ಹೇಳಿದ್ದಾರೆ,
 

SCROLL FOR NEXT