ರಾಜ್ಯ

ಸಿವಿಲ್ ಪೊಲೀಸ್ ವಾರ್ಡನ್ ಹುದ್ದೆಗೆ ಒಂದೇ ದಿನದಲ್ಲಿ 8,000 ಅರ್ಜಿಗಳು: ಪೊಲೀಸ್ ಆಯುಕ್ತರ ಕರೆಗೆ ಉತ್ತಮ ಪ್ರತಿಕ್ರಿಯೆ

Manjula VN

ಬೆಂಗಳೂರು: ಲಾಕ್ಡೌನ್ ವೇಳೆ ಪೊಲೀಸ ಜೊತೆಗೆ ಕೈಜೋಡಿಸುವಂತೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ನೀಡಿದ್ದ ಕರೆಗೆ ಸಾರ್ವಜನಿಕ ವಲಯದಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಒಂದೇ ದಿನದಲ್ಲಿ ಸಿವಿಲ್ ಪೊಲೀಸ್ ವಾರ್ಡನ್ ಹುದ್ದೆಗೆ ಬರೋಬ್ಬರಿ 8,000 ಮಂದಿ ಅರ್ಜಿ ಸಲ್ಲಿಸಿದ್ದಾರೆ. 

ರಾಜ್ಯದಲ್ಲಿ ಕೊರೋನಾ ಆರ್ಭಟ ಹೆಚ್ಚಾಗಿದ್ದು, ಸಾಕಷ್ಟು ಪೊಲೀಸರು ಸೋಂಕಿನಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರು, ಲಾಕ್ಡೌನ್ ನಿರ್ವಹಣೆ ಕೆಲಸಗಳಿಗೆ ಸ್ವಯಂ ಸೇವಕರ ನೇಮಕಕ್ಕೆ ಚಿಂತನೆ ನಡೆಸಿದ್ದರು. ಇದಕ್ಕಾಗಿ ವೆಬ್'ಸೈಟ್ ನಲ್ಲಿ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿಕೊಂಡಿದ್ದರು. 

ಈ ಮನವೆಗೆ ಸ್ಪಂದನೆ ನೀಡಿರುವ 8000 ಜನರು ಸ್ವಯಂ ಸೇವಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಇವುದನ್ನು ಪರಿಶೀಲಿಸಿ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

SCROLL FOR NEXT