ಮೊಬೈಲ್ ಲ್ಯಾಬ್ 
ರಾಜ್ಯ

ಮನೆ ಬಾಗಿಲಲ್ಲಿ ಕೋವಿಡ್-19 ಟೆಸ್ಟಿಂಗ್ ಗಾಗಿ ಮೊಬೈಲ್ ಲ್ಯಾಬ್: ಕೆಲಸ ನಿರ್ವಹಿಸದ ಸಹಾಯವಾಣಿ

ಲಾಕ್ ಡೌನ್ ಸಂದರ್ಭದಲ್ಲಿ ಬಿಬಿಎಂಪಿ ವ್ಯಾಪ್ತಿಯ ಹಿರಿಯ ನಾಗರೀಕರು, ಕೋ-ಮೋರ್ಬಿಡ್ ಅಸ್ವಸ್ಥರು, ರೋಗಲಕ್ಷಣ ಇರುವ ಪ್ರಾಥಮಿಕ ಸಂಪರ್ಕದವರು ತಮ್ಮ ವಲಯದಲ್ಲಿ ಕಾರ್ಯವಹಿಸುವ ಮೊಬೈಲ್ ಟೆಸ್ಟಿಂಗ್ ವಾಹನಕ್ಕೆ ಕರೆ ಮಾಡಿ ಮನೆ ಬಾಗಿಲಲ್ಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬಹುದು. 

ಬೆಂಗಳೂರು: ಲಾಕ್ ಡೌನ್ ಸಂದರ್ಭದಲ್ಲಿ ಬಿಬಿಎಂಪಿ ವ್ಯಾಪ್ತಿಯ ಹಿರಿಯ ನಾಗರೀಕರು, ಕೋ-ಮೋರ್ಬಿಡ್ ಅಸ್ವಸ್ಥರು, ರೋಗಲಕ್ಷಣ ಇರುವ ಪ್ರಾಥಮಿಕ ಸಂಪರ್ಕದವರು ತಮ್ಮ ವಲಯದಲ್ಲಿ ಕಾರ್ಯವಹಿಸುವ ಮೊಬೈಲ್ ಟೆಸ್ಟಿಂಗ್ ವಾಹನಕ್ಕೆ ಕರೆ ಮಾಡಿ ಮನೆ ಬಾಗಿಲಲ್ಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬಹುದು. 

ಹೀಗಾಗಿ ವಲಯವಾರು ಸಹಾಯವಾಣಿ ಸ್ಥಾಪಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆ ಕೋರಿದೆ. 

ವಲಯವಾರು ಸಹಾಯವಾಣಿ ಸಂಖ್ಯೆಗಳು : 
ಯಲಹಂಕ- 080-28560696/ 8792032820/5180 
ಮಹದೇವಪುರ- 080-23010101/102, 
ಬೊಮ್ಮನಹಳ್ಳಿ- 8548883334/ 897000222‌8,  
ಆರ್ ಆರ್ ನಗರ- 080-2600208 
ದಕ್ಷಿಣ ವಲಯ- 7022724772, 
ಪೂರ್ವ ವಲಯ -9900094042, 
ಪಶ್ಚಿಮ ವಲಯ 080-68248454/ 7204179723 

ಮನೆಯಲ್ಲಿಯೇ ಪ್ರತ್ಯೇಕತೆ ಕಾಪಾಡಿಕೊಂಡು ಕೋವಿಡ್ ಸೋಂಕು ಹರಡದಂತೆ ಎಚ್ಚರಿಕೆವಹಿಸಬೇಕು.ಮುಂಜಾಗ್ರತಾ ಕ್ರಮವಾಗಿ ಗಂಟಲು ದ್ರವ( ಸ್ವ್ಯಾಬ್) ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿರುವ ಯಾವುದೇ ವ್ಯಕ್ತಿ ಫಲಿತಾಂಶ ಲಭ್ಯವಾಗುವವರೆಗೆ ಮನೆ ಯಲ್ಲೇ ಪ್ರತ್ಯೇಕತೆ (ಐಸೋಲೇಷನ್) ಅನ್ನು ಕಾಯ್ದುಕೊಳ್ಳಬೇಕು.ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಅವರಿಗೆ ಸಾಂಕ್ರಾಮಿಕ ರೋಗ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುವುದು.

ಆಪ್ತಮಿತ್ರ-ಕೋವಿಡ್- 19 ಸಹಾಯವಾಣಿ, ಟೆಲಿಮೆಡಿಸಿನ್ ಮತ್ತು ಆಸ್ಪತ್ರೆಗೆ ಉಲ್ಲೇಖಿಸಲು-14410, ಆಂಬುಲೆನ್ಸ್ ಸೇವೆಗೆ -108 ,ಆಸ್ಪತ್ರೆ ನಿರಾಕರಣೆ ಸಂಬಂಧದ ಕೊಂದು ಕೊರತೆಗಾಗಿ-1912, ಸಾಮಾನ್ಯ ಆರೋಗ್ಯ ಸಮಸ್ಯೆ ಕುರಿತ ಮಾಹಿತಿಗಾಗಿ -104 ಸಂಖ್ಯೆಗಳಿಗೆ ಸಾರ್ವಜನಿಕರು ಕರೆ ಮಾಡಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. 

ಆದರೆ ನಗರದ ಕೆಲವು ಭಾಗಗಳಲ್ಲಿ ಸಹಾಯವಾಣಿಗೆ,ಆ್ಯಂಬುಲೆನ್ಸ್ ಗಳಿಗೆ,ಆರೋಗ್ಯಾಧಿಕಾರಿಗಳಿಗೆ ಶಂಕಿತ ಸೋಂಕಿತರು ಕರೆ ಮಾಡಿದರೂ ಇಲಾಖೆ ಅಧಿಕಾರಿಗಳಾಗಲೀ,ಆ್ಯಂಬುಲೆನ್ಸ್ ಗಳಾಗಲೀ ಬರುತ್ತಿಲ್ಲವೆಂಬ ಆರೋಪವಿದೆ.ಸಹಾಯವಾಣಿಗೆ ಕರೆ ಮಾಡಿದರೆ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲವೆಂದು ಸಾರ್ವಜನಿಕರು ದೂರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

SCROLL FOR NEXT