ರಾಜ್ಯ

ಕೊಪ್ಪಳ ಮೆಡಿಕಲ್ ಕಾಲೇಜು ದಿನಕ್ಕೆ ಸಾವಿರ ಕೋವಿಡ್ ಪರೀಕ್ಷೆ ಮುೂಲಕ ಅನುಕರಣೀಯ ಸಾಧನೆ-ಡಾ.ಕೆ.ಸುಧಾಕರ್ 

Nagaraja AB

ಬೆಂಗಳೂರು: ಕೊಪ್ಪಳ ಮೆಡಿಕಲ್ ಕಾಲೇಜು ಕೆಲ ಕುಂದು ಕೊರತೆಗಳ ಹೊರತಾಗಿಯೂ ದಿನಕ್ಕೆ 1000 ಕೋವಿಡ್ ಪರೀಕ್ಷೆಗಳನ್ನು
 ನಡೆಸುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಅನುಕರಣೀಯ ಸಾಧನೆ ಹಿಂದಿರುವ ಎಲ್ಲಾ  ಸಿಬ್ಬಂದಿಗಳಿಗೂ ಅಭಿನಂದನೆ ಸಲ್ಲಿಸುವುದಾಗಿ ಸಚಿವರು ಟ್ವೀಟ್ ಮಾಡಿದ್ದಾರೆ.

ನೆರೆಯ ಬಳ್ಳಾರಿ ಮತ್ತು  ರಾಯಚೂರು ಜಿಲ್ಲೆಗಳಲ್ಲಿಯೂ ಇದೇ ರೀತಿ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಲು ಮಾರ್ಗದರ್ಶನ ನೀಡುವಂತೆ  ಮನವಿ  ಮಾಡಿರುವುದಾಗಿ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

SCROLL FOR NEXT